Haveri; ಚಿರತೆನಾ ನಾಯಿ ಅಂತ ತಿಳಿದು ಸುಮ್ಮನಾದ್ರು, ಎಸ್ಕೇಪ್ ಆಗಿ ಜನ್ರ ನಿದ್ದೆಗೆಡಿಸಿದೆ ಚಿರತೆ
ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಉಪ್ಪುಣಸಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಚಿರತೆ ಓಡಾಡ್ತಿದೆ ಅನ್ನೋ ಅನುಮಾನ ಗ್ರಾಮದ ಹಲವು ಜನರಿಗೆ ಇತ್ತು. ಆದರೆ ನಿರ್ಲಕ್ಷ್ಯ ಮಾಡಿದ ಈ ಊರಿನ ಜನರಿಗೆ ಈಗ ಚಿರತೆ ನಿದ್ದೆ ಗೆಡಿಸಿದೆ.
ಹಾವೇರಿ(ಸೆ.8): ಏ ನಾಯಿ ಇರಬಹುದು, ನರಿ ಇರಬಹುದು ಬಿಡ್ರೋ. ಹೀಗೆ ನಿರ್ಲಕ್ಷ್ಯ ಮಾಡಿದ ಈ ಊರಿನ ಜನರಿಗೆ ಚಿರತೆ ನಿದ್ದೆ ಗೆಡಿಸಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಉಪ್ಪುಣಸಿ ಗ್ರಾಮದಲ್ಲಿ ಭಯ ಮನೆ ಮಾಡಿದೆ. ಎಪ್ಪಾ ಎಲ್ಲಿ ಚಿರತೆ ಬಂದು ಕುತ್ತಿಗೆ ಹಿಡಿಯುತ್ತೋ? ಯಾರ ಹಸು ಗಂಟಲಿಗೆ ಬಾಯಿ ಹಾಕುತ್ತೋ? ಸಹವಾಸ ಬ್ಯಾಡ ಮನೇಲಿರೋಣ ಅಂತ ಇಲ್ಲಿನ ರೈತರು ಕೃಷಿ ಕೆಲಸ ಬಿಟ್ಟು ಮನೆಲಿ ಕೂತಿದ್ದಾರೆ. ಕಳೆದ ಎರಡು ತಿಂಗಳಿಂದ ಚಿರತೆ ಓಡಾಡ್ತಿದೆ ಅನ್ನೋ ಅನುಮಾನ ಗ್ರಾಮದ ಹಲವು ಜನರಿಗೆ ಇತ್ತು. ಜಮೀನುಗಳಿಗೆ ತೆರಳಿದಾಗ ಚಿರತೆ ನೋಡಿರೋ ಕೆಲ ರೈತರು, ಮಹಿಳೆಯರು ಯಾವುದೋ ಪ್ರಾಣಿ ಇದೆ ಅಂತ ಅನುಮಾನ ವ್ಯಕ್ತಪಡಿಸುತ್ತಲೇ ಇದ್ರು. ಆದರೆ ಜನ ನಿರ್ಲಕ್ಷ್ಯ ಮಾಡಿದ್ದಲ್ಲದೇ ಇಲ್ಯಾವ ಚಿರತೆ ಬರಬೇಕು? ಅಂತ ನಕ್ಕು ಸುಮ್ಮನಾಗಿದ್ರು. ಆದರೆ ಎರಡು ದಿನಗಳ ಹಿಂದೆ ಶೇಖಪ್ಪ ನಾಡಗೌಡ್ರ ಎಂಬುವವರು ಕೃಷಿ ಕೆಲಸಕ್ಕೆ ಅಂತ ಜಮೀನಿಗೆ ತೆರಳಿದಾಗ ಚಿರತೆ ಸ್ಪಷ್ಟವಾಗಿ ಕಂಡಿದೆ. ಕೇಕೇ ಹೊಡೆಯುತ್ತಾ ಶೇಖಪ್ಪ ಹಾಗೂ ಅವರ ಸಂಗಡಿಗರು ಊರ ಕಡೆ ಓಡಿ ಬಂದಿದ್ದಾರೆ.
ಕೊನೆಗೆ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದಾಗ ಉಪ್ಪುಣಸಿಗೆ ಬಂದು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಚಿರತೆ ಹೆಜ್ಜೆ ಗುರುತುಗಳೆ ಅಂತ ಖಚಿತ ಪಡಿಸಿದ್ದಾರೆ. ಎರಡು ಬೋನ್ ಗಳನ್ನು ತಂದಿಟ್ಟು ಚಿರತೆ ಸೆರೆ ಹಿಡಿಯಲು ಕಾದು ಕುಳಿತಿದ್ದಾರೆ. ಸದ್ಯ ಹೊಲಗಳ ಕಡೆ ಒಬ್ರೇ ಓಡಾಡಬೇಡಿ ಅಂಗ ಗ್ರಾಮದಲ್ಲಿ ಡಂಗೂರ ಸಾರಿಸಲಾಗಿದೆ.
ಬೋನಿಗೆ ಬಿದ್ದ ಗಂಡು ಚಿರತೆ
ತುರುವೇಕೆರೆ: ತಾಲೂಕಿನ ಬಾಣಸಂದ್ರ ಬಳಿ ಇರುವ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದಲ್ಲಿ ಜಾನುವಾರುಗಳನ್ನು ಬೇಟೆಯಾಡುತ್ತಿದ್ದ ಚಿರತೆ ಸೆರೆ ಸಿಕ್ಕಿದೆ. ತಾಲೂಕಿನ ಕಸಬಾ ವ್ಯಾಪ್ತಿಯ ಬಾಣಸಂದ್ರ ಸಮೀಪದ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದಲ್ಲಿದ್ದ ಎರಡು ಕರುಗಳನ್ನು ಚಿರತೆ ಕಳೆದ ಒಂದು ವಾರದಲ್ಲಿ ಬೇಟೆಯಾಡಿತ್ತು. ಅಲ್ಲದೇ ಇಲ್ಲಿ ಹತ್ತಾರು ಸಿಬ್ಬಂದಿ ಜಾನುವಾರುಗಳ ರಕ್ಷಣೆಗೆ ಇದ್ದಾರೆ. ಈ ಚಿರತೆಯ ಉಪಟಳ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿತ್ತು. ಹಾಗಾಗಿ ನಿನ್ನೆಯಷ್ಠೇ ಅರಣ್ಯ ಇಲಾಖೆಯ ಸಿಬ್ಬಂದಿ ಸಂವರ್ಧನಾ ಕೇಂದ್ರದ ಬಳಿ ಬೋನನ್ನು ಇರಿಸಿದ್ದರು.
Tumakuru; ಚಿರತೆ ಚರ್ಮ ಸಾಗಾಟ ಮಾಡ್ತಿದ್ದ ಇಂಜಿನಿಯರಿಂಗ್ ಪದವೀಧರ ಅರೆಸ್ಟ್
ಬಾಣಸಂದ್ರ ಆಸುಪಾಸಿನ ಗ್ರಾಮಸ್ಥರ ಸಾಕು ಪ್ರಾಣಿಗಳನ್ನು ಹಾಗು ಹಳ್ಳಿಕಾರ್ ಸಂವರ್ಧನಾ ಕೇಂದ್ರದ ಹಸುಗಳು ಹಿಡಿದು ತಿಂದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮತ್ತು ಭಯದ ವಾತಾವರಣ ಮನೆ ಮಾಡಿತ್ತು. ಈ ಬಗ್ಗೆ ಚಿಕ್ಕನಾಯಕನ ಹಳ್ಳಿಯ ವಲಯ ಅರಣ್ಯಾಧಿಕಾರಿಗಳಿಗೆ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಗುರುಮೂರ್ತಿಯವರು ದೂರು ನೀಡಿದ್ದರು. ಇದರ ಅನ್ವಯ ವಲಯ ಅರಣ್ಯಾಧಿಕಾರಿ ಸುನಿಲ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾಧಿಕಾರಿ ಮಂಜುನಾಥ್ ಸಿಬ್ಬಂದಿ ವರ್ಗ ರೂಪೇಶ್, ಉಗ್ರಪ್ಪ ಸೇರಿದಂತೆ ಹಲವರು ನಿನ್ನೆಯಷ್ಠೇ ಚಿರತೆ ಸೆರೆಹಿಡಿಯಲು ಬೋನನ್ನು ಇಟ್ಟಿದ್ದರು.
Udupi; ಮನೆಯೊಳಗೆ ಅವಿತು ಚಿರತೆ ಕಣ್ಣಾಮುಚ್ಚಾಲೆ, ದಿನಪೂರ್ತಿ ಕಾರ್ಯಾಚರಣೆಗೆ ಸುಸ್ತೋಸುಸ್ತು
ಇಂದು ರಾತ್ರಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದ ಬಳಿ ಅರಣ್ಯ ಸಿಬ್ಬಂದಿಗಳು ಇಟ್ಟಿದ್ದ ಬೋನಿಗೆ ಸುಮಾರು ಎರಡು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಇದನ್ನು ನೋಡಲು ತಂಡೋಪ ತಂಡವಾಗಿ ಜನರು ಆಗಮಿಸುತ್ತಿದ್ದರು. ಚಿರತೆಯ ಫೋಟೋ ತೆಗೆಯಲು ಹರಸಾಹಸ ಪಡುತ್ತಿದ್ದರು. ಕೆಲವರಂತೂ ಸೆಲ್ಪಿಯ ಮೊರೆ ಹೋಗಿದ್ದರು. ಸೆರೆ ಹಿಡಿದ ಚಿರತೆಯನ್ನು ಹಿರಿಯ ಅರಣ್ಯಾಧಿಕಾರಿಗಳ ಸೂಚನೆಯಂತೆ ಬಂಡಿಪುರ ಅಥವಾ ಬನ್ನೇರುಘಟ್ಟಅಭಯಾರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖಾ ಸಿಬ್ಬಂದಿ ತಿಳಿಸಿದ್ದಾರೆ.