ಬಾಗಲಕೋಟೆ ಜಿಲ್ಲಾ ಉಸ್ತುವಾರಿ ತಿಮ್ಮಾಪೂರಗೆ ಹಲವು ಸವಾಲು..!

ಬಾಗಲಕೋಟೆ ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದ ಶಾಸಕರಾಗಿರುವ, ಸದ್ಯ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿರುವ ಆರ್‌.ಬಿ.ತಿಮ್ಮಾಪೂರ ಅವರಿಗೆ ಬಾಗಲಕೋಟೆ ಜಿಲ್ಲೆ ಅಪರಿಚಿತವೇನಲ್ಲ. ಆದರೆ ಜಿಲ್ಲೆಯಲ್ಲಿನ ಶಾಸಕರನ್ನು, ಸಂಸದ, ಪರಿಷತ್‌ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವೇ ಎಂಬುದು ಜನತೆಯನ್ನು ಕಾಡುತ್ತಿದೆ.

Many Challenges for Bagalkot District in-charge RB Timmapur grg

ಈಶ್ವರ ಶೆಟ್ಟರ

ಬಾಗಲಕೋಟೆ(ಜೂ.10): ಬಾಗಲಕೋಟೆ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಆರ್‌.ಬಿ.ತಿಮ್ಮಾಪೂರ ಅವರು ನೇಮಕವಾಗುವ ಮೂಲಕ ಈವರೆಗೆ ಇದ್ದ ಉಹಾಪೋಹಗಳಿಗೆ ತೆರೆ ಎಳೆಯುವಲ್ಲಿ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ. ಇದಲ್ಲದೆ, ಸದಾ ಹಲವು ಸಮಸ್ಯೆಗಳ ನಡುವೆ ಇರುವ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ನೂತನ ಉಸ್ತುವಾರಿ ಸಚಿವರು ಯಶಸ್ವಿಯಾಗುವರೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಇದರ ಜತೆಗೆ ಜಿಲ್ಲೆಯವರೆ ಜಿಲ್ಲಾ ಉಸ್ತುವಾರಿ ಆಗಿರುವುದು ಕೂಡ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುತ್ತಾರೆ ಎಂಬ ಆಶಯ ಕೂಡ ವ್ಯಕ್ತವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದ ಶಾಸಕರಾಗಿರುವ, ಸದ್ಯ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿರುವ ಆರ್‌.ಬಿ.ತಿಮ್ಮಾಪೂರ ಅವರಿಗೆ ಬಾಗಲಕೋಟೆ ಜಿಲ್ಲೆ ಅಪರಿಚಿತವೇನಲ್ಲ. ಆದರೆ ಜಿಲ್ಲೆಯಲ್ಲಿನ ಶಾಸಕರನ್ನು, ಸಂಸದ, ಪರಿಷತ್‌ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವೇ ಎಂಬುದು ಜನತೆಯನ್ನು ಕಾಡುತ್ತಿದೆ.

ಬಾಗಲಕೋಟೆ: ಬೈಕ್‌, ಕತ್ತೆಗಳ ಮೂಲಕ ಮರಳು ಸಾಗಣೆ..!

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಭಾವಿ ಶಾಸಕರು ಕೂಡ ಇದ್ದಾರೆ. ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿ ಸದ್ಯ ಹಾಲಿ ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಇದ್ದಾರೆ. ಅಂತಹವರ ವಿಶ್ವಾಸ ಗಳಿಸಿಕೊಂಡು ಜಿಲ್ಲೆಯಲ್ಲಿ ಸಮರ್ಥ ಆಡಳಿತಕ್ಕೆ ಬೇಕಾದ ಅ​ಧಿಕಾರಿಗಳ ತಂಡವನ್ನು ಕಟ್ಟಿಕೊಂಡು ಕಾರ್ಯನಿರ್ವಹಿಸುವ ಅನಿವಾರ್ಯತೆ ತಿಮ್ಮಾಪೂರ ಅವರ ಹೆಗಲ ಮೇಲಿದೆ.

1999-2004ರ ಅವಧಿ​ಯಲ್ಲಿನ ಎಸ್‌.ಎಂ.ಕೃಷ್ಣಾ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದ್ದರು ತಿಮ್ಮಾಪೂರ. ಅಲ್ಲದೆ, ಅಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಮುಖ ಭಾಗವಾದ ಆಲಮಟ್ಟಿಜಲಾಶಯದಲ್ಲಿ 519.6 ಮೀ. ನೀರನ್ನು ಸಂಗ್ರಹಿಸಿದಾಗ ಬಾಗಲಕೋಟೆ ನಗರ ಸೇರಿದಂತೆ ಕೃಷ್ಣಾ ನದಿ ತೀರದ ಸಂತ್ರಸ್ತರ ಪುನರ್‌ವಸತಿ ಸಂದರ್ಭವನ್ನು ಬಾಗಲಕೋಟೆ ಉಸ್ತುವಾರಿ ಸಚಿವರಾಗಿ ಯಶಸ್ವಿಯಾಗಿ ನಿಭಾಯಿಸಿದ ಅನುಭವ ಅವರಿಗಿದೆ. ಆದರೆ ಸಮನ್ವಯತೆಯನ್ನು ಸಾಧಿ​ಸುವುದು ಅವರಿಗೆ ಸದ್ಯದ ಸವಾಲೆಂದರೆ ತಪ್ಪಾಗಲಾರದು.

ಪರಿಹಾರಕ್ಕೆ ಆದ್ಯತೆ ನೀಡಲಿ:

ಬಾಗಲಕೋಟೆ ಜಿಲ್ಲೆಯಲ್ಲಿ ಸಮಸ್ಯೆಗಳು ಹತ್ತು ಹಲವಾರಿವೆ. ಅದರಲ್ಲಿ ಪ್ರಮುಖವಾಗಿ ಇರುವುದೇ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆಯಿಂದ ಉಂಟಾದ ಹಾಗೂ ಉಂಟಾಗಲಿರುವ ಪುನರ್‌ವಸತಿ ಹಾಗೂ ಪುನರ್‌ ನಿರ್ಮಾಣ ಕಾರ್ಯ. ಸದಾ ಕಾಲ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ತೀರಗಳ ಗ್ರಾಮಗಳಲ್ಲಿ ಕಾಣಿಸಿಕೊಳ್ಳುವ ಪ್ರವಾಹಕ್ಕೆ ಶಾಶ್ವತ ಪರಿಹಾರ ಹುಡುಕುವುದು ಪ್ರಮುಖವಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆ, ಬಂದಾಗಿರುವ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭದತ್ತ ಯೋಚನೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಐತಿಹಾಸಿಕ ತಾಣಗಳ ಅಭಿವೃದ್ಧಿ, ಬಾಗಲಕೋಟೆ ಜಿಲ್ಲೆಗೆ ವೈದ್ಯಕೀಯ ಕಾಲೇಜು ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಜೀವಂತವಾಗಿವೆ.

ಇಷ್ಟೊಂದು ಸಮಸ್ಯೆಗಳಿರುವ ಬಾಗಲಕೋಟೆ ಜಿಲ್ಲೆಗೆ ಉಸ್ತುವಾರಿಯಾಗಿ ಬರುವವರು ಕೇವಲ ಸಭೆಯ ನೆಪದಲ್ಲಿ ಬಂದು ಹೋಗುವ ಹೋದ ಪುಟ್ಟ, ಬಂದ ಪುಟ್ಟಅನ್ನುವ ರೀತಿಯಲ್ಲಿ ಈವರೆಗೆ ನಡೆದಿದೆ. ಬಂದ ಉಸ್ತುವಾರಿ ಸಚಿವರೆಲ್ಲ ಧ್ವಜಾರೋಹಣ, ನೆಪಮಾತ್ರದ ಸಭೆಗಳನ್ನು ಮಾಡುವುದನ್ನು ಬಿಟ್ಟರೆ ಸಮಸ್ಯೆಗಳ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಶಾಶ್ವತ ಪರಿಹಾರ ಹುಡುಕುವ ಪ್ರಯತ್ನವನ್ನು ಈವರೆಗೆ ಮಾಡಿಲ್ಲ. ಹೀಗಾಗಿ ಉಸ್ತುವಾರಿ ಸಚಿವರ ನೇಮಕ ಕೇವಲ ಅ​ಧಿಕಾರಿ ವಲಯದಲ್ಲಿನ ಸ್ಥಾನ ಪಲ್ಲಟದ ರೀತಿಯಲ್ಲಿ ಕಾಣುತ್ತಿದೆ. ಇದು ಹಾಗಾಗಬಾರದು ಎಂಬುದು ಜಿಲ್ಲೆಯ ಜನತೆಯ ಆಶಯವಾಗಿದೆ.

ಬಾಗಲಕೋಟೆ: ಬಾರದ ಮುಂಗಾರು ಕೃಷ್ಣಾ, ಮಲಪ್ರಭಾ & ಘಟಪ್ರಭಾ ನದಿಗಳ ಒಡಲು ಖಾಲಿ ಖಾಲಿ!

ಒಟ್ಟಾರೆ ಹೊಸದಾಗಿ ನೇಮಕಗೊಂಡಿರುವ ಜಿಲ್ಲೆಯವರೇ ಆದ ಉಸ್ತುವಾರಿ ಸಚಿವರಾದ ಆರ್‌.ಬಿ.ತಿಮ್ಮಾಪೂರ ಅವರು ತಿಂಗಳಲ್ಲಿ 4 ಬಾರಿಯಾದರೂ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಅಭಿವೃದ್ಧಿಗೆ ಸಂಬಂಧಿ​ಸಿದ ಸಭೆಗಳನ್ನು ನಡೆಸಿ, ಸಾರ್ವಜನಿಕರಿಂದ ಹಾಗೂ ತಜ್ಞರಿಂದ ಸಲಹೆ ಪಡೆದು ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಮಾಡಲಿ ಎಂಬುದು ಜನತೆಯ ಮಾತಾಗಿದೆ.

ಜಿಲ್ಲೆಯವರಿಗೆ ಆದ್ಯತೆ ನೀಡಿದ ಕಾಂಗ್ರೆಸ್‌

ಹಿಂದಿನ ಬಿಜೆಪಿ ಸರ್ಕಾರವು ಜಿಲ್ಲೆಯವರನ್ನು ಹೊರತುಪಡಿಸಿ ಬೇರೆ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿತ್ತು. ಹೀಗಾಗಿ ಉಮೇಶ ಕತ್ತಿ, ಸಿ.ಸಿ.ಪಾಟೀಲ ಉಸ್ತುವಾರಿ ಮಂತ್ರಿಗಳಾಗಿದ್ದರು. ಆದರೆ, ಈಗ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರಿಂದ ಜಿಲ್ಲೆಯವರನ್ನೇ ಆಯಾ ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಿದೆ.

Latest Videos
Follow Us:
Download App:
  • android
  • ios