ಲೋಕಪಾಲ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನ

ಲೋಕಪಾಲ ಸಂಸ್ಥೆಗೆ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಕ್ಕೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ

Search Committee for Lokpal invites applications

ನವದೆಹಲಿ[ಫೆ.07]: ಭ್ರಷ್ಟಾಚಾರ ನಿಗ್ರಹಕ್ಕೆ ಬ್ರಹ್ಮಾಸ್ತ್ರ ಎಂದೇ ಪರಿಗಣಿತ ಲೋಕಪಾಲ ಸಂಸ್ಥೆಗೆ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಕ್ಕೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ. ಲೋಕಪಾಲ ಮುಖ್ಯಸ್ಥ ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ, ಸಾರ್ವಜನಿಕ ಆಡಳಿತ, ವಿಚಕ್ಷಣ, ಇನ್ಶೂರೆನ್ಸ್‌ ಮತ್ತು ಬ್ಯಾಂಕಿಂಗ್‌ ಸೇರಿದಂತೆ ಇತರೆ ಆರ್ಥಿಕ ಸಂಸ್ಥೆಗಳು ಹಾಗೂ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಕನಿಷ್ಠ 25 ವರ್ಷ ಕೆಲಸ ಮಾಡಿದ ಅನುಭವ ಹಾಗೂ 45 ವರ್ಷದೊಳಗಿನ ಅಭ್ಯರ್ಥಿಗಳು ಫೆ.22 ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ನಿಯಮಗಳ ಪ್ರಕಾರ ಲೋಕಪಾಲಕ್ಕೆ ಓರ್ವ ಮುಖ್ಯಸ್ಥ ಹಾಗೂ ಗರಿಷ್ಠ 8 ಸದಸ್ಯರ ಪೈಕಿ ಕನಿಷ್ಠ ನಾಲ್ಕು ಸದಸ್ಯರು ನ್ಯಾಯಾಂಗದಲ್ಲಿ ಕೆಲಸ ಮಾಡಿದ ಅನುಭವ ಉಳ್ಳವರಾಗಿರಬೇಕು. ಅಲ್ಲದೆ, ಕನಿಷ್ಠ 50ರಷ್ಟುಲೋಕಪಾಲ ಸದಸ್ಯರು ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಹಾಗೂ ಮಹಿಳಾ ಅಭ್ಯರ್ಥಿಗಳಾಗಿರಬೇಕು.

ಲೋಕಪಾಲರ ಅಧಿಕಾರಾವಧಿ: 5 ವರ್ಷಗಳು(ಲೋಕಪಾಲರಿಗೆ 70 ವರ್ಷ ಪೂರ್ಣವಾಗುವವರೆಗೂ)

ವೇತನ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ನಿಗದಿಪಡಿಸಲಾಗುವ ವೇತನ ಹಾಗೂ ಎಲ್ಲ ಸೌಲಭ್ಯಗಳು

ಲೋಕಪಾಲ ಸದಸ್ಯರ ವೇತನ ಹಾಗೂ ಸೌಲಭ್ಯಗಳು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಗೆ ಸರಿ ಸಮಾನವಾಗಿರುತ್ತವೆ.

Latest Videos
Follow Us:
Download App:
  • android
  • ios