ವರುಣಾದಲ್ಲಿಲ್ಲ ವಿಜಯೇಂದ್ರ ಸ್ಪರ್ಧೆ: ಏನಾಂತರೆ ಡಾ.ಯತೀಂದ್ರ?

ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ ಅವರ ಅಖಾಡ. ಈ ಬಾರಿ ಮಗ ಡಾ.ಯತೀಂದ್ರ ಅವರನ್ನು ರಾಜಕೀಯಕ್ಕೆ ಪರಚಯಿಸುತ್ತಿರುವ ಸಿಎಂ, ತಮ್ಮ ಕ್ಷೇತ್ರವನ್ನು ಚಾಮುಂಡೇಶ್ವರಿಗೆ ಬದಲಾಯಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರು ಸ್ಪರ್ಧಿಸಲು ಪಕ್ಷ ಅನುವು ಮಾಡಿಕೊಟ್ಟಿಲ್ಲ. ಅತೀವ ಕುತೂಹಲಕ್ಕೆ ಕಾರಣವಾದ ವರುಣಾ ಕಣವೀಗ ಡಲ್ಲಾಗಿದೆ. ಬೆಳವಣಿಗೆಗಳಿಂದ ಡಾ.ಯತೀಂದ್ರ ಅವರ ವಿಶ್ವಾಸ ಹೆಚ್ಚಾಗಿದೆಯೇ? ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು ಹೇಳಿದ್ದೇನು?
 

Comments 0
Add Comment