ಮೂಡುಬಿದಿರೆ(ಜು.17): ಅಪ್ರಾಪ್ತೆಯನ್ನು ಅತ್ಯಾಚಾವೆಸಗಿದ ಆರೋಪದಲ್ಲಿ ಮಾರ್ಪಾಡಿಯ ಮೀನು ವ್ಯಾಪಾರಿಯನ್ನು ಪೊಲೀಸರು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿ ಸ್ಥಳೀಯ ನಿವಾಸಿ ಆಸಿಫ್‌ ಎಂದು ತಿಳಿದುಬಂದಿದೆ.

ಈತ ವೃತ್ತಿಯಲ್ಲಿ ಮೀನುವ್ಯಾಪಾರಿ. ಹತ್ತಿರದಲ್ಲಿ ವಾಸ್ತವ್ಯವಿದ್ದ ತಮಿಳು ಮೂಲದ ಕೂಲಿ ಕಾರ್ಮಿಕರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳ ಜತೆ ಈತ ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ಮನೆ ಹತ್ತಿರದ ಗುಡ್ಡೆಯಲ್ಲಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.

ತಿಂಗಳ ಹಿಂದೆ ಮೈನೆರೆದ ಅಪ್ರಾಪ್ತೆಗೆ 23ರ ಯುವಕನೊಂದಿಗೆ ವಿವಾಹ..!

ಈ ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು, ಹುಡುಗಿ ಹೆತ್ತವರ ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

ಗಂಗಾವತಿ ಸಮೀಪದ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಇಬ್ಬರು ಅತ್ಯಾಚಾರ ಎಸಗಿದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಕಲ್ಗುಡಿಯ 15 ವರ್ಷದ ಬಾಲಕಿ ಮೇಲೆ ಅದೇ ಗ್ರಾಮದ ದ್ಯಾಮಣ್ಣ (50), ಮಂಜುನಾಥ (25) ಬಾಲಕಿಯನ್ನು ಪ್ರತ್ಯೇಕ ಸ್ಥಳಗಳಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿತ್ತು.