Chikkamagaluru: ಸರ್ಕಾರದ ಕೋಟಿ-ಕೋಟಿ ಹಣ ಪ್ರಶ್ನಿಸಿ ನಕ್ಸಲ್ ಬಾಧಿತ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರ!
ರೋಡು-ನೀರು-ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯವಿಲ್ಲದೆ ಜನರ ಪರದಾಟ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಬಂದ ಕೋಟಿ-ಕೋಟಿ ಹಣ ಏನಾಯ್ತು? ನಮಗೆ ಲೆಕ್ಕ ಕೊಡಿ... ಇಲ್ಲವಾದ್ರೆ ಮತ ಹಾಕಲ್ಲ ಎಂದು ಕಾಫಿನಾಡ ನಕ್ಸಲ್ ಬಾಧಿತ ಪ್ರದೇಶದ ಜನ ಚುನಾವಣಾ ಬಹಿಷ್ಕಾರ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕಮಗಳೂರು (ಏ.1): ಕಾಫಿನಾಡು ಕಳಸವನನ್ನ ಸರ್ಕಾರ ತಾಲೂಕು ಕೇಂದ್ರವನ್ನಾಗಿ ಘೋಷಿಸಿದೆ. ಆದ್ರೆ, ಕಳಸ ಜನರ ಪಾಲಿಗೆ ಅದು ತಾಲೂಕು ಅಲ್ಲ. ದಾಖಲೆಗಷ್ಟೆ ಸೀಮಿತವಾಗಿರೋ ಶಂಕಿತ ತಾಲೂಕಾಗಿದೆ. ಕಳಸ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಹಣ ನೀಡಿದೆ. ಆದ್ರೆ, ಅಭಿವೃದ್ಧಿ ಮಾತ್ರ ಮರಿಚೀಕೆ. ರೋಡು-ನೀರು-ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯವಿಲ್ಲದ ನಕ್ಸಲ್ ಬಾಧಿತ ಗ್ರಾಮಗಳು ಇಂದಿಗೂ ಇವೆ. ಹಾಗಾದ್ರೆ, ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಂದ ಹಣ ಏನಾಯ್ತು ಅಂತ ಪ್ರಶ್ನಿಸಿದ್ದಾರೆ. ನಮಗೆ ಲೆಕ್ಕ ಕೊಡಿ... ಇಲ್ಲವಾದ್ರೆ ಮತ ಹಾಕಲ್ಲ ಎಂದು ಕಾಫಿನಾಡ ನಕ್ಸಲ್ ಬಾಧಿತ ಪ್ರದೇಶದ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ನಕ್ಸಲ್ ಬಾಧಿತ ಗ್ರಾಮಗಳು ಇಂದಿಗೂ ಅಭಿವೃದ್ದಿ ಮರಿಚೀಕೆ:
ಕಾಫಿನಾಡಲ್ಲಿ ಇಷ್ಟು ದಿನಗಳ ಕಾಲ ಸುಮಾರು 30ಕ್ಕೂ ಹೆಚ್ಚು ಹಳ್ಳಿಯ ಜನ ನಾನಾ ಕಾರಣಗಳಿಂದ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆದರೆ, ಈಗ ಮಲೆನಾಡು ಭಾಗದ ನಕ್ಸಲ್ ಬಾಧಿತ ಪ್ರದೇಶಗಳ ಗ್ರಾಮಗಳ ಸರದಿ. ಕಳಸ ತಾಲೂಕಿನ ನಕ್ಸಲ್ ಬಾಧಿತ ಪ್ರದೇಶದ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಕಾರಣ ನಮ್ಮ ಊರು ಅಭಿವೃದ್ಧಿಯಾಗಿಲ್ಲ. ನಾವು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರ ನಕ್ಸಲ್ ಬಾಧಿತ ಅಭಿವೃದ್ಧಿಗೆಂದು ಅಷ್ಟು ಕೋಟಿ ಕೊಟ್ವಿ. ಇಷ್ಟು ಕೋಟಿ ಕೊಟ್ವಿ ಎಂದು ಹೇಳುತ್ತಿದೆ. ಬಂದ ಹಣ ಎಲ್ಲೋಯ್ತು. ಏನಾಯ್ತು. ಅಭಿವೃದ್ಧಿ ಎಲ್ಲಾಯ್ತು ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ. ಇಲ್ಲಿ ಶುದ್ಧ ಗಾಳಿಯೊಂದು ಬಿಟ್ಟರೆ ಬೇರೇನೂ ಇಲ್ಲ. ಬಂದ ಹಣ ಏನಾಯ್ತು ಎಂದು ಹಳ್ಳಿಗರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಪ್ರತಿ ಚುನಾವಣೆಯಲ್ಲೂ ಸರ್ಕಾರ ನಮಗೆ ಸೌಲಭ್ಯ ಕೊಡ್ತೀವಿ ಅಂತ ಮೂಗಿಗೆ ತುಪ್ಪಾ ಸವರುತ್ತೆ. ಆದರೆ, ಈ ಬಾರಿ ಓಟ್ ಹಾಕಲ್ಲ ಅಂತ ಕಡ್ಡಿ ತುಂಡಾದಂತೆ ಸ್ಥಳೀಯರಾದ ರಾಮಮೂರ್ತಿ ಹೇಳಿದ್ದಾರೆ.
ಮತದಾನದಿಂದ ದೂರ ಉಳಿಯುವ ಎಚ್ಚರಿಕೆ:
ಕಳಸ ತಾಲೂಕಿನ ಮಾವಿನಕೆರೆ, ಕೆ.ಕೆಳಗೂರು, ಯಡೂರು, ಹಳುವಳ್ಳಿ, ಮುಜೇಖಾಣ್, ಹಂದಿಹಡ್ಲು, ಕುಂಬಳಡಿಕೆ ಸೇರಿದಂತೆ ಹಲವು ಗ್ರಾಮಗಳು ಮತದಾನದ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಮುಜೇಖಾನ್, ಹಂದಿಹಡ್ಲು, ಕುಂಬಳಡಿಕೆ ಗ್ರಾಮಗಳು ನಕ್ಸಲ್ ಬಾಧಿತ ಪ್ರದೇಶ. ಆದ್ರೆ, ಇಲ್ಲೂ ಯಾವುದೇ ಅಭಿವೃದ್ಧಿಯಾಗಿಲ್ಲ ಅಂತ ಮತದಾರರು ಮುನಿಸಿಕೊಂಡಿದ್ದಾರೆ. ಕಳೆದ 16 ವರ್ಷದ ಹಿಂದೆ ಇಲ್ಲಿನ ರಸ್ತೆಗಳು ಡಾಂಬರ್ ಕಂಡಿದ್ದು. ಈಗ ಮಣ್ಣಿನ ರಸ್ತೆಯಂತಾಗಿ ಜನ ಅದನ್ನೇ ಅವಲಂಬಿಸಿದ್ದಾರೆ.
Belagavi:ಕಾಂಗ್ರೆಸ್ ಮುಖಂಡನ ಒಡೆತನದ ಬ್ಯಾಂಕ್‌ಗೆ ಐಟಿ ದಾಳಿ, 262 ಲಾಕರ್ ಮಾಹಿತಿಗೆ ಅಪ್ಪ-
ಮಳೆಗಾದಲ್ಲಿ ಇವರ ಪಾಡು ದೇವರಿಗೆ ಪ್ರೀತಿ. ಈ ಭಾಗದಲ್ಲಿ 300 ಮನೆಗಳಿವೆ. 150 ಮಕ್ಕಳು ಶಾಲೆಗೆ ಹೋಗುತ್ತಾರೆ. ಮಕ್ಕಳನ್ನ ಕರೆದೊಯ್ಯುವ ಮಕ್ಕಳು ಜೂನ್ನಿಂದ ಆಗಲ್ಲ ಅಂತಿದ್ದಾರೆ. ವಾಹನಗಳು ಬರದಿದ್ದರೆ ಮಕ್ಕಳ ವಿಧ್ಯಾಭ್ಯಾಸ್ ಬಂದ್ ಆಗಲಿದೆ. ಮಕ್ಕಳು ನಿತ್ಯ 20 ಕಿ.ಮೀ. ಸಂಚಾರ ಮಾಡಿ ಓದೋದು ಹೇಗೆ ಅಂತಾರೆ ಪೋಷಕರು. ಆರೋಗ್ಯ ಹದಗೆಟ್ಟವರನ್ನ ಆಸ್ಪತ್ರೆಗೆ ಕರೆದೊಯ್ಯುವುದು ಕಷ್ಟ. 15 ವರ್ಷಗಳಿಂದ ಮನವಿ ಮಾಡಿದರು ಪ್ರಯೋಜನವಿಲ್ಲ. 2019ರಿಂದಲೂ ಹಣ ಬಂದಿಲ್ಲ. ಟೆಂಡರ್ ಆಗಿಲ್ಲ ಅಂತಿದ್ದಾರೆ.
UDUPI: ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ಶಸ್ತಾಸ್ತ್ರಗಳ ಠೇವಣಿಗೆ ಜಿಲ್ಲಾಧಿಕಾರಿ ಸೂಚನೆ
ಫ್ಲಡ್ ಹಣದಲ್ಲಿ ದುರಸ್ಥಿ ಮಾಡುತ್ತೇವೆ ಎಂದು ಹೇಳಿದ್ದರೂ ಏನೂ ಮಾಡಿಲ್ಲ. ಹಾಗಾಗಿ, ಈ ಬಾರಿ ಯಾರೇ ಬಂದು ಹೇಳಿದರೂ ಮತದಾನ ಮಾಡಲ್ಲ ಅಂತಿದ್ದಾರೆ. ಒಟ್ಟಾರೆ, ಕಾಫಿನಾಡಲ್ಲಿ ಇಷ್ಟೆ ಅಲ್ಲ. ಮೂಲಭೂತ ಸೌಲಭ್ಯದಿಂದ ವಂಚಿತವಾಗಿರೋ ಮಲೆನಾಡ ಕುಗ್ರಾಮಗಳು ಹತ್ತಾರಿವೆ. ಎಲ್ಲರೂ ಸೌಲಭ್ಯಗಳಿಗಾಗಿ ಸರ್ಕಾರಕ್ಕೆ ಬೇಡಿಕೊಳ್ತಾರೆ. ಆದ್ರೆ, ಅಧಿಕಾರಿಗಳು, ಜನನಾಯಕರ ಬೇಜವಾಬ್ದಾರಿ ಕಂಡು ತಮಗೆ ತಾವೇ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತಾರೆ. ಕೆಲವರು ಸರ್ಕಾರದ ಜೊತೆ ಹೊಡೆದಾಡೋ ಶಕ್ತಿ ಇಲ್ಲದೆ ಕೈಚೆಲ್ಲುತ್ತಾರೆ. ಎಲ್ಲವೂ ಅದೇ ರೀತಿ ಆಗಲ್ಲ. ಕೆಲ ಕೆಲಸಗಳು ಆಗಿವೆ. ಆದ್ರೆ, ಆಗದಿರೋದೆ ಜಾಸ್ತಿ. ಈಗ ಈ ಜನ ಕೂಡ ಸೌಲಭ್ಯಗಳಿಗಾಗಿ ಹೋರಾಡ್ತಿದ್ದಾರೆ. ಆದ್ರೆ, ಸರ್ಕಾರ-ಅಧಿಕಾರಿಗಳು ಏನ್ಮಾಡ್ತಾರೋ ಕಾದುನೋಡಬೇಕು