11:55 PM (IST) Oct 17

Karnataka News Liveಹಾಸನಾಂಬ ದರ್ಶನ - ಒಂದೇ ದಿನ, 11 ಗಂಟೆಯಲ್ಲಿ 3.10 ಲಕ್ಷ ಜನ ದರ್ಶನ, ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿದ್ದೇನು?

Hasanamba temple darshan timings: ಹಾಸನಾಂಬ ದರ್ಶನಕ್ಕೆ ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಒಂದೇ ದಿನ 3.10 ಲಕ್ಷ ಜನರು ದೇವಿಯ ದರ್ಶನ. ಹೆಚ್ಚುತ್ತಿರುವ ಜನಸಂದಣಿ ದರ್ಶನಕ್ಕೆ 7-8 ಗಂಟೆಗಳ ಕಾಲ ಕಾಯಬೇಕಾಗಿದ್ದು, ಸಿದ್ಧರಾಗಿ ಬರುವಂತೆ ಕೃಷ್ಣ ಬೈರೇಗೌಡ ಭಕ್ತರಲ್ಲಿ ಮನವಿ

Read Full Story
11:01 PM (IST) Oct 17

Karnataka News Liveಮಲಬದ್ಧತೆ ಸಮಸ್ಯೆ ಇರೋರು ಈ ಹಣ್ಣನ್ನು ತಿನ್ನಿ!

Kiwi fruit benefits Natural Remedy ಮಲಬದ್ಧತೆ ಸಮಸ್ಯೆ ಇರೋರು ಈ ಹಣ್ಣನ್ನು ತಿನ್ನಿ!, ಕಿವಿಯಲ್ಲಿರುವ ನಾರು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಆರೋಗ್ಯಕರ ಹಾಗೂ ಹೆಚ್ಚು ಸಮತೋಲಿತ ಕರುಳಿನ ಮೈಕ್ರೋಬಯೋಮ್‌ಗೆ ಕಾರಣವಾಗುತ್ತವೆ.

Read Full Story
10:42 PM (IST) Oct 17

Karnataka News Liveದೀಪಾವಳಿಗೆ ದೂರದ ಊರುಗಳಿಗೆ ಬಿಎಂಟಿಸಿ ಸೇವೆ, ಅ.20ರ ವರೆಗೆ ಕೆಎಸ್‌ಆರ್‌ಟಿಸಿಗೆ ಸಾಥ್

ದೀಪಾವಳಿಗೆ ದೂರದ ಊರುಗಳಿಗೆ ಬಿಎಂಟಿಸಿ ಸೇವೆ, ಅ.20ರ ವರೆಗೆ ಕೆಎಸ್‌ಆರ್‌ಟಿಸಿಗೆ ಸಾಥ್, ಧರ್ಮಸ್ಥಳ, ಶಿವಮೊಗ್ಗ, ಮೈಸೂರು, ಬಳ್ಳಾರಿ, ಯಾದಗಿರಿ ಸೇರಿದಂತೆ ಹಲವು ಊರುಗಳಿಗೆ ಬಿಎಂಟಿಸಿ ಸೇವೆ ನೀಡಲಿದೆ. 

Read Full Story
10:31 PM (IST) Oct 17

Karnataka News Liveಮಾಡೋದೆಲ್ಲಾ ಮಾಡ್ಬಿಟ್ಟು ಹ್ಹಿ, ಹ್ಹೀ ನಕ್ಕಬಿಟ್ರು - ಇಬ್ಬರಿಗೂ ಈ ವಾರ ಕ್ಲಾಸ್ ತೆಗೆದುಕೊಳ್ಳಬೇಕಲೇ ಬೇಕು!

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಸೇರಿ ರಕ್ಷಿತಾ ಶೆಟ್ಟಿಯನ್ನು ಗೆಜ್ಜೆ ಸದ್ದಿನ ವಿಚಾರವಾಗಿ ಗುರಿಮಾಡಿದ್ದಾರೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ರಕ್ಷಿತಾ, ಇಬ್ಬರನ್ನೂ 'ನಾಗವಲ್ಲಿ' ಎಂದು ಕರೆದು ಅವರ ಸುಳ್ಳುಗಳನ್ನು ಬಯಲಿಗೆಳೆದಿದ್ದಾರೆ.

Read Full Story
09:59 PM (IST) Oct 17

Karnataka News Liveಸಿಲ್ಸಿಲಾ ಶೂಟಿಂಗ್ ವೇಳೆ ಬಚ್ಚನ್ ಹಿಂದೇ ಇರ್ತಿದ್ರು ಜಯಾ, ಬಿಗ್ ಬಿ ಹೆಂಡ್ತಿಗೆ ಕಾಡ್ತಿತ್ತಾ ರೇಖಾ ಭಯ?

ಅಮಿತಾಬ್ ಬಚ್ಚನ್ ಹಾಗೂ ರೇಖಾ ಪ್ರೇಮ ಕಥೆ ಸದಾ ಚರ್ಚೆಯಾಗೋ ವಿಷ್ಯ. ಸಿಲ್ಸಿಲಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ರೇಖಾ ಹಾಗೂ ಅಮಿತಾಬ್ ಬಚ್ಚನ್ ಎಲ್ಲರ ಕೇಂದ್ರಬಿಂದುವಾಗಿದ್ರು. ಸಿನಿಮಾದಲ್ಲಿ ನಟಿಸಲು ಕೊನೆಗೂ ಒಪ್ಪಿಕೊಂಡಿದ್ದ ಜಯಾ ವಿಧಿಸಿದ್ದ ಷರತ್ತೇನು ಗೊತ್ತಾ?

Read Full Story
09:56 PM (IST) Oct 17

Karnataka News Liveಆರೆಸ್ಸೆಸ್ ನಿರ್ಬಂಧ ರಾಷ್ಟ್ರ ವಿರೋಧಿ ಕೃತ್ಯ - ರಾಜ್ಯ ಸರ್ಕಾರದ ವಿರುದ್ಧ ಬೊಮ್ಮಾಯಿ ವಾಗ್ದಾಳಿ

Basavaraj Bommai on RSS ban: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್ ಮೇಲಿನ ನಿರ್ಬಂಧದ ವಿರುದ್ಧ ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೊಂದು ರಾಷ್ಟ್ರ ವಿರೋಧಿ ಕೃತ್ಯ ಎಂದು ಆರೋಪಿಸಿದ ಅವರು, ಸರ್ಕಾರಿ ನೌಕರನ ಅಮಾನತನ್ನು ಪ್ರಶ್ನಿಸಿದ್ದಾರೆ. ಹಾವೇರಿ ಇಸ್ಪಿಟ್ ದಂಧೆ.

Read Full Story
09:47 PM (IST) Oct 17

Karnataka News Liveಹಾಸನಾಂಬೆ ದರ್ಶನಕ್ಕೆ ಜನಸಾಗರ, ಬೆಂಗಳೂರು-ಹಾಸನ ಬಸ್ ಸಂಚಾರ ಸ್ಥಗಿತ

ಹಾಸನಾಂಬೆ ದರ್ಶನಕ್ಕೆ ಜನಸಾಗರ, ಬೆಂಗಳೂರು-ಹಾಸನ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ. ವಾರಾಂತ್ಯ ರಜೆ ಹಾಗೂ ದೀಪಾವಳಿ ರಜೆ ಕಾರಣ ಭಾರಿ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬ ದರ್ಸನಕ್ಕೆ ತೆರಳಿದ್ದಾರೆ.

Read Full Story
09:22 PM (IST) Oct 17

Karnataka News Liveಬಾಗಲಕೋಟೆಗೆ ಕಾಡಸಿದ್ದೇಶ್ವರ ಶ್ರೀಗಳಿಗೆ ಪ್ರವೇಶ ನಿರ್ಬಂಧ, ಮಠ ತೆರವಿಗೆ ನೋಟಿಸ್ ನೀಡಿದ ಡಿಸಿ

ಬಾಗಲಕೋಟೆಗೆ ಕಾಡಸಿದ್ದೇಶ್ವರ ಶ್ರೀಗಳಿಗೆ ಪ್ರವೇಶ ನಿರ್ಬಂಧ, ಮಠ ತೆರವಿಗೆ ನೋಟಿಸ್ ನೀಡಿದ ಡಿಸಿ, ಅವಹೇಳನಕಾರಿ ಭಾಷಣ ಆರೋಪದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದ್ದು, ಸರ್ಕಾರದ ವಿರುದ್ದ ಭಾರಿ ಆಕ್ರೋಶ, ವಿರೋಧಗಳು ವ್ಯಕ್ತವಾಗುತ್ತಿದೆ.

Read Full Story
08:48 PM (IST) Oct 17

Karnataka News Liveಎಲ್ಲಿಯೂ ತಪ್ಪುಗಳಾಗದಂತೆ ಹಿರಿಯರ ಮಾರ್ಗದರ್ಶದಿಂದ ಸಿನಿಮಾ ಮಾಡಿದ್ದೇನೆ, ಟೀಕೆಗಳಿಗೆ ಮೈಸೂರಲ್ಲಿ ನಟ ರಿಷಭ್ ಉತ್ತರ

ಕಾಂತಾರ ಚಾಪ್ಟರ್ 1ರ ಯಶಸ್ಸಿನ ನಂತರ, ನಟ ರಿಷಬ್ ಶೆಟ್ಟಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಬಳಿಕ ಗಾಯತ್ರಿ ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ, ಚಿತ್ರದ ಯಶಸ್ಸಿಗೆ ಕನ್ನಡಿಗರನ್ನು ಶ್ಲಾಘಿಸಿದರು. ದೈವಾರಾಧನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Read Full Story
08:28 PM (IST) Oct 17

Karnataka News Liveರಾಮನಗರ - ವೈದ್ಯರ ನಿರ್ಲಕ್ಷ್ಯ ಆರೋಪ, ಕೈ ಆಪರೇಷನ್ ಗೆ ಬಂದವ ಶವವಾದ!

Narayana Hospital Ramanagara inciden: ರಾಮನಗರದ ಖಾಸಗಿ ಆಸ್ಪತ್ರೆಗೆ ಕೈ ಮೂಳೆ ಮುರಿತದ ಆಪರೇಷನ್‌ಗೆ ದಾಖಲಾಗಿದ್ದ 58 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಇದು ಹೃದಯಾಘಾತದಿಂದಾದ ಸಾವು ಎಂದು ವೈದ್ಯರು ಹೇಳಿದರೆ, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರ ಆರೋಪ.

Read Full Story
08:07 PM (IST) Oct 17

Karnataka News Liveಆದಾಯ ತೆರಿಗೆ, ಜಿಎಸ್‌ಟಿ ರಿಟರ್ನ್ಸ್ ಬಲೆಗೆ ಬಿದ್ದು, ಗೃಹಲಕ್ಷ್ಮಿಯಿಂದ ವಂಚಿತರಾದ 4,756 ಮಹಿಳೆಯರು!

ರಾಮನಗರ ಜಿಲ್ಲೆಯಲ್ಲಿ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವ ಕುಟುಂಬಗಳಿಗೆ ಸೇರಿದ 4,756 ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈಬಿಡಲಾಗಿದೆ. ಸರ್ಕಾರದ ಮಾನದಂಡಗಳ ಪ್ರಕಾರ, ಕುಟುಂಬದ ಯಜಮಾನಿ ಅಥವಾ ಪತಿ ತೆರಿಗೆ ಪಾವತಿದಾರರಾಗಿದ್ದರೆ ಅವರು ಈ ಯೋಜನೆಗೆ ಅರ್ಹರಲ್ಲ.

Read Full Story
07:59 PM (IST) Oct 17

Karnataka News Liveಹೆಸರು ಲಂಡನ್, ಹೆಡ್‌ ಆಫೀಸ್ ಕ್ರುಯೇಶಿಯಾ ಅಂತಿದೆ, ಸರ್ಕಾರದ ಗ್ಯಾರಂಟಿಗೆ ಫೇಕ್‌ ಸರ್ಟಿಫಿಕೇಟ್ - ಸಿಟಿ ರವಿ ವ್ಯಂಗ್ಯ

CT Ravi on Karnataka government: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಲು 'ಲಂಡನ್ ಬುಕ್ ಆಫ್ ರೆಕಾರ್ಡ್' ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಬಳಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ. ಗ್ಯಾರೆಂಟಿಗೆ ನಕಲಿ ಸರ್ಟಿಫಿಕೇಟ್ ಸೃಷ್ಟಿಸಲಾಗಿದೆ ಎಂದು ವ್ಯಂಗ್ಯವಾಡಿದರು.

Read Full Story
07:35 PM (IST) Oct 17

Karnataka News Liveದೀಪಾವಳಿ ಹಬ್ಬದ ಸಂಭ್ರಮಕ್ಕೆ ರೈತರಿಗೆ ಕತ್ತಲೆ, ಗೋವಿನಜೋಳ ಬೆಲೆ ಕುಸಿತ, ಕಂಗಾಲಾದ ರೈತರು

ಗದಗ ತಾಲೂಕಿನಲ್ಲಿ ಉತ್ತಮ ಫಸಲು ಬಂದರೂ ಗೋವಿನಜೋಳದ ಬೆಲೆ ತೀವ್ರವಾಗಿ ಕುಸಿದಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಫಸಲು ಆವಕವಾಗುತ್ತಿರುವುದೇ ಇದಕ್ಕೆ ಕಾರಣವಾಗಿದ್ದು, ದೀಪಾವಳಿ ಹಬ್ಬದ ನಿರೀಕ್ಷೆಯಲ್ಲಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Read Full Story
07:28 PM (IST) Oct 17

Karnataka News Liveಬಾಲಕಿ ಮೇಲೆ ಅತ್ಯಾ*ಚಾರ,15 ವರ್ಷಕ್ಕೆ ಮಗುವನ್ನ ಹೆತ್ತ ಹುಡುಗಿ!

15-Year-Old Girl Raped Gives Birth to Dead Child ಬೆಂಗಳೂರಿನಲ್ಲಿ, ಐಸ್‌ಕ್ರೀಮ್ ಕೊಡಿಸುವ ನೆಪದಲ್ಲಿ 15 ವರ್ಷದ ಬಾಲಕಿಯ ಮೇಲೆ ಅರ್ಜುನ್ ಎಂಬಾತ ನಿರಂತರ ಅತ್ಯಾಚಾರ ಎಸಗಿದ್ದಾನೆ. ಗರ್ಭಿಣಿಯಾಗಿದ್ದ ಬಾಲಕಿ ಮನೆಯಲ್ಲಿ ಸತ್ತ ಮಗುವಿಗೆ ಜನ್ಮ ನೀಡಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

Read Full Story
07:18 PM (IST) Oct 17

Karnataka News Liveಚಾಮರಾಜನಗರ - ಪಂಚಾಯ್ತಿ ಆವರಣದಲ್ಲಿ ವಾಟರ್‌ಮನ್ ಸಾವು, ಪಿಡಿಓ ಅಮಾನತು, ಏನಿದು ಪ್ರಕರಣ?

ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ವಾಟರ್‌ಮನ್ ಆಗಿದ್ದ ಚಿಕ್ಕೊಸನಾಯಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 27 ತಿಂಗಳ ಸಂಬಳ ನೀಡದೆ ಕಿರುಕುಳ ನೀಡಿದ್ದೇ ಸಾವಿಗೆ ಕಾರಣವೆಂದು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಮೇಲೆ ಪಿಡಿಒ ರಾಮೇಗೌಡರನ್ನು ಅಮಾನತು ಮಾಡಲಾಗಿದೆ.
Read Full Story
07:15 PM (IST) Oct 17

Karnataka News Liveಶ್ರೀರಾಂಪುರ ವಿದ್ಯಾರ್ಥಿನಿ ಯಾಮಿನಿ ಕೊಲೆಗೈದ ಆರೋಪಿಗಳ ಬಂಧನ; ಮದುವೆಗೆ ಒಪ್ಪದಿದ್ದಕ್ಕೆ ಚಾಕು ಹಾಕಿದ್ನಂತೆ!

ಬೆಂಗಳೂರಿನ ಶ್ರೀರಾಂಪುರದಲ್ಲಿ, ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ 20 ವರ್ಷದ ಬಿ.ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಆಕೆಯ ಪರಿಚಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪೊಲೀಸರು ಮುಖ್ಯ ಆರೋಪಿ ವಿಘ್ನೇಶ್ ಮತ್ತು ಆತನ ಸ್ನೇಹಿತ ಹರೀಶ್‌ನನ್ನು ಬಂಧಿಸಿದ್ದಾರೆ.

Read Full Story
07:00 PM (IST) Oct 17

Karnataka News Liveಸಂಚಾರಿ ತಾರಾಲಯ ಕಾರ್ಯಕ್ರಮ ಮತ್ತೆ ಆರಂಭಿಸಿದ ಕರ್ನಾಟಕ ಸರ್ಕಾರ, ಟೆಂಡರ್‌ ಆಹ್ವಾನ!

Karnataka Relaunches Mobile Planetarium Project with 11 Units ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿಯು (KSTePS) 'ತಾರೇ ಜಮೀನ್‌ ಪರ್‌' ಎಂಬ ಸಂಚಾರಿ ಡಿಜಿಟಲ್ ಪ್ಲಾನೆಟೇರಿಯಮ್ ಉಪಕ್ರಮವನ್ನು ಪುನರಾರಂಭಿಸುತ್ತಿದೆ. 

Read Full Story
06:52 PM (IST) Oct 17

Karnataka News Liveಬೆಂಗಳೂರಲ್ಲಿ ತಾಯಿ ಮಗ ಜಾಗೃತಿ ವ್ಯರ್ಥ, ಕಸ ಹಾಕಬೇಡಿ ಎಂದು ಬೇಡಿಕೊಂಡರೂ ನಿನ್ನ ಕೆಲಸ ನೀನು ನೋಡೆಂದು ಮಗುವನ್ನು ಹೀಯಾಳಿಸಿದ ವ್ಯಕ್ತಿ!

ಬೆಂಗಳೂರಿನ ಜಯನಗರದಲ್ಲಿ, ತಾಯಿಯೊಬ್ಬರು ತಮ್ಮ ಮಗನ ಮೂಲಕ ಕಸ ಹಾಕದಂತೆ ವ್ಯಕ್ತಿಯೊಬ್ಬರಿಗೆ ಮನವಿ ಮಾಡಿಸುತ್ತಾರೆ. ಆದರೆ, ಆ ವ್ಯಕ್ತಿಯ ನಿರ್ಲಕ್ಷ್ಯ ಮತ್ತು ಮಗುವಿನ ನಿರಾಶೆಯ ನಡುವೆಯೂ, ತಾಯಿ ಮತ್ತೆ ಮಗನಿಗೆ ಉತ್ತೇಜನ ನೀಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
06:43 PM (IST) Oct 17

Karnataka News Liveನನ್ನ ಮನೆ ಮೇಲೆ ಎಸ್‌ಐಟಿ ದಾಳಿಯ ಹಿಂದೆ ಷಡ್ಯಂತ್ರ - ರಾಹುಲ್ ಗಾಂಧಿ, ಸಿಎಂ ವಿರುದ್ಧ ಸುಭಾಷ್ ಗುತ್ತೇದಾರ ಗಂಭೀರ ಆರೋಪ

Subhash Guttedar SIT raid: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ತಮ್ಮ ಮೇಲಿನ ಎಸ್‌ಐಟಿ ದಾಳಿಯ ಹಿಂದೆ ಶಾಸಕ ಬಿಆರ್ ಪಾಟೀಲ್ ಮತ್ತು ರಾಹುಲ್ ಗಾಂಧಿಯವರ ರಾಜಕೀಯ ದುರುದ್ದೇಶವಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

Read Full Story
06:37 PM (IST) Oct 17

Karnataka News Liveಬೆಂಗಳೂರು ರಸ್ತೆಗುಂಡಿ ಮುಚ್ಚಿದ ವರದಿ ಕೇಳಿದ ಸರ್ಕಾರ! ಸಿಎಂ ಕೊಟ್ಟ ಗಡುವು ಮುಕ್ತಾಯಕ್ಕೆ 12 ದಿನ ಬಾಕಿ!

ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಗಡುವು ಸಮೀಪಿಸುತ್ತಿದ್ದರೂ, ಕಾಮಗಾರಿಯಲ್ಲಿ ನಿಧಾನಗತಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಗತಿ ವರದಿ ಕೇಳಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿಸಿದೆ.

Read Full Story