ಜಗ್ಗೇಶ್ ಸ್ಪರ್ಧೆ: ಚುನಾವಣಾಧಿಕಾರಿಗಳಿಗೆ ಅಭ್ಯರ್ಥಿ ಮನವಿ

ಬೆಂಗಳೂರು(ಏ.28): ಜಗ್ಗೇಶ್ ನಟಿಸಿರುವ ಸಿನಿಮಾ, ರಿಯಾಲಿಟಿ ಶೋಗಳ ಪ್ರಸಾರ ನಿಷೇಧಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಯಶವಂತಪುರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಮನವಿ ಮಾಡಿದ್ದಾರೆ.
ಜಗ್ಗೇಶ್ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಾರಣ ಟಿವಿಗಳಲ್ಲಿ ಜಗ್ಗೇಶ್ ಸಿನಿಮಾ, ರಿಯಾಲಿಟಿ ಶೋಗಳು ಪ್ರಸಾರದಿಂದ ಪರಿಣಾಮ ಉಂಟಾಗುತ್ತದೆ. ಇದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದ್ದು ತಕ್ಷಣ ನಿಷೇಧಿಸುವಂತೆ ಸೋಮಶೇಖರ್ ಮನವಿ ಮಾಡಿದ್ದಾರೆ.  

Comments 0
Add Comment