ಟಿಕೆಟ್ ಕೈತಪ್ಪಿಲ್ಲ, ನಾನೇ ಬೇಡ ಅಂದಿದ್ದೆ: ವಕೀಲ ಚಂದ್ರಮೌಳಿ

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಭಾನುವಾರ ಅಭ್ಯರ್ಥಿಗಳ ಅಂತಿಮಪಟ್ಟಿ ಬಿಡುಗಡೆ ಮಾಡಿದ್ದು, ಮಡಿಕೇರಿ ಅಭ್ಯರ್ಥಿ ಚಂದ್ರಮೌಳಿಯವನ್ನು ಕೈಬಿಡಲಾಗಿದೆ.

ಬ್ರಿಜೇಶ್ ಕಾಳಪ್ಪನವರು ನನ್ನನ್ನು  ‘ಚೋಕ್ಸಿ ಲಾಯರ್’ಎಂದು ಬಿಂಬಿಸಿದ್ದು, ಬಿಜೆಪಿ ಅದನ್ನೇ ದೊಡ್ಡ ವಿಷಯ ಮಾಡಿದೆ. ಯಾವುದೋ ಒಂದು ಕಾಲದಲ್ಲಿ, ಒಂದು ಪ್ರಕರಣದಲ್ಲಿ ಚೋಕ್ಸಿ ಪರ ವಕಾಲತ್ತು ಹಾಕಿದ್ದೆ. ಈಗ ನಾನವರ ಲಾಯರ್ ಆಗಿಲ್ಲ. ಆ ಪ್ರಕರಣ ಮುಗಿದು ಹೋದ ಅಧ್ಯಾಯ. ಪಕ್ಷಕ್ಕೆ ಮುಜುಗರವಾಗಬಾರದೆಂದು ನಾನೇ ಟಿಕೆಟ್ ಬೇಡವೆಂದು ಪತ್ರಬರೆದಿದ್ದೆ. ಎಂದು ಚಂದ್ರಮೌಳಿ ಹೇಳಿದ್ದಾರೆ.

Comments 0
Add Comment