ನಿಖಿಲ್ ಗರಂಗೆ ಮಾಗಡಿ ನಾಯಕ ಉಲ್ಟಾ

ರಾಮನಗರ(ಏ.28): ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಗಡಿಯ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ನಡುವಿನ ಕ್ಯಾಸೆಟ್ ಮಾತುಗಳು ತಾರಕಕ್ಕೇರಿವೆ.
ಪ್ರಚಾರದ ಸಂದರ್ಭವೊಂದರಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಜಾತಕ ಬಯಲು ಮಾಡುತ್ತೇನೆ ಎಂದಿದ್ದರು. ಇದಕ್ಕೆ ಆಕ್ರೋಶದಿಂದ ಪ್ರತಿಕ್ರಿಯೆ ನೀಡಿದ್ದ ನಿಖಿಲ್ ತಾಕತ್ತಿದ್ದರೆ ಮಾಡಲಿಕ್ಕೆ ಹೇಳಿ.ಯಾವ ರೀತಿ ಎಚ್.ಸಿ.ಬಾಲಕೃಷ್ಣ ಬೆನ್ನಿಗೆ ಚೂರಿ ಚುಚ್ಚಿಹೋಗಿದ್ದಾರೆ ಗೊತ್ತಿದೆ’ಎಂದಿದ್ದರು. ಅನಂತರ ಮತ್ತೆ ವಿವಾದದ ಬಗ್ಗೆ ಮಾತನಾಡಿದ್ದ ಬಾಲಕೃಷ್ಣ ’ಅವರಿಗೆ ನಾನೇನು ಹೇಳಿಲ್ಲ, ಯಾರೋ ತಪ್ಪಾಗಿ ಬರೆದಿದ್ದಾರೆ. ನಾನು ಹೇಳ್ದೆ, ನಿಖಿಲ್ ಗೌಡ್ರು ಕೆಲವು ವಿಚಾರವನ್ನ ಹಗುರವಾಗಿ ಮಾತನಾಡ್ತಾರೆ. ಮಾತಾಡೋದು ಬೇಡ ಎಂದಿದ್ದರು.

Comments 0
Add Comment