Asianet Suvarna News Asianet Suvarna News

ಕೋವಿಡ್‌ ಲಸಿಕೆ ಪಡೆದ 4 ತಿಂಗಳಲ್ಲೇ ಪ್ರತಿಕಾಯ ಶಕ್ತಿ ಇಳಿಕೆ: ಅಧ್ಯಯನ!

* ಬೂಸ್ಟರ್‌ ಡೋಸ್‌ ಚಿಂತನೆ ಬೆನ್ನಲ್ಲೇ ಅಧ್ಯಯನ ವರದಿ ಪ್ರಕಟ

* ಕೋವಿಡ್‌ ಲಸಿಕೆ ಪಡೆದ 4 ತಿಂಗಳಲ್ಲೇ ಪ್ರತಿಕಾಯ ಶಕ್ತಿ ಇಳಿಕೆ: ಅಧ್ಯಯನ

 

Sharp dip in antibodies after three four months of receiving Covid vaccine find researchers pod
Author
Bangalore, First Published Sep 16, 2021, 9:15 AM IST

ಭುವನೇಶ್ವರ(ಸೆ.16): ದೇಶದಲ್ಲಿ ಕೊರೋನಾ 3ನೇ ಅಲೆಯ ಭೀತಿಯ ಮಧ್ಯೆಯೇ, ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದ 4 ತಿಂಗಳಲ್ಲಿಯೇ ಅದರ ಪರಿಣಾಮಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಹೀಗಾಗಿ ಬ್ರಿಟನ್‌ ಮತ್ತಿತರ ಪಾಶ್ಚಾತ್ಯ ದೇಶಗಳಂತೆ ಭಾರತದಲ್ಲಿಯೂ ಬೂಸ್ಟರ್‌ ಡೋಸ್‌ ನೀಡುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲು ಈ ಅಧ್ಯಯನ ವರದಿ ನೆರವಾಗಲಿದೆ ಎಂದು ಹೇಳಲಾಗಿದೆ.

ಕೋವಿಡ್‌ ಲಸಿಕೆ ಪಡೆದವರಲ್ಲಿ ಪ್ರತಿಕಾಯದ ಪ್ರಮಾಣ ಮತ್ತು ಅವಧಿ ಪತ್ತೆ ಮಾಡಲು ಇಲ್ಲಿನ ರೀಜಿನಲ್‌ ಮೆಡಿಕಲ್‌ ರಿಸಚ್‌ರ್‍ ಸೆಂಟರ್‌ನ ವಿಜ್ಞಾನಿಗಳ ತಂಡ ಅಧ್ಯಯನವೊಂದನ್ನು ನಡೆದಿತ್ತು. ಅದರಲ್ಲಿ ಕೋವಿಡ್‌ನ ಎರಡೂ ಲಸಿಕೆ ಪಡೆದ 614 ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿತ್ತು. ಇವರನ್ನು ಅಧ್ಯಯನಕ್ಕೆ ಒಳಪಡಿಸಿದ ವೇಳೆ ಮೊದಲ ಡೋಸ್‌ ಪಡೆದ 4 ತಿಂಗಳ ಬಳಿಕ ಅವರ ದೇಹದಲ್ಲಿ ಪ್ರತಿಕಾಯ ಶಕ್ತಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ ಮುಖ್ಯಸ್ಥ ಸಂಘಮಿತ್ರ ಪತಿ, ‘ಪ್ರತಿಕಾಯ ಶಕ್ತಿ ಕುಗ್ಗಿದ ಮತ್ರಕ್ಕೆ ಕೋವಿಡ್‌ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ಜನರು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ಹೇಳಲು ಆಗದು. ಆರು ತಿಂಗಳ ಬಳಿಕ ಈ ಬಗ್ಗೆ ಒಂದು ಸ್ಪಷ್ಟವಾದ ಚಿತ್ರಣ ದೊರೆಯಲಿದ್ದು, ಆ ಬಳಿಕವಷ್ಟೇ ಬೂಸ್ಟರ್‌ ಡೋಸ್‌ನ ಅಗತ್ಯವಿದೆಯೇ ಎನ್ನುವುದನ್ನು ಹೇಳಲು ಸಾಧ್ಯ’ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಬ್ರಿಟನ್‌ನಲ್ಲಿ ನಡೆಸಲಾದ ಅಧ್ಯಯನದ ವೇಳೆಯೂ ಫೈಝರ್‌ ಮತ್ತು ಆಸ್ಟ್ರಾಜೆನಿಕಾ ಲಸಿಕೆ ಪಡೆದವಲ್ಲಿ 6 ತಿಂಗಳ ಬಳಿಕ ಪ್ರತಿಕಾಯ ಶಕ್ತಿ ಕುಂದಿರುವುದು ಕಂಡು ಬಂದಿತ್ತು.

Follow Us:
Download App:
  • android
  • ios