ನಾಮಪತ್ರ ಸಲ್ಲಿಕೆ ವೇಳೆ ಪ್ರತಿಸ್ಪರ್ಧಿ ತಾಯಿಯ ಕಾಲಿಗೆ ಬಿದ್ದ ಸಚಿವ!

ಉಡುಪಿ (ಏ. 23): ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ನಾಮಪತ್ರ ಸಲ್ಲಿಕೆ ವೇಳೆ ಗಮನ ಸೆಳೆದಿದ್ದಾರೆ.  ನಾಮಪತ್ರ ಸಲ್ಲಿಕೆ ವೇಳೆ ಪ್ರತಿಸ್ಪರ್ಧಿ ರಘುಪತಿ ಭಟ್ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.  

ಪ್ರತಿಸ್ಪರ್ಧಿಯ ತಾಯಿಯ ಕಾಲು ಮಟ್ಟಿ ನಮಸ್ಕರಿಸುತ್ತಾ, ರಾಜಕೀಯಕ್ಕಿಂತ ಸಂಸ್ಕಾರ ಮುಖ್ಯ ಎಂದು ಮಧ್ವರಾಜ್ ತೋರಿಸಿದ್ದಾರೆ.  ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್, ಬಿಜೆಪಿ ಅಭ್ಯರ್ಥಿಯಾಗಿ ರಘುಪತಿ ಭಟ್ ಸ್ಪರ್ಧಿಸಲಿದ್ದಾರೆ. 

Comments 0
Add Comment