Asianet Suvarna News Asianet Suvarna News

ಈ ಕಪ್ಪೆಗಳು ಜಿಗಿಯೋದಿಲ್ಲ, ತೇಲುತ್ತವೆ, ಕುದುರೆ ‌ಮುಖ ಅಭಯಾರಣ್ಯದಲ್ಲಿ‌ ಮಲಬಾರ್‌ ಗ್ಲೈಡಿಂಗ್ ಫ್ರಾಗ್

ಕಪ್ಪೆಗಳು ತೇಲುತ್ತವೆ ಎಂದರೆ ನಂಬುತ್ತೀರಾ..? ಅರೆ ಕಪ್ಪೆಗಳು ಜಿಗಿಯುತ್ತವೆ ಎಂದು ನೀವು ಹೇಳಿದರೆ ಇಲ್ಲಿ ಕೇಳಿ. ತೇಲುವ ಕಪ್ಪೆಗಳೂ ಇವೆ. ಏನಿದು ವಿಶೇಷ..? ಇಲ್ಲಿ ಓದಿ.

Malabar gliding frog in Kudremukh forest
Author
Bangalore, First Published May 19, 2020, 10:00 AM IST

ಕಾರ್ಕಳ(ಮೇ 19): ಭಾರತದ ಪಶ್ಚಿಮಘಟ್ಟಗಳ ಬಹುತೇಕ ಪ್ರದೇಶಗಳಲ್ಲಿ, ಕಂಡುಬರುವ ರಾಕೊಫೋರಿಡೆ ಕುಟುಂಬದ ಒಂದು ಮರಗಪ್ಪೆಯ ಪ್ರಭೇದಗಳಲ್ಲಿ ಈ ಮಲಬಾರ್ ಗ್ಲೈಡಿಂಗ್ ಜಾತಿಯ ಕಪ್ಪೆ ಆತ್ಯಂತ ಪ್ರಸಿದ್ಧ ವಾಗಿದೆ.

ಇವುಗಳು ಕುದುರೆ ಮಖ ಪಶ್ಚಿಮಘಟ್ಟ ತಪ್ಪಲು ಪ್ರದೇಶ ಭಾಗದ ನಿತ್ಯ ಹರಿದ್ವರ್ಣ, ಎಲೆ ಉದುರುವ ಕಾಡುಗಳಲ್ಲಿ ಮರಗಳ ಮೇಲ್ಭಾಗದಲ್ಲಿ, ಹೆಚ್ಚಾಗಿ ಕಾಣಬಹುದಾಗಿದೆ.
ಪ್ರತಿಯೊಂದು ‌ಕಪ್ಪೆ ಪ್ರಬೇದಕ್ಕೂ ವಿಶಿಷ್ಟವಾದ ಬಣ್ಣ ಗುರುತುಗಳಿವೆ. ವಟರ್ ವಟರ್ ಎಂದು ಸದ್ದು ಮಾಡುವ ಕಪ್ಪೆಗಳ ಪರಿಚಯ ಅದೆಷ್ಟೋ ಮಂದಿಗೆ ಇದೆಯೋ ? ಗೊತ್ತಿಲ್ಲ. ಅದ್ರೆ ಗ್ರಾಮೀಣ ಪ್ರದೇಶ‌‌ ನಿವಾಸಿಗಳಿಗೆ ಕಪ್ಪೆಗಳ ಪರಿಚಯ ಅಂತು ಇದ್ದೇ‌‌ ಇರುತ್ತೆ.‌‌

ದನದ ಹಟ್ಟಿಯಲ್ಲಿ ಬೃಹತ್ ಹೆಬ್ಬಾವುಗಳು: ಹಿಡಿಯೋಕೋದ್ರೆ ಕೈಗೆ ಸುತ್ತಿತು!

ಒಂದು ಕಡೆಯಿಂದ ಮತ್ತೊಂದು ಕಡೆಗೆ ಬಹುತೇಕ ಕಪ್ಪೆಗಳು ಜಿಗಿದು ಕೊಂಡು ಸಂಚರಿದರೆ,ಈ ಅಪರೂಪದ ಮಲಬಾರ್ ಕಪ್ಪೆಗಳು ಮಾತ್ರ ತೇಲಿ ‌ಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಮ್ಮ ಪ್ರಯಾಣವನ್ನು ಬೆಳೆಸುವುದು ವಿಶೇಷ ವಾಗಿದೆ. ಇವುಗಳಿಗೆ ಉದ್ದವಾದ ಕಾಲುಗಳ ನಡುವೆ ಮತ್ತು ಉದ್ದಕ್ಕೂ ಚರ್ಮದ ಅಂಚುಗಳು, ಹಿಮ್ಮಡಿಯಲ್ಲಿ ತ್ರಿಕೋನ ಆಕಾರದಲ್ಲಿ ಚರ್ಮದ ವಿಸ್ತರಣೆಯಿಂದ ಕೂಡಿದ್ದು ಬೆರಳುಗಳು ಮತ್ತು ಕಾಲ್ಬೆರಳುಗಳ ನಡುವಿನ ವೆಬ್‌ಬಿಂಗ್ (ಚರ್ಮದ ಜಾಲ ) ರೂಪದ ಸಹಾಯದಿಂದ ಇವುಗಳು ಗಾಳಿಯಲ್ಲಿ ತೇಲಿ ಕೊಂಡು ಚಲಿಸುತ್ತದೆ.

15 ದಿನಗಳಲ್ಲಿ 11 ಕಾಡುಪ್ರಾಣಿಗಳ ಸಾವು: ಆತಂಕ

ಮಲಬಾರ್ ಗ್ಲೈಡಿಂಗ್ ಕಪ್ಪೆಗಳು ಬೆಳಗ್ಗೆ ‌ಹೊತ್ತಿನಲ್ಲಿ ಮರದ ಎಲೆಗಳ‌ ಮದ್ಯ ಭಾಗದಲ್ಲಿ ವಿಶ್ರಾಂತಿ ಪಡೆದು ರಾತ್ರಿ ಕಳೆದಂತೆ ಧರೆಗೆ ಇಳಿದು ತಮ್ಮ ಚಟುವಟಿಕೆ ನಿರತರಾಗುತ್ತವೆ. ಮರಗಳ ಮೇಲೆ ಕುಳಿತುಕೊಂಡ ಸಂದರ್ಭದಲ್ಲಿ ಯಾವುದೇ ಕಾಲ್ ಸದ್ದುಗಳನ್ನು ಮಾಡದೇ ಸ್ತಬ್ದವಾಗಿ ಕುಳಿತುಕೊಳ್ಳುತ್ತವೆ. ಇವುಗಳು‌‌‌ ದೇಹ ಗಾತ್ರವು ಸುಮಾರು 10 ಸೆ.ಮೀ.ಗಳವರೆಗೆ (4 ಇಂಚು) ಬೆಳೆಯುತ್ತದೆ.

ಅದರ ದೇಹವು ಹಚ್ಚ ಹಸಿರು ಬಣ್ಣ ಹಾಗೂ ಕಪ್ಪು ಹಾಗೂ ಬಿಳಿ ಚುಕ್ಕೆಗಳಿಂದ ಕೂಡಿದ್ದು ಅವುಗಳು ಕೂಗುವ ವೇಳೆ "ಕಟ್ ಕಟ್ ಕಟ್ ಕಟಾ ಕಟಾ ಕರ್ ಕರ್ ... " ಎಂದು ತಮ್ಮ ಉಪಸ್ಥಿತಿಯನ್ನು ತೋರ್ಪಡಿಸುತ್ತದೆ. ಇವುಗಳಲ್ಲಿ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿದೆ.

ಕಡಲ ತೀರದಲ್ಲಿ ಮುಳ್ಳು ಹಂದಿ ಮೀನು ಪತ್ತೆ

ತಂಪು ವಾತಾವರಣ‌ಗಳಲ್ಲಿ ಇವುಗಳು ವಾಸಿಸುತ್ತಿದ್ದು ಮಹಾರಾಷ್ಟ್ರದ ಅಂಬೋಲಿ, ಕುದುರೆ ಮುಖ, ಅಗುಂಬೆ , ಮಡಿಕೇರಿಯ ಕೂರ್ಗ್ , ಮುನ್ನಾರ್ ಪ್ರದೇಶಗಳಲ್ಲಿ ಕಾಣಬಹುದಾಗಿದೆ.

ಮಲಬಾರ್ ಗ್ಲೈಡಿಂಗ್ ಕಪ್ಪೆಗಳು ಅತ್ಯುತ್ತಮ ಆರೋಹಿಗಳು ಮತ್ತು 35 ಮೀ (115 ಅಡಿ) ಎತ್ತರವಿರುವ ಮರಗಳ ಮೇಲೆ ಕುಳಿತು ಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೇಲಿ ಕೊಂಡು (ಗ್ಲೈಡ್) ಪಯಣ ಬೆಳೆಸುತ್ತದೆ. ಇದು ಮಳೆಗಾಲದ‌ ಕೊನೆಯ ತಿಂಗಳಿನಲ್ಲಿ ‌ಇವುಗಳು ಹೆಚ್ಚಾಗಿ ಕಾಣಸಿಗುತ್ತದೆ ಎಂದು ಕಾರ್ತಿಕ್ ಭಟ್ ವನ್ಯಜೀವಿ ‌ಛಾಯಾಗ್ರಹಕ ಕಾರ್ತಿಕ್‌ ಭಟ್ ಕಾರ್ಕಳ ತಿಳಿಸಿದ್ದಾರೆ.

-ಬಿ. ಸಂಪತ್ ನಾಯಕ್ ಕಾರ್ಕಳ

ಪೊಟೊ: ಕಾರ್ತಿಕ್‌ ಭಟ್

Follow Us:
Download App:
  • android
  • ios