‘ಹಲೋ ಮಿನಿಸ್ಟರ್’ ನಲ್ಲಿ ಜನರ ಸಮಸ್ಯೆಗಳಿಗೆ ಕಿವಿಯಾದ ಖಾದರ್

‘ಹಲೋ ಮಿನಿಸ್ಟರ್’ಕಾರ್ಯಕ್ರಮದಲ್ಲಿ ಖಾದರ್

ಜನರ ಸಮಸ್ಯೆ ಆಲಿಸಿದ ವಸತಿ ಮತ್ತು ನಗರಾಭಿವೃದ್ಧಿ ಸಚಿವ

ಸಚಿವರಿಂದ ಬಾಲ್ಯದ ದಿನಗಳ ನೆನಪು ಮೆಲಕು

ಬಾಲ್ಯದ ಗೆಳೆಯರ ಜೊತೆ ಖಾದರ್ ಹರಟೆ   

First Published Jul 29, 2018, 5:11 PM IST | Last Updated Jul 30, 2018, 12:16 PM IST

ಬೆಂಗಳೂರು(ಜು.29): ನಿಮ್ಮ ಸುವರ್ಣನ್ಯೂಸ್ ನ ಜನಪ್ರಿಯ ಕಾರ್ಯಕ್ರಮ ‘ಹಲೋ ಮಿನಿಸ್ಟರ್’ದಲ್ಲಿ ಶನಿವಾರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಉಪಸ್ಥಿತರಿದ್ದರು.

ಜನಸಾಮಾನ್ಯರ ತೊಂದರೆಗಳ ಕುರಿತು ನೇರವಾಗಿ ಅವರ ಜೊತೆಯೇ ಮಾತನಾಡಿದ ಸಚಿವರು, ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನ ಮಾಡಲಾಗುವುದು ಎಂದು ಜನತೆಗೆ ಭರವಸೆ ಕೂಡ ನೀಡಿದ್ದಾರೆ.

ಈ ವೇಳೆ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಸಚಿವ ಖಾದರ್ ತಮ್ಮ ಬಾಲ್ಯದ ದಿನಗಳು, ಸ್ನೇಹಿತರು, ರಾಜಕಾರಣ ಜೀವನ ಮುಂತಾದ ವಿಷಯಗಳ ಕುರಿತೂ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಖಾದರ್ ಕುರಿತು ಅವರ ಬಾಲ್ಯದ ಗೆಳೆಯರು ಏನಂತಾರೆ?. ಸಚಿವರಾದ ಮೇಲೆ ಇಲಾಖೆಯ ಜವಾಬ್ದಾರಿಯನ್ನು ಖಾದರ್ ಹೇಗೆ ನಿಭಾಯಿಸುತ್ತಾರೆ ಮುಂತಾದ ವಿಷಯಗಳು ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.