ದೀಪಾವಳಿಗೆ ದೂರದ ಊರುಗಳಿಗೆ ಬಿಎಂಟಿಸಿ ಸೇವೆ, ಅ.20ರ ವರೆಗೆ ಕೆಎಸ್‌ಆರ್‌ಟಿಸಿಗೆ ಸಾಥ್, ಧರ್ಮಸ್ಥಳ, ಶಿವಮೊಗ್ಗ, ಮೈಸೂರು, ಬಳ್ಳಾರಿ, ಯಾದಗಿರಿ ಸೇರಿದಂತೆ ಹಲವು ಊರುಗಳಿಗೆ ಬಿಎಂಟಿಸಿ ಸೇವೆ ನೀಡಲಿದೆ.
ಬೆಂಗಳೂರು (ಅ.17) ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಊರುಗಳಿಗೆ ತೆರಳವವರ ಸಂಖ್ಯೆ ಹೆಚ್ಚು. ಕುಟುಂಬದ ಜೊತೆ ಹಬ್ಬ ಆಚರಿಸಲು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೂ ಜನಸಂದಣಿ ಹೆಚ್ಚಾಗಿದೆ. ಹೀಗಾಗಿ ಇದೀಗ ದೀಪಾವಳಿ ಹಬ್ಬಕ್ಕೆ ದೂರದ ಊರುಗಳಿಗೆ ಬಿಎಂಟಿಸಿ ಬಸ್ ಸೇವೆ ನೀಡಲಿದೆ. ಬಿಎಂಟಿಸಿ ಬೆಂಗಳೂರು ನಗರ ಸಂಚಾರ ಜೊತೆಗೆ ಇದೀಗ ದೂರದ ಊರುಗಳಿಗೂ ಸೇವೆ ನೀಡಲಿದೆ. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್‌ಗೆ ಸಾಥ್ ನೀಡಲಿದೆ.
2,500 ಅಧಿಕ ಬಸ್ ಸೇವೆ ಬಳಕೆ
ದೀಪಾವಳಿ ಹಬ್ಬದ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್ ಜೊತೆ ಬಿಎಂಟಿಸಿ ಬಸ್ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಬರೋಬ್ಬರಿ 2,500 ಹೆಚ್ಚುವರಿ ಬಸ್‌ಗಳನ್ನು ದೂರದ ಊರುಗಳಿಗೆ ಬಳಕೆ ಮಾಡಲಾಗುತ್ತಿದೆ. ಬಹುತೇಕರು ಬೆಂಗಳೂರಿನಿಂದ ದೂರ ಊರುಗಳಿಗೆ ತೆರಳುತ್ತದ್ದಾರೆ. ಈಗಾಗಲೇ ಬೆಂಗಳೂರು ಖಾಲಿ ಖಾಲಿಯಾಗುತ್ತಿದೆ. ಇದರಿಂದ ಬಿಎಂಟಿಸಿ ಬಸ್ ಸೇವೆಯನ್ನು ದೂರದ ಊರುಗಳಿಗೆ ಬಳಸಿಕೊಳ್ಳಳಾಗುತ್ತಿದೆ.
ಅಕ್ಟೋಬರ್ 20ರ ವರೆಗೆ ಬಿಎಂಟಿಸಿ ಸೇವೆ
ದೂರದ ಊರುಗಳಿಗೆ ಬಿಎಂಟಿಸಿ ಅಕ್ಟೋಬರ್ 20ರ ವರೆಗೆ ಸೇವೆ ನೀಡಲಿದೆ. ಬಿಎಂಟಿಸಿ ಬಸ್‌ಗಳ ಪೈಕಿ 900 ಬಸ್‌ಗಳು ವಿವಿಧ ಜಿಲ್ಲೆಗಳಿಗೆ ಸೇವೆ ನೀಡಲಿದೆ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಬಿಎಂಟಿಸಿಗಳನ್ನ ಬೇರೆ ಬೇರೆ ಜಿಲ್ಲೆಗಳ ಸಂಚಾರ ಬಳಕೆ ಮಾಡಲಾಗುತ್ತದೆ. ಹಾಗಾಗಿ, ದೀಪಾವಳಿ ಹಿನ್ನೆಲೆ 900 ಬಸ್ ಗಳನ್ನ ಕೆಎಸ್ಆರ್ಟಿಸಿ ಜೊತೆಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.
ಬಿಎಂಟಿಸಿ ಬಸ್ ಸೇವೆ
ಮೈಸೂರು, ಕೊಳ್ಳೆಗಾಲ, ಚಿತ್ರದುರ್ಗ, ಅರಕಲಗೂಡು, ಧರ್ಮಸ್ಥಳ, ಹೊಸದುರ್ಗ, ಶಿವಮೊಗ್ಗ, ರಾಯಚೂರು, ಬಳ್ಳಾರಿ, ಯಾದಗಿರಿ ಸೇರಿ ಹಲವು ಜಿಲ್ಲೆಗಳಿಗಲ್ಲಿ ಬಿಎಂಟಿಸಿ ಸಂಚಾರ ಮಾಡಲಿದೆ. ಈ ಕುರಿತು ಬಿಎಂಟಿಸಿಯಿಂದ ಅಧೀಕೃತ ಪ್ರಕಟಣೆ ಹೊರಡಿಸಿದೆ.
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಮೆಜೆಸ್ಟಿಕ್ ಸುತ್ತ ಮುತ್ತ ಟ್ರಾಫಿಕ್ ಜಾಮ್
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಮೆಜೆಸ್ಟಿಕ್ ಸುತ್ತ ಮುತ್ತ ಟ್ರಾಫಿಕ್ ಜಾಮ್ ಸಂಭವಿಸಿದೆ. ವಾರಾಂತ್ಯ ಹಾಗೂ ದೀಪಾವಳಿ ರಜಾ ದಿನಗಳಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಗಳು ತುಂಬಿ ತುಳುಕುತ್ತಿದೆ. ಇತ್ತ ರೈಲು ನಿಲ್ದಾಣದ ಬಳಿಯೂ ಜನಸಾಗರವೇ ಪ್ರಯಾಣಕ್ಕೆ ನಿಂತಿದ್ದಾರೆ. ಬೆಂಗಳೂರಿನಿಂದ ಬೇರೆ ಜಿಲ್ಲೆ, ರಾಜ್ಯಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ನಾಳೆಯಿಂದ ಐಟಿ ಸೇರಿದಂತೆ ಹಲವು ಕ್ಷೇತ್ರದ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ರಜಾ ದಿನವಾಗಿದೆ. ಹೀಗಾಗಿ ಜನಸಂದಣಿ ಹೆಚ್ಚಾಗಿದೆ .
