ಬಾಲಿವುಡ್‌ನ ಅಣ್ಣ ಅಂದರೆ ಅದು ಸುನಿಲ್ ಶೆಟ್ಟಿ 63ರ ಹರೆಯದಲ್ಲೂ ನಟ ಸುನೀಲ್ ಶೆಟ್ಟಿ ಅವರ ಫಿಟ್ನೆಸ್ ನೋಡಿದರೆ ಎಂತಹವರಿಗೂ ಅಚ್ಚರಿಯಾಗುತ್ತದೆ. ಹಾಗಿದ್ರೆ ನಟನ ಈ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು ಇಲ್ಲಿದೆ ಮಾಹಿತಿ.
63ರಲ್ಲೂ ಫಿಟ್& ಫೈನ್
ಬಾಲಿವುಡ್‌ನ ಅಣ್ಣ ಅಂದರೆ ಸುನಿಲ್ ಶೆಟ್ಟಿ ಅವರ ಫಿಟ್ನೆಸ್‌ಗೆ ಎಲ್ಲರೂ ಮನಸೋತಿದ್ದಾರೆ. ಅವರನ್ನು ನೋಡಿದ ಯಾರಿಗೂ ಅವರಿಗೆ 63 ವರ್ಷ ಅಂತ ಊಹಿಸುವುದು ಕಷ್ಟ.
28 ಇಂಚಿನ ಜೀನ್ಸ್ ಧರಿಸುವ ಅಣ್ಣ
ವರದಿಗಳ ಪ್ರಕಾರ, ಸುನೀಲ್ ಶೆಟ್ಟಿ ಇಂದಿಗೂ ಧರಿಸುವ ಜೀನ್ಸ್‌ನ ಸೊಂಟದ ಸೈಜ್ ಕೇವಲ 28 ಇಂಚು. ಇಷ್ಟೊಂದು ಫಿಟ್ ಆಗಿರಲು ಸುನಿಲ್ ಕಟ್ಟುನಿಟ್ಟಿನ ದಿನಚರಿ ಪಾಲಿಸುತ್ತಾರೆ. ಅವರ ಫಿಟ್ನೆಸ್ ರಹಸ್ಯ ಇಲ್ಲಿದೆ.
6 ಗಂಟೆಗೆ ಏಳುವ ಸುನಿಲ್ ಶೆಟ್ಟಿ?
ಸುನಿಲ್ ಒಮ್ಮೆ ಹೇಳಿದ್ದರು, ಅವರು ಪ್ರತಿದಿನ ಬೆಳಿಗ್ಗೆ5 ರಿಂದ 6 ಗಂಟೆಯ ನಡುವೆ ಎದ್ದೇಳುತ್ತಾರಂತೆ. ಫ್ರೆಶ್ ಆದ ನಂತರ ಒಂದು ಗಂಟೆ ಯೋಗ ಮತ್ತು ಪ್ರಾಣಾಯಾಮ ಮಾಡುತ್ತಾರಂತೆ
ಫಿಟ್ನೆಸ್ ಸೀಕ್ರೇಟ್
ಅಣ್ಣ ಪ್ರತಿದಿನ40-45 ನಿಮಿಷ ಜಿಮ್‌ನಲ್ಲಿ ವರ್ಕೌಟ್. ದೇಹದ ಪ್ರತಿ ಸ್ನಾಯುಗಳಿಗೂ 3-4 ಸೆಟ್ ವ್ಯಾಯಾಮ ಮಾಡುತ್ತಾರೆ. ಭಾರವಾದ ತೂಕಕ್ಕಿಂತ ಹಗುರವಾದ ತೂಕಕ್ಕೆ ಆದ್ಯತೆ ನೀಡುತ್ತಾರೆ.
ಆಹಾರ ಏನು
ಶೆಟ್ಟಿ ಮನೆಯಲ್ಲಿ ತಯಾರಿಸಿದ ಸರಳ ಆಹಾರಕ್ಕೆ ಆದ್ಯತೆ ನೀಡ್ತಾರೆ. ಸಂಸ್ಕರಿಸಿದ ಆಹಾರ, ಬಿಳಿ ಅಕ್ಕಿ, ಬ್ರೆಡ್ ಸಕ್ಕರೆ ತಿನ್ನುವುದಿಲ್ಲ. ಅವರು ಧಾನ್ಯಗಳು ಮತ್ತು ಅವುಗಳ ಸಂಸ್ಕರಿಸದ ಆವೃತ್ತಿಗಳನ್ನು ಇಷ್ಟಪಡುತ್ತಾರೆ.
ಊಟದ ನಂತರ ವಾಕ್
ಸುನಿಲ್ ಶೆಟ್ಟಿ ಊಟ ಅಥವಾ ತಿಂಡಿಯ ನಂತರ ವಾಕ್ ಮಾಡ್ತಾರೆ ಇದಲ್ಲದೆ, ಲಿಫ್ಟ್ ಅಥವಾ ಎಲಿವೇಟರ್ ಬಳಸುವ ಬದಲು ಮೆಟ್ಟಿಲುಗಳನ್ನು ಬಳಸಲು ಇಷ್ಟಪಡುತ್ತಾರೆ.
10ಗಂಟೆಗೆಲ್ಲಾ ಗುಡ್‌ನೈಟ್
ವರದಿಗಳ ಪ್ರಕಾರ, ಸುನಿಲ್ ಶೆಟ್ಟಿ ರಾತ್ರಿ 9 ರಿಂದ 10 ಗಂಟೆಯ ನಡುವೆ ಮಲಗುತ್ತಾರೆ. ಇದರಿಂದ ಮರುದಿನದ ದಿನಚರಿಗೆ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ.