Asianet Suvarna News Asianet Suvarna News

ಭಾರಿ ಮಳೆ: ತುಮಕೂರಿಗೆ ಹೇಮಾವತಿ ನೀರು ಹರಿಯುವ ಸಾಧ್ಯತೆ

ಹೇಮಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಏರಿಕೆಯಾಗುತ್ತಿದೆ. ಇದು ಹಾಸನ ಜಿಲ್ಲೆ ಮತ್ತು ತುಮಕೂರು ಜಿಲ್ಲೆಯ ಜನತೆಗೆ ಆಶಾದಾಯಕ ಸ್ಥಿತಿ ಕಂಡುಬರುತ್ತಿದ್ದು, ತುಮಕೂರು ಜಿಲ್ಲೆಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸುವ ಆಶಾಭಾವನೆ ಜಿಲ್ಲೆಯ ಜನರಲ್ಲಿ ಮೂಡಿದೆ.

Heavy rain: Hemavati water likely to flow to Tumkur snr
Author
First Published Jul 8, 2024, 11:52 AM IST | Last Updated Jul 8, 2024, 11:52 AM IST

 ತುಮಕೂರು : ಹೇಮಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಏರಿಕೆಯಾಗುತ್ತಿದೆ. ಇದು ಹಾಸನ ಜಿಲ್ಲೆ ಮತ್ತು ತುಮಕೂರು ಜಿಲ್ಲೆಯ ಜನತೆಗೆ ಆಶಾದಾಯಕ ಸ್ಥಿತಿ ಕಂಡುಬರುತ್ತಿದ್ದು, ತುಮಕೂರು ಜಿಲ್ಲೆಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸುವ ಆಶಾಭಾವನೆ ಜಿಲ್ಲೆಯ ಜನರಲ್ಲಿ ಮೂಡಿದೆ.

ಕಳೆದ ಹಾಗೂ ಈ ವರ್ಷದ ಅರಂಭದಲ್ಲೂ ಸರಿಯಾದ ಮಳೆ ಇಲ್ಲದೆ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಪ್ರಮಾಣ ನಿಗಧಿತ ಮಟ್ಟ ಮುಟ್ಟದೆ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಬೇಕಾಯಿತು. ಸುಮಾರು 37.103 ಟಿಎಂಸಿ ನೀರಿನ ಸಂಗ್ರಹಣೆ ಸಾಮರ್ಥ್ಯವನ್ನು ಹೊಂದಿರುವ ಹೇಮಾವತಿ ಜಲಾಶಯದಲ್ಲಿ ಈಗ ಸರಿ ಸುಮಾರು 17 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಸಕಲೇಶಪುರ ಹಾಗೂ ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹೇಮಾವತಿಯ ಪ್ರಮುಖ ಉಪ ನದಿಯಾದ ಯಗಚಿ ನದಿ ತುಂಬಿ ಹರಿಯುತ್ತಿದ್ದು, ಯಗಚಿ ಜಲಾಶಯ ತುಂಬಿದ್ದು ಸಂಪೂರ್ಣ ನೀರು ಹೇಮಾವತಿ ಜಲಾಶಯವನ್ನು ತಲುಪುತ್ತಿದೆ.

ಹೇಮಾವತಿ ಜಲಾಶಯದ ಒಳ ಹರಿವು 5862 ಕ್ಯೂಸೆಕ್ಸ್ ಇದ್ದು ಜಲಾಶಯದ ಹೊರ ಹರಿವು 250 ಕ್ಯೂಸೆಕ್ಸ್ ಇದೆ. ಇಂದಿನ ಹೇಮಾವತಿ ಜಲಾಶಯದ ನೀರಿನ ಸಂಗ್ರಹ 17 ಟಿಎಂಸಿ ಇದೆ. ಈಗ ಜಲಾಶಯದಲ್ಲಿ ನೀರಿನ ಸಂಗ್ರಹ 12 ಟಿಎಂಸಿಗಿಂತ ಹೆಚ್ಚಿನ ನೀರು ಸಂಗ್ರಹವಾದಾಗ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಬಳಕೆಗಾಗಿ ಜಲಾಶಯದಿಂದ ಕೆರೆಗಳಿಗೆ ನೀರನ್ನು ಹರಿಸುವ ಕೆಲಸವನ್ನು ಅರಂಭಿಸಬೇಕಾಗಿರುತ್ತದೆ.

ಕಾರಣ ಕೆರೆ ಕಟ್ಟೆಗಳ ಸುತ್ತಮುತ್ತ ಅಶ್ರಯ ಹೊಂದಿರುವ ಜನರು, ಪಶು, ಪಕ್ಷಿ, ಪ್ರಾಣಿಗಳಿಗೂ ಇದೆ ನೀರಿನ ಅವಶ್ಯಕತೆ ಇರುತ್ತದೆ. ತುಮಕೂರು ಜಿಲ್ಲೆಯಲ್ಲಿ ಇರುವ ಬಹುತೇಕ ಕೆರೆಗಳು ಖಾಲಿಯಾಗಿದ್ದು, ತುಮಕೂರು ಜಿಲ್ಲೆಯ ಜನತೆಯ ನೀರಿನ ಬವಣೆ ಹೇಳತೀರದಾಗಿದೆ. ಅದಕ್ಕಾಗಿ ಹೇಮಾವತಿ ಜಲಾಶಯದಿಂದ ಕೆರೆಗಳಿಗೆ ನೀರನ್ನು ಈ ಕೂಡಲೇ ಹರಿಸಲು ಕ್ರಮ ವಹಿಸುವಂತೆ ಜಿಲ್ಲೆಯ ಜನರು ಮನವಿ ಮಾಡಿದ್ದಾರೆ.

ಮುಂದೆ ಇನ್ನೂ ಭಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ಇರುವುದರಿಂದ ಜಲಾಶಯ ತುಂಬಲು ತೊಂದರೆ ಆಗಲಾರದು. ಆದ್ದರಿಂದ ಕೆರೆಗಳಿಗೆ ನೀರು ಹರಿಸಿ ಜಲಾಶಯದಿಂದ ಕೆರೆಗಳಿಗೆ ನೀರು ಹರಿಸಿ, ನಾಗರೀಕರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರಿನ ಆಭಾವ ಮತ್ತು ಸಂಕಷ್ಟಗಳಿಂದ ದೂರ ಮಾಡಬೇಕು. ಈಗಿರುವ ನಾಲೆಯು ಸುಸಜ್ಜಿತವಾಗಿ ಆಧುನೀಕರಣಗೊಂಡಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್‌ನ ಕೊನೆಯ ಭಾಗದಿಂದ ನೀರು ಹರಿಸಿ ಆ ಕೆರೆಗಳನ್ನು ಮೊದಲ ಹಂತದಲ್ಲೇ ಕೆಳಗಡೆಯಿಂದ ಮೇಲ್ಬಾಗಕ್ಕೆ ತುಂಬಿಸಿಕೊಂಡು ಬರುವಂತೆ ಜನತೆ ಒತ್ತಾಯವಾಗಿದೆ.

Latest Videos
Follow Us:
Download App:
  • android
  • ios