ತುಮಕೂರು(ಫೆ.18): ಮೊಬೈಲ್ ಕಾಣೆಯಾಗಿದ್ದಕ್ಕೆ ಪೋಷಕರು ಬೈದರೆಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಪೋಷಕರು ಬೈದಿದ್ದಕ್ಕೆ 9ನೇತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೋಷಕರು ಬೈದರು ಎಂಬ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆ‌‌ ಮಾಡಿಕೊಂಡಿದ್ದು, ಸುಮಿತ್(14) ಮೃತ ವಿದ್ಯಾರ್ಥಿ. ಸುಮಿತ್‌ ಮನೆಯಲ್ಕಿದ್ದ ಮೊಬೈಲ್ ಕಳೆದಿದ್ದ. ತುಮಕೂರು ನಗರದ ಅರಳಿಮರದ ಪಾಳ್ಯದಲ್ಲಿ ಘಟನೆ ನೆಡದಿದೆ.

ಗುದನಾಳದಲ್ಲಿ 58 ಲಕ್ಷ ಮೌಲ್ಯದ ಚಿನ್ನ ಸಾಗಾಟ

ಮೊಬೈಲ್ ಕಳೆದಿದ್ದೀಯ ಎಂದು ಪೋಷಕರು ಬೈದಿದ್ದರು. ಕಾಳಿದಾಸ ಶಾಲೆಯಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸುಮಿತ್ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ