Chamarajanagar: ಸ್ವಾತಂತ್ರ್ಯ ಬಂದು 76 ವರ್ಷ ಕಳೆದರು ಇನ್ನೂ ಗುಡಿಸಲುಗಳಲ್ಲೇ ಬುಡಕಟ್ಟು ಸೋಲಿಗರ ವಾಸ!

ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಕೂಡ ಮೂಲಭೂತ ಸೌಕರ್ಯಗಳನ್ನು ಕಾಣದೆ ಕಗ್ಗತ್ತಲಲ್ಲಿ ಕಂಗಾಲಾಗಿ ನರಕ ಸದೃಶದಲ್ಲಿ ಕಾಲದೂಡುತ್ತಾ ನಾಗರೀಕ ಸಮಾಜದಿಂದಲೇ ದೂರ ಉಳಿದಿರುವ ಆದಿವಾಸಿಗಳ ಗೋಳಿನ ನೈಜ ವ್ಯಥೆಯ ಕತೆಯನ್ನು ನೋಡಿ. 

76 years have passed since independence chamarajanagar district tribal losers still live in huts gvd

ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಡಿ.08): ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಕೂಡ ಮೂಲಭೂತ ಸೌಕರ್ಯಗಳನ್ನು ಕಾಣದೆ ಕಗ್ಗತ್ತಲಲ್ಲಿ ಕಂಗಾಲಾಗಿ ನರಕ ಸದೃಶದಲ್ಲಿ ಕಾಲದೂಡುತ್ತಾ ನಾಗರೀಕ ಸಮಾಜದಿಂದಲೇ ದೂರ ಉಳಿದಿರುವ ಆದಿವಾಸಿಗಳ ಗೋಳಿನ ನೈಜ ವ್ಯಥೆಯ ಕತೆಯನ್ನು ನೋಡಿ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಲಾಚ್ಚಿ ಬೆಟ್ಟದ ಬುಡದ ಕಾಡಂಚಿನಲ್ಲಿ ಬರುವ ಪುಟ್ಟ ಕುಗ್ರಾಮವೇ ಕೆ.ದೇವರಹಳ್ಳಿ.  ಈ ಗ್ರಾಮದ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ದೇವರೇ ಕಾಪಾಡಬೇಕು ಎಂಬಂತಹ ದುಸ್ಥಿತಿಯಿದೆ. 

ಜಿಲ್ಲಾ ಕೇಂದ್ರದಿಂದ ಕೇವಲ 25 ಕಿ.ಮೀ ದೂರದ ಮೂಗಿನಡಿಯಲ್ಲಿರುವ ಈ ಕುಗ್ರಾಮದ ಸಮಸ್ಯೆಗಳು ಮಾತ್ರ ನೂರಾರು ಕೇಳುವವರಾರು..? ಎಂಬುದೇ ಅಸಲಿ ಸಂಗತಿಯಾಗಿದೆ. ಸರ್ಕಾರದಿಂದ ಆದಿವಾಸಿಗಳಿಗಾಗಿ ಸಾಕಷ್ಟು ಯೋಜನೆಗಳಿವೆ.ಆದ್ರೆ ಆ ಯೋಜನೆಗಳೆಲ್ಲಾ ಎಲ್ಲಿ ಹೋದವು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಸೋಲಿಗರಿಗೆ ಈ ವಸತಿ ಯೋಜನೆಗಳು ತಲುಪುತ್ತಿಲ್ಲ. ಈಗಲೋ ಆಗಲೋ ಬೀಳುವಂತಿರುವ ಗೆದ್ದಲು ಹಿಡಿದಿರುವ ಹಳೇ ತೆಂಗಿನ ಗರಿ, ಪ್ಲಾಸ್ಟಿಕ್ ಹಾಳೆಗಳ ಹೊದಿಕೆಯ ಹುರುಕುಮುರುಕು ಜೋಪಡಿಗಳಲ್ಲೇ ಸೋಲಿಗರ ಬದುಕು ಕಳೆದು ಹೋಗ್ತಿದೆ. ಹಂದಿಗೂಡಿನಂತಿರುವ ಗುಡಿಸಲಿನಲ್ಲಿ ದಿನ ದೂಡ್ತಿದ್ದಾರೆ. 

ಪ್ರಾಣಿಗಳು ಹೆಚ್ಚಿದಾಗ ಬೇಟೆಗೆ ಅವಕಾಶ ನೀಡಿ: ಶಾಸಕ ಆರಗ ಜ್ಞಾನೇಂದ್ರ

ಗುಡಿಸಲಿಗೆ ವಿದ್ಯುತ್ ಸಂಪರ್ಕವೂ ಇಲ್ಲದೇಮತ್ತೊಂದೆಡೆ ಸೀಮೆಎಣ್ಣೆ ಸರಬರಾಜು ಕೂಡ ಕತ್ತಲಲ್ಲಿ ವಾಸಿಸುತ್ತಿದ್ದಾರೆ. ಎಲ್ಲಿ ಮೈಮೇಲೆ ಬೀಳುವುದೋ ಎಂಬ ಆತಂಕದಿ0ದಲೇ ಹಾಗೂ ವಿಷ ಜಂತುಗಳ ಭಯದಿಂದಲೇ ಜೀವವನ್ನು ಕೈಯಲ್ಲಿ ಹಿಡಿದು ಅರೆಬರೆ ನಿದ್ರೆಯಲ್ಲಿ ಕಾಲ ದೂಡಬೇಕಾದ ಕರಾಳ ಜೀವನ ಇಲ್ಲಿಯ ಜನರದ್ದು.   ಮಳೆ ಬಂದ್ರೆ ಜಾಗರಣೆಯೇ ಗಟ್ಟಿ ಅಂತಾರೆ. ಇನ್ನೂ ಗ್ರಾಮದಲ್ಲಿ 70 ಕುಟುಂಬಗಳಿದ್ದು, 55 ಕುಟುಂಬಗಳಿಗೆ ಕೂಲಿನಾಲಿಯೇ ಗತಿಯಾಗಿದೆ. ಎಲ್ಲಾ ವಸತಿ ಯೋಜನೆ ಮಾತ್ರ ಇವರಿಗೆ ಗಗನ ಕುಸುಮವಾಗಿದೆ. 

ಕೇವಲ  15 ಕುಟುಂಬಗಳಿಗೆ ಮಾತ್ರ ಅರಣ್ಯ ಇಲಾಖೆ ಅರಣ್ಯ ಹಕ್ಕು ಕಾಯ್ದೆಯಡಿ ತಲಾ ಒಂದು ಎಕರೆ ಜಮೀನು ಕೊಡಲಾಗಿದೆ. ಅದರಲ್ಲಿ ಮಳೆಗಾಲದಲ್ಲಿ ಮಾತ್ರ ಆನೆ ಹಂದಿ ಮುಂತಾದ ಕಾಡು ಪ್ರಾಣಿಗಳ ಉಪಟಳವನ್ನು ಸಹಿಸಿಕೊಂಡು ಅಷ್ಟೋ ಇಷ್ಟೋ ರಾಗಿಯನ್ನು ಬೆಳೆದು ಊಟಕ್ಕೆ ದಾಸ್ತಾನು ಇಟ್ಟುಕೊಳ್ಳುತ್ತಾರೆ. ಉಳಿದ ಕುಟುಂಬಗಳವರು ಅಕ್ಕಪಕ್ಕದಲ್ಲಿರುವ ಕೇರಳಾದವರ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಉಳಿದ 55 ಕುಟುಂಬಕ್ಕೆ ಕೂಲಿಯೇ ಗತಿಯಾಗಿದೆ. ರಾತ್ರಿ ವೇಳೆ ಜೀವ ಭಯದಲ್ಲಿ ಜನರು ವಾಸಿಸುತ್ತಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ: ಶಾಸಕ ಪ್ರದೀಪ್ ಈಶ್ವರ್ ಮನವಿ

ಐದು ವರ್ಷಕ್ಕೊಮ್ಮೆ ಮತ ಕೇಳಲೂ ಬರುವ ಜನಪ್ರತಿನಿಧಿಗಳು ಚುನಾವಣೆ ಬಳಿಕ ಇತ್ತ ತಿರುಗಿಯೂ ನೋಡಲ್ಲ ಅಂತಿದ್ದಾರೆ.ಸೋಲಿಗರ ಪಾಲಿಗಂತೂ ಕಣ್ಣೀದ್ದು ಪರಿಶಿಷ್ಟ ಪಂಗಡ ಇಲಾಖೆ ಕುರುಡಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಾರೆ. ಒಟ್ನಲ್ಲಿ ಇದು ದೇವರಹಳ್ಳಿ ಸೋಲಿಗರ ಕರುಣಾಜನಕ ಕಥೆಯಾಗಿದೆ.ಸಂಕಷ್ಟದಲ್ಲಿರುವ  ಸೋಲಿಗರ ಕಷ್ಟಕ್ಕೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಧಾವಿಸಬೇಕಿದೆ. ಮೂಲಭೂತ ಸೌಕರ್ಯ ಒದಗಿಸಬೇಕಿದೆ. ಪರಿಶಿಷ್ಟ ಪಂಗಡಗಳ ಇಲಾಖೆ ಇನ್ನಾದ್ರೂ ಜನರ ಸಂಕಷ್ಟಕ್ಕೆ ಧಾವಿಸುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.

Latest Videos
Follow Us:
Download App:
  • android
  • ios