ಉಡುಪಿ (ಡಿ.01):   ತನ್ನ ಸ್ವಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪಾಪಿ ತಂದೆಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜೀವನ ಪರ್ಯಂತ ಜೈಲು ಅನುಭವಿಸುವ ಕಠಿಣ ಶಿಕ್ಷೆ ನೀಡಿದೆ. 

ಹೆಬ್ರಿ ಠಾಣಾ ವ್ಯಾಪ್ತಿಯ ಈ ದುರಳನ ಪತ್ನಿ ಮಾನಸಿಕ ರೋಗಿಯಾಗಿದ್ದು, ಅದರ ಲಾಭವನ್ನು ಪಡೆದು ಆತ ತನ್ನ 14 ವರ್ಷದ ಕಿರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇದನ್ನು 16 ವರ್ಷದ ಹಿರಿಯ ಮಗಳು ವಿರೋಧಿಸಿದ್ದಳು. ಕೆಲಕಾಲ ಸುಮ್ಮನಿದ್ದ ಆತ, ಪತ್ನಿ ಮೃತರಾದ ಮೇಲೆ ಬಲವಂತವಾಗಿ ಇಬ್ಬರೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾರಂಭಿಸಿದ. ಈ ಬಗ್ಗೆ ಹಿರಿಯ ಮಗಳು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಗೆ ತಿಳಿಸಿದ್ದು, ಆಕೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದಿದ್ದರು. 

ಸೋಶಿಯಲ್ ಮೀಡಿಯಾ ಗುದ್ದಾಟ; ಕ್ಷುಲ್ಲಕ ಕಾರಣಕ್ಕೆ ಬಾಲಕ ಕೊಲೆಯಾದ .

ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.  

2019ರಲ್ಲಿ ನಡೆದ ಈ ಅಮಾನುಷ ಘಟನೆಯನ್ನು ವೃತ್ತ ನಿರೀಕ್ಷಕರಾದ  ಮಹೇಶ್‌ ಪ್ರಸಾದ್ ತನಿಖೆ ನಡೆಸಿದ್ದು, ಅವರ ವರ್ಗಾವಣೆ ನಂತರ ಬಂದ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಒಟ್ಟು 26 ಮಂದಿ ಸಾಕ್ಷಿಗಳ ಪೈಕಿ ಸಂತ್ರಸ್ತ ಸಹೋದರಿಯರು ಹಾಗೂ ದೂರುದಾರರು ಸೇರಿದಂತೆ 8 ಮಂದಿಯ ವಿಚಾರಣೆ ನಡೆಸಿದ, ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಯಾದವ್ ಆನಂದ ರಾವ್ ಅವರು,  ಆರೋಪಿ ತಂದೆ ನಡೆಸಿದ ಕೃತ್ಯ ಸಾಬೀತಾಗಿರುವುದನ್ನು ಮನಗಂಡು, ಈ ಜಿಲ್ಲೆಯಲ್ಲಿಯೇ ಇಂತಹ ಪ್ರಥಮ ನಾಚಿಕೆಗೇಡಿನ ಪ್ರಕರಣದಲ್ಲಿ ಕಠಿಣ ಶಿಕ್ಷೆಯ ಆದೇಶ ನೀಡಿದ್ದಾರೆ.