ಚಡಚಣ [ಜ.25]: ವಿಧಾನಸಭಾ ಚುನಾವಣೆಯ ನವದೆಹಲಿ ಮತಕ್ಷೇತ್ರ​ದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದ ಕರ್ನಾಟಕದ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಬರಡೋಲ ಗ್ರಾಮದ ವೆಂಕಟೇಶ್ವರ ಸ್ವಾಮೀಜಿ ಉಫ್‌ರ್‍ ದೀಪಕ ಅವರ ನಾಮಪತ್ರ ಶುಕ್ರ​ವಾರ ತಿರಸ್ಕೃತ​ವಾ​ಗಿದೆ. 

ಈ ಬಗ್ಗೆ ಖುದ್ದು ಅವರೇ  ಈ ಮಾಹಿತಿ ತಿಳಿ​ಸಿದ್ದು, ಅರವಿಂದ ಕೇಜ್ರಿವಾಲ್‌ ವಿರುದ್ಧ ಸ್ಪರ್ಧೆಗಿಳಿದು ನಾಮ​ಪತ್ರ ಸಲ್ಲಿ​ಸಿದ್ದೆ. ಆದರೆ ನಾಮಪತ್ರ ತಿರಸ್ಕೃತ​ವಾ​ಗಿದ್ದು ನನಗೆ ಬೇಸರ ತಂದಿದೆ ಎಂದಿದ್ದಾರೆ.

ಕೇಜ್ರಿವಾಲ್‌ ಎದುರು ಕನ್ನಡಿಗ ಸ್ವಾಮೀಜಿ ಸ್ಪರ್ಧೆ..

ನಾಗಠಾಣ ಮತಕ್ಷೇತ್ರ ಹಾಗೂ ಸೋಲಾಪುರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಪರಾಭವಗೊಂಡಿದ್ದ ಅವರು, ನರೇಂದ್ರ ಮೋದಿ ವಿರುದ್ಧವೂ ನಾಮಪತ್ರ ಸಲ್ಲಿಸಿದ್ದರು. ಆದರೆ ಅಲ್ಲಿಯೂ ನಾಮಪತ್ರ ತಿರಸ್ಕೃತ​ವಾ​ಗಿತ್ತು ಎನ್ನುತ್ತಾರೆ.