Asianet Suvarna News Asianet Suvarna News

ಪರೀಕ್ಷೆಯಲ್ಲಿ ಹೃದಯದ ಚಿತ್ರ ಬಿಡಿಸಿ ಗೆಳೆತಿಯರ ಹೆಸರು ಬರೆದ ವಿದ್ಯಾರ್ಥಿ, ಕಕ್ಕಾಬಿಕ್ಕಿಯಾದ ಟೀಚರ್!

ಹೃದಯ ರೇಖಾ ಚಿತ್ರ ಬಿಡಿಸಿ ಕೋಣೆಗಳು ಹಾಗೂ ಅವುಗಳ ಕಾರ್ಯಗಳನ್ನು ವಿವರಿಸಿ ಅನ್ನೋ ಪ್ರಶ್ನೆಗೆ ವಿದ್ಯಾರ್ಥಿಯ ಉತ್ತರ ನೋಡಿ ಟೀಚರ್ ಬೆರರಾಗಿದ್ದಾರೆ. ತನ್ನ ಗೆಳೆತಿಯರ ಹೆಸರು ಮಾತ್ರವಲ್ಲ, ಪ್ರತಿಯೊಬ್ಬರು ಕಾರ್ಯಗಳನ್ನೂ ವಿವರಿಸಿದ್ದಾನೆ. ಈ ಉತ್ತರ ಪತ್ರಿಕೆ ವೈರಲ್ ಆಗಿದೆ. 
 

Students write girlfriends names in exam answer sheet for heart diagram Question ckm
Author
First Published Jun 22, 2024, 9:33 AM IST | Last Updated Jun 22, 2024, 8:43 PM IST

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತರಗಳು ಹಲವು ಬಾರಿ ವೈರಲ್ ಆಗಿದೆ.ಹಾಡು, ಜೋಕ್ಸ್, ಡೈಲಾಗ್ ಹೀಗೆ ಊಹೆಗೂ ನಿಲುಕದ ಉತ್ತರಗಳನ್ನು ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದೆ. ಇದೀಗ ವಿದ್ಯಾರ್ಥಿಯೊಬ್ಬನ ಉತ್ತರಕ್ಕೆ ಟೀಚರ್ ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ.  ಹೃದಯದ ರೇಖಾ ಚಿತ್ರ ಬಿಡಿಸಿ ಹೃದಯದ ಕೋಣೆಗಳು ಹಾಗೂ ಅವುಗಳ ಕಾರ್ಯಗಳನ್ನು ವಿವರಿಸಲು ಸೂಚಿಸಲಾಗಿತ್ತು. ಆದರೆ ವಿದ್ಯಾರ್ಥಿ ಹೃದಯದ ಚಿತ್ರ ಬಿಡಿಸಿ ತನ್ನ ಕ್ರಶ್ ಹೆಸರು ಬರೆದು ಅವರ ಕಾರ್ಯಗಳನ್ನು ಬರೆದಿದ್ದಾರೆ.

ಕೇಳಿದ ಪ್ರಶ್ನೆಗೆ ಉತ್ತರ ಬರೆದ ವಿದ್ಯಾರ್ಥಿ, ಹೃದಯದ ರೇಖಾಚಿತ್ರ ಬಿಡಿಸಿ ಕೋಣೆಗಳನ್ನು ಚಿತ್ರಿಸಿದ್ದಾನೆ. ಈ ಕೋಣೆಗಳಲ್ಲಿ ಪ್ರಿಯಾ, ರೂಪಾ, ಪೂಜಾ, ನಮತಿ ಹಾಗೂ ಹರ್ಷಿಕಾ ಎಂದು ಬರೆದಿದ್ದಾನೆ. ಇದಕ್ಕೆ ವಿವರಣೆಯನ್ನೂ ವಿದ್ಯಾರ್ಥಿ ನೀಡಿದ್ದಾನೆ. ಪ್ರಿಯಾ ಯಾವತ್ತೂ ನನ್ನ ಜೊತೆ ಇನ್‌ಸ್ಟಾಗ್ರಾಂ ಮೂಲಕ ಚಾಟ್ ಮಾಡುತ್ತಾಳೆ. ನನಗೆ ಆಕೆ ತುಂಬಾ ಇಷ್ಟ. ರೂಪ ನನ್ನ ಜೊತೆಗೆ ಸ್ನಾಪ್‌ಚಾಟ್ ಜೊತೆ ಚಾಟಿಂಗ್ ಮಾಡುತ್ತಾಳೆ. ಕ್ಯೂಟ್ ಗರ್ಲ್ ಎಂದು ವಿವರಿಸಿದ್ದಾನೆ. ಇನ್ನು ನಮಿತಾ ನೆರೆಮನೆಯವರು ಮಗಳು, ಉದ್ದ ಕೂದಲು ಹಾಗೂ ದುಂಡಗಿನ ಕಣ್ಣಗಳು ಎಂದು ಉತ್ತರಿಸಿದ್ದಾನೆ. ಪೂಜ ನನ್ನ ಮಾಜಿ ಗೆಳತಿ ಎಂದರೆ ಹರ್ಷಿತಾ ನನ್ನ ಕ್ಲಾಸ್‌ಮೇಟ್ ಎಂದು ಉತ್ತರಿಸಿದ್ದಾನೆ.

ವಿದ್ಯಾರ್ಥಿನಿಯರ ಪ್ರೀತಿಗೆಶಿಕ್ಷಕಿ ಭಾವುಕ, ವಿಡಿಯೋ ನೋಡಿ ನೆನಪಿನಂಗಳಕ್ಕೆ ಜಾರಿದ ನೆಟ್ಟಿಗರು!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್ ಮಾಡಿದ್ದಾರೆ. ಆದರೆ ಬಹುತೇಕರು ಇದು ನಕಲಿ. ವೈರಲ್ ಮಾಡಲು ಸೃಷ್ಟಿಸಲಾಗಿದೆ. ಇಬ್ಬರು ಪ್ರಶ್ನೆ ಹಾಗೂ ಉತ್ತರ ಎರಡೂ ಬರಹ ಒಂದೇ ರೀತಿ ಇದೆ. ಕೆಲ ವ್ಯತ್ಯಾಸಗಳಿದ್ದರೂ ಇದು ಅಸಲಿಯಲ್ಲ. ಎಲ್ಲರಿಗೂ ವಿಡಿಯೋ ವೈರಲ್ ಮಾಡುವ ಗೀಳು ಹೆಚ್ಚಾಗಿದೆ. ಇದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಸುಂದರವಾಗಿ ಹೃದಯದ ರೇಖಾ ಚಿತ್ರ ಬಿಡಿಸಲಾಗಿದೆ. ಹೃದಯ ರೇಖಾ ಚಿತ್ರದಲ್ಲಿ ಪ್ರತಿ ಅಂಶಗಳನ್ನು ಚಿತ್ರಿಸಲಾಗಿದೆ. ಇಷ್ಟು ನೆನಪಿನಲ್ಲಿರುವ ವಿದ್ಯಾರ್ಥಿಗೆ ಕೋಣೆಗಳ ನೆನಪೂ ಇರಲಿದೆ. ಈ ರೀತಿಯ ಹುಡುಗಿಯರ ಹೆಸರು ಬರೆಯುವ ಧೈರ್ಯ ಈ ಶಾಲಾ ಮಟ್ಟದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೋರಿಸುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

 

 

ರೀಲ್ಸ್ ಹುಚ್ಚಿಗೆ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಅವಮಾನಿಸಬೇಡಿ. ರೀಲ್ಸ್ ಗೀಳು ಬೇಡ. ನಕಲಿ ವಿಡಿಯೋಗಳನ್ನು ಪೋಸ್ಟ್ ಮಾಡಿ ಪ್ರಚಾರ ಪಡೆಯುವ ಕೆಟ್ಟ ಅಭ್ಯಾಸ ಬಿಟ್ಟುಬಿಡಿ ಎಂದು ಹಲವರು ಸಲಹೆ ನೀಡಿದ್ದರೆ. ಮತ್ತೆ ಕೆಲವರು ಸ್ಟೂಡೆಂಟ್ ರಾಕ್ಸ್, ಟೀಚರ್ ಶಾಕ್ಸ್ ಎಂದು ಕಮೆಂಟ್ ಮಾಡಿದ್ದಾರೆ. 

ಕರ್ನಾಟಕದಲ್ಲಿ ಉಳಿದುಕೊಂಡ ಸನ್ನಿ ಲಿಯೋನ್, ಈ ಗ್ರಾಮದಲ್ಲಿ ನಟಿಯ ಶೂಟಿಂಗ್!
 

Latest Videos
Follow Us:
Download App:
  • android
  • ios