ಮೈಸೂರು (ಡಿ.19):  ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್‌ಗೆ ಬಂದರೆ ಸೇರಿಸಿಕೊಳ್ಳಬೇಡಿ ಎಂದು ಕಾಂಗ್ರೆಸ್‌ ಕಾರ್ಯಕರ್ತ ಏರು ಧ್ವನಿಯಲ್ಲಿ ಹೇಳಿದ ಪ್ರಸಂಗ ನಡೆಯಿತು.

ಅರವಿಂದನಗರದಲ್ಲಿ  ನಡೆದ ಗ್ರಾಮ ಜನಾಧಿಕಾರ ಸಭೆಯಲ್ಲಿ ಮಾಜಿ ಶಾಸಕ ಕೆ. ವೆಂಕಟೇಶ್‌ ಮಾತನಾಡುತ್ತ, ಜಿ.ಟಿ.ದೇವೆಗೌಡ ಸಿದ್ದರಾಮಯ್ಯನವ್ರೆ ಬೆಳೆಸಿದ ಶಿಷ್ಯ. 

ಬಿಡು​ವ​ವರು ಪಕ್ಷ ಬಿಡ​ಲಿ : ಜಿಟಿ​ಡಿಗೆ ಎಚ್‌​ಡಿಕೆ ಟಾಂಗ್‌ ..

ಜೆಡಿಎಸ್‌ ಬಿಜೆಪಿ ಒಳ ಒಪ್ಪಂದದಿಂದ ಸಿದ್ದರಾಮಯ್ಯ ಸೋತರು. ಅವರ ಶಕ್ತಿ ಕುಗ್ಗಿಸುವ ಸಲುವಾಗಿ ಮೈಸೂರು ಭಾಗದಲ್ಲಿ ಒಳ ಒಪ್ಪಂದ ಮಾಡಿಕೊಂಡರು. ಈ ಜಿ.ಟಿ. ದೇವೆಗೌಡ ಅನುಕೂಲ ಸಿಂಧು ರಾಜಕಾರಣಿ. ಎಲ್ಲೆಲ್ಲಿ ಅನುಕೂಲ ಆಗುತ್ತೋ ಅಲ್ಲಲ್ಲಿ ಹೋಗುತ್ತಾನೆ. ಈಗ ಕಾಂಗ್ರೆಸ್‌ಗೆ ಬರುತ್ತೀನಿ ಅಂತ ಓಡಾಡುತ್ತಿದ್ದಾನೆ ಎಂದರು.

ಈಗ ಕಾರ್ಯಕರ್ತನೋರ್ವ ಅವನು ಬಂದ್ರೆ ನಾವು ಪಕ್ಷದಲ್ಲಿ ಇರಲ್ಲ. ಬಂದರೂ ಕರೆದುಕೊಳ್ಳಬೇಡಿ ಎಂದು ಏರು ಧ್ವನಿಯಲ್ಲಿ ಹೇಳಿದರು.