Asianet Suvarna News Asianet Suvarna News

ಅತೀಕ್‌ ಹತ್ಯೆ: ಯುಪಿ ಪೊಲೀಸರಿಗೆ ಮಾನವ ಹಕ್ಕು ಆಯೋಗ ನೋಟಿಸ್‌

ಗ್ಯಾಂಗ್‌ಸ್ಟರ್‌ ಅತೀಕ್‌ ಅಹಮದ್‌ ಮತ್ತು ಆತನ ಸಹೋದರ ಆಶ್ರಫ್‌ ಹತ್ಯೆಯ ಕುರಿತು ಸ್ವತಂತ್ರ ತನಿಖೆ ಕೋರಿದ್ದ ಎರಡ ಅರ್ಜಿಗಳನ್ನು ಏ.24ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಮಂಗಳವಾರ ಸಮ್ಮತಿಸಿದೆ.

Uttar Pradesh Gangster Atiqs murder case Human Rights Commission sent notice to UP police akb
Author
First Published Apr 19, 2023, 8:06 AM IST | Last Updated Apr 19, 2023, 8:06 AM IST

ನವದೆಹಲಿ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹಮದ್‌ ಮತ್ತು ಆತನ ಸಹೋದರ ಆಶ್ರಫ್‌ ಹತ್ಯೆಯ ಕುರಿತು ಸ್ವತಂತ್ರ ತನಿಖೆ ಕೋರಿದ್ದ ಎರಡ ಅರ್ಜಿಗಳನ್ನು ಏ.24ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಮಂಗಳವಾರ ಸಮ್ಮತಿಸಿದೆ. ಶನಿವಾರ ಅತೀಕ್‌ನನ್ನು ಆತಿಕ್‌ ವೈದ್ಯಕೀಯ ಪರೀಕ್ಷೆಗಾಗಿ ಪ್ರಯಾಗ್‌ರಾಜ್‌ನ ಆಸ್ಪತ್ರೆಗೆ ಕರೆತಂದ ವೇಳೇ ಮೂವರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಹತ್ಯೆ ಮತ್ತು ಉತ್ತರಪ್ರದೇಶದಲ್ಲಿ 2017ರಿಂದ ನಡೆದ 183 ಎನ್‌ಕೌಂಟರ್‌ಗಳ ಕುರಿತು ತನಿಖೆಗೆ ಆದೇಶಿಸುವಂತೆ ಕೋರಿ ವಕೀಲ ವಿಶಾಲ್‌ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾ.ಡಿ.ವೈ.ಚಂದ್ರಚೂಡ್‌ ಅವರ ನ್ಯಾಯಪೀಠವು ಕೈಗೆತ್ತಿಕೊಂಡಿದೆ.

ಮಾನವ ಹಕ್ಕು ಆಯೋಗ ನೋಟಿಸ್‌

ಮತ್ತೊಂದೆಡೆ ಪೊಲೀಸರ ಬೆಂಗಾವಲಿದ್ದಾಗಲೇ ಗ್ಯಾಂಗ್‌ಸ್ಟರ್‌, ಮಾಜಿ ಸಂಸದ ಅತೀಕ್‌ ಅಹ್ಮದ್‌ ಹಾಗೂ ಸಹೋದರ ಅಶ್ರಫ್‌ರ ಕೊಲೆ ಹೇಗಾಯಿತು. ಈ ಕುರಿತು ನಾಲ್ಕು ವಾರಗಳೊಳಗಾಗಿ ವರದಿ ನೀಡಿ ಎಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಪೊಲೀಸರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನೋಟಿಸ್‌ ನೀಡಿದೆ.

ಯೋಗಿ ಆದಿತ್ಯನಾಥ್‌ ಎಚ್ಚರಿಕೆ 
ಈಗ ಉತ್ತರಪ್ರದೇಶದಲ್ಲಿ ಮಾಫಿಯಾದವರು ಯಾರನ್ನು ಬೆದರಿಸಲು ಸಾಧ್ಯವಿಲ್ಲ. ಮೊದಲು ಯಾರು ಯುಪಿಗೆ ಭಯ ಹುಟ್ಟಿಸಿದ್ದರೂ, ಅವರಿಗೆ ಇಂದು ಯುಪಿ ಭಯ ಹುಟ್ಟಿಸುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಎಚ್ಚರಿಕೆ ನೀಡಿದ್ದಾರೆ. ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಮತ್ತು ಆತನ ಸೋದರನ ಹತ್ಯೆಯ ಬೆನ್ನಲ್ಲೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ,‘2017ಕ್ಕೂ ಮೊದಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಆದರೆ 2017ರಿಂದ 2023ರವರೆಗೆ ರಾಜ್ಯದಲ್ಲಿ ಯಾವುದೇ ದಂಗೆಗಳು ನಡೆದಿಲ್ಲ. ನಿಷೇದಾಜ್ಞೆ ವಿಧಿಸಬೇಕಾದಂತಹ ಪರಿಸ್ಥಿತಿಗಳು ನಿರ್ಮಾಣವಾಗಿಲ್ಲ ಎಂದು ಹೇಳಿದರು.

ಏಕತೆಯ ಅಗತ್ಯವನ್ನು ಎತ್ತಿ ಹಿಡಿದ ಅತೀಖ್‌ ಅಹ್ಮದ್‌ ಹತ್ಯೆ: ಇದೇ ನಾವು ಕಲಿಯಬೇಕಿರೋ ಪಾಠ!

ಕೆಲ ದಿನಗಳ ಹಿಂದಷ್ಟೇ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ (samajavadi party) ನಾಯಕರ ಟೀಕೆಗೆ ವಿರುದ್ಧವಾಗಿ ಗುಡುಗಿದ್ದ ಸಿಎಂ ಯೋಗಿ ಮಾಫಿಯಾದವರನ್ನು ಮಣ್ಣಲ್ಲಿ ಮಣ್ಣು ಮಾಡಿ ಹಾಕುತ್ತೇವೆ ಎಂದಿದ್ದರು. ಅದಾದ ಕೆಲ ದಿನಗಳಲ್ಲೇ ಅತೀಕ್‌ನ ಪುತ್ರ ಎನ್‌ಕೌಂಟರ್‌ನಲ್ಲಿ (encounter) ಹತ್ಯೆಯಾಗಿದ್ದ.ಮಗಳು, ಮೃತರ ವೈದೈಕೀಯ ವರದಿ, ವಿಚಾರಣಾ ವರದಿ, ಮರಣೋತ್ತರ ಪರೀಕ್ಷಾ ವರದಿ ಹಾಗೂ ಅದರ ವೀಡಿಯೋಗಳನ್ನು ಒದಗಿಸಬೇಕೆಂದು ಸೂಚಿಸಿದೆ.

ಅತೀಕ್‌ ವಕೀಲರ ಮನೆ ಬಳಿ ಬಾಂಬ್‌

ಕೊಲೆಯಾದ ಉತ್ತರಪ್ರದೇಶದ ಗ್ಯಾಂಗ್‌ಸ್ಟರ್‌ ಹಾಗೂ ಮಾಜಿ ಸಂಸದ ಅತೀಕ್‌ ಅಹ್ಮದ್‌ನ (Atiq ahmed) ವಕೀಲ ದಯಾಶಂಕರ್‌ ಮಿಶ್ರಾ (Dayashankar mishra) ಮನೆಯ ಬಳಿ ಕಚ್ಚಾ ಬಾಂಬ್‌ ಎಸೆಯಲಾಗಿದೆ. ಕತ್ರಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೇ ಈ ಬಾಂಬ್‌ ಅನ್ನು ವಕೀಲರನ್ನು ಗುರಿಯಾಗಿಸಿ ಎಸೆಯಲಾಗಿಲ್ಲ. ಬದಲಾಗಿ ಇದು ಇಬ್ಬರು ಯುವಕರ ನಡುವಿನ ವೈಯಕ್ತಿಕ ದ್ವೇಷವಾಗಿದೆ. ಇದೊಂದು ತಾಕತಾಳೀಯ ಘಟನೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಇದು ಭಯ ಹುಟ್ಟಿಸುವಂತಹ ಭಯೋತ್ಪಾದನಾ ಚಟುವಟಿಕೆ ಎಂದು ವಕೀಲರು ಆಕ್ರೋಶಿಸಿದ್ದಾರೆ. ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ರನ್ನು ಗುರುವಾರ ಮೂವರು ಯುವಕರು ಗುಂಡಿಕ್ಕಿ ಕೊಲೆ ಮಾಡಿದ್ದರು. ಹೀಗಾಗಿ ಈ ಘಟನೆ ಕೆಲ ಕಾಲ ಭಾರಿ ಆತಂಕಕ್ಕೆ ಕಾರಣವಾಗಿತ್ತು.

ಅತೀಕ್ ಅಹಮ್ಮದ್ ವಕೀಲನ ಮನೆ ಮೇಲೆ ಬಾಂಬ್ ಎಸೆತ, ಯುಪಿಯಲ್ಲಿ ಮತ್ತೆ ಸೇಡಿನ ಸಮರ!

Latest Videos
Follow Us:
Download App:
  • android
  • ios