ಬಾಗಲಕೋಟೆಗೆ ಕಾಡಸಿದ್ದೇಶ್ವರ ಶ್ರೀಗಳಿಗೆ ಪ್ರವೇಶ ನಿರ್ಬಂಧ, ಮಠ ತೆರವಿಗೆ ನೋಟಿಸ್ ನೀಡಿದ ಡಿಸಿ, ಅವಹೇಳನಕಾರಿ ಭಾಷಣ ಆರೋಪದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದ್ದು, ಸರ್ಕಾರದ ವಿರುದ್ದ ಭಾರಿ ಆಕ್ರೋಶ, ವಿರೋಧಗಳು ವ್ಯಕ್ತವಾಗುತ್ತಿದೆ.

ಬಾಗಲಕೋಟೆ (ಅ.17) ಮಹಾರಾಷ್ಟ್ರದಲ್ಲಿ ಲಿಂಗಾಯತ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಹಿನ್ನೆಲೆಯಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿರೋ ಕನ್ನೇರಿ ಶ್ರೀಗಳಿಗೆ ಇದೀಗ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಪ್ರವೇಶ ಮಾಡದಂತೆ ಹಾಗೂ ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠಕ್ಕೆ ಬಾರದಂತೆ ನೊಟೀಸ್ ನೀಡಲಾಗಿದೆ. ಶ್ರೀಗಳಿಗೆ ನೋಟಿಸ್ ನೀಡಿರುವುದು ಭಕ್ತರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಮಲ್ಲಿಕಾರ್ಜುನ ಮಠದಲ್ಲಿ ಇರುವ ಶ್ರೀ

ಬೀಳಗಿ ತಹಸೀಲ್ದಾರ ವಿನೋದ್ ಅವರಿಂದ ನೊಟೀಸ್ ನೀಡಿದ್ದರೆ. ಮಲ್ಲಿಕಾರ್ಜುನ ಮಠಕ್ಕೆ ತೆರಳಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳಿಗ ನೋಟಿಸ್ ನೀಡಿದ್ದಾರೆ. ಮಠ ತೆರವು ಮಾಡುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಕಾನೂನು ಸವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಬಾಗಲಕೋಟೆಯಲ್ಲಿ ಜಿಲ್ಲೆಯಲ್ಲಿ ಇರಬಾರದು. ನಿಮ್ಮ ಮೂಲ ಜಾಗಕ್ಕೆ ತೆರಳಿ ಎಂದು ನೋಟಿಸ್ ನೀಡಲಾಗಿದೆ.

ಪೊಲೀಸರ ಜೊತೆ ತೆರಳಿದ ಜಿಲ್ಲಾಧಿಕಾರಿ ವಿನೋದ, ಶ್ರೀಗಳಿಗೆ ನೋಟಿಸ್ ನೀಡಿದ್ದಾರೆ. ನಿಯಮ ಪಾಲನೆ ಮಾಡುವಂತೆ ಸೂಚಿಸಿದ್ದರೆ. ನಿಯಮ ಪಾಲನೆ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. ಹೀಗಾಗಿ ಶ್ರೀಗಳು ದಯವಿಟ್ಟು ತಮ್ಮ ಮೂಲ ಸ್ಥಾನಕ್ಕೆ ತೆರಳಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕರ್ನಾಟಕ ಪ್ರವೇಶ ನಿರ್ಬಂಧಕ್ಕೆ ಆಗ್ರಹಿಸಿದ್ದ ಕೆಲ ಸಂಘಟನೆಗಳು

ಬಸವ ಸಂಸ್ಕೃತಿ ಅಭಿಯಾನವನ್ನ ಕೃಪಾ ಪೋಷಿತ ನಾಟಕ ಮಂಡಳಿ ಎಂದಿದ್ದ ಕಾಡ ಸಿದ್ದೇಶ್ವರ ಶ್ರೀ ವಿರುದ್ಧ ಕೆಲ ಸಂಘಟನೆಗಳು ಆಕ್ರೋಶ ಹೊರಹಾಕಿತ್ತು.ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸ್ವಾಮೀಜಿಗಳ ಕರ್ನಾಟಕ ಪ್ರವೇಶ ನಿರ್ಬಂಧಿಸುವಂತೆ ಆಗ್ರಹಿಸಿ ಸಿಎಂಗೆ ಮನವಿ ಮಾಡಿದ್ದರು. ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕನೇರಿ ಮಠದ ಶ್ರೀಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಜಾಗತಿಕ ಲಿಂಗಾಯತ ಮಹಾಸಾಭಾ ಗದಗ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆದಿತ್ತು. ಮಠಾಧೀಶರ ವಿರುದ್ಧ ಕೀಳುಮಟ್ಟ ಭಾಷೆ ಬಳಸಿರುವ ಶ್ರೀಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು. ಕನೇರಿ ಮಠದಿಂದ ಪೀಠತ್ಯಾಗ ಗೊಳಿಸಬೇಕೆಂದು ಧಿಕ್ಕಾರ ಕೂಗಿ ಆಕ್ತೋಶ ವ್ಯಕ್ತಪಡಿಸಿದ್ದರು. ಇದೇ ವೇಲೆ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿಲಾಗಿತ್ತು.