ವಂದೇಮಾತರಂ ಗೀತೆಗೆ ರಾಹುಲ್ ಅಗೌರವ : ಬೇಗ ಮುಗಿಸಿ ಎಂದ ನಾಯಕ

ಧರ್ಮಸ್ಥಳ(ಏ.27): ವಂದೇಮಾತರಂ ಗೀತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಗೌರವ ತೋರಿದ ಘಟನೆ ಬಂಟ್ವಾಳ ಕಾಂಗ್ರೆಸ್ ಸಮಾವೇಶದಲ್ಲಿ ನಡೆದಿದೆ.
ವಂದೆ ಮಾತರಾಂ ಗೀತೆ ಹಾಡುತ್ತಿರುವಾಗ ಒಂದೇ ಸಾಲಿನಲ್ಲಿ ಹೇಳಿ ಮುಗಿಸಿಬಿಡಿ ಎಂದು ರಾಹುಲ್ ಹೇಳಿದ್ದಾರೆ. ಧರ್ಮಸ್ಥಳಕ್ಕೆ ಹೋಗಬೇಕಾದ ಹಿನ್ನಲೆಯಲ್ಲಿ ತಮ್ಮ ಗಡಿಯಾರ ನೋಡಿಕೊಳ್ಳುತ್ತಿದ್ದ ಅವರು ಬೇಗ ಹಾಡು ಮುಗಿಸಿ ಎಂದಿದ್ದಾರೆ. ರಾಹುಲ್ ಆದೇಶಕ್ಕೆ ತಲೆಬಾಗಿ ತರಾತುರಿಯಲ್ಲಿ ಗೀತೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

Comments 0
Add Comment