ವಿಜಯಪುರ(ಜು.13): ಸಂಡೇ ಲಾಕ್‌​ಡೌನ್‌ ಮಧ್ಯೆಯೇ ಕ್ವಾರಂಟೈನ್‌ ಸೀಲ್‌ ಹೊಂದಿರುವ ಪಶ್ಚಿಮ ಬಂಗಾಳದ 14 ಕಾರ್ಮಿಕರು ವಿಜಯಪುರ ನಗ​ರಕ್ಕೆ ಬಂದಿ​ದ್ದರಿಂದ ನಗರ ನಿವಾಸಿಗಳಿಗೆ ಆತಂಕ ಮೂಡಿಸಿದ ಘಟನೆ ನಡೆದಿದೆ. 

ಪಶ್ಚಿಮ ಬಂಗಾಳದಿಂದ ಮುಂಬೈ ಮಾರ್ಗವಾಗಿ ವಿಜಯಪುರಕ್ಕೆ ಬಂದಿ​ಳಿದ ಕಾರ್ಮಿಕರು ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗುಂಪುಗೂಡಿ ನಿಂತಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಿಸಿ​ದಾಗ ವಿದ್ಯುತ್‌ ಕಾಮಗಾರಿಗಾಗಿ ಗುತ್ತಿಗೆದಾರರೊಬ್ಬರು ಇಲ್ಲಿಗೆ ಕರೆಸಿಕೊಂಡಿದ್ದಾರೆಂದು ತಿಳಿಸಿದ್ದಾರೆ. 

ಪಿಪಿಇ ಕಿಟ್ ಧರಿಸಿ ಓಡಾಡುತ್ತಿರುವ ಮಾನಸಿಕ ಅಸ್ವಸ್ಥ; ಸಾರ್ವಜನಿಕರಿಗೆ ಆತಂಕವೂ ಆತಂಕ..!

ನಂತರ ಗುತ್ತಿಗೆದಾರನನ್ನು ಪತ್ತೆ ಹಚ್ಚಿ ಅವರ ಉಸ್ತುವಾರಿಯಲ್ಲಿ 14 ಜನ ಕಾರ್ಮಿಕರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾ​ಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆ​ಸಿ​ದರು.