RSS ಚಟುವಟಿಕೆಗಳನ್ನು ದೇವಸ್ಥಾನದಲ್ಲಿ ನಿಷೇಧಿಸುವಂತೆ ಕೇರಳ ಸರ್ಕಾರ ಆದೇಶ

ರಾಜ್ಯದ ದೇವಸ್ಥಾನಗಳಲ್ಲಿ RSS ಶಾಖೆಗಳನ್ನು ಹಾಗೂ ಅದರ ಸಾಮೂಹಿಕ ಡ್ರಿಲ್‌ಗಳನ್ನು ನಿಷೇಧಿಸಿರುವ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇರಳ ದೇವಸ್ಥಾನಗಳ ನಿರ್ವಹಣಾ ಸಮಿತಿ ಟಿಡಿಬಿ (ಟ್ರಾವಂಕೂರ್‌ ದೇವಸ್ವಂ ಸಮಿತಿ) ತನ್ನ ಅಡಿಯಲ್ಲಿರುವ ದೇವಸ್ಥಾನಗಳಿಗೆ ನೂತನ ಆದೇಶ ಹೊರಡಿಸಿದೆ.

Sangh Parivar activities banned in temple Kerala akb

ತಿರುವನಂತಪುರಂ: ರಾಜ್ಯದ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ (RSS) ಶಾಖೆಗಳನ್ನು ಹಾಗೂ ಅದರ ಸಾಮೂಹಿಕ ಡ್ರಿಲ್‌ಗಳನ್ನು ನಿಷೇಧಿಸಿರುವ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇರಳ ದೇವಸ್ಥಾನಗಳ ನಿರ್ವಹಣಾ ಸಮಿತಿ ಟಿಡಿಬಿ (ಟ್ರಾವಂಕೂರ್‌ ದೇವಸ್ವಂ ಸಮಿತಿ) ತನ್ನ ಅಡಿಯಲ್ಲಿರುವ ದೇವಸ್ಥಾನಗಳಿಗೆ ನೂತನ ಆದೇಶ ಹೊರಡಿಸಿದೆ. ‘ಸಂಘ ಪರಿವಾರದ ಸಂಘಟನೆಯು ದೇವಾಲಯದ ಆವರಣ ಅಥವಾ ಆಸ್ತಿಗಳನ್ನು ತನ್ನ ಶಸ್ತ್ರಾಸ್ತ್ರ ತರಬೇತಿಗಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂಬ 2021ರ ಸುತ್ತೋಲೆಯನ್ನು ಕಾರ್ಯಗತಗೊಳಿಸಲಾಗಿಲ್ಲ. ಟಿಡಿಬಿ ಆದೇಶವನ್ನು ಪಾಲಿಸುವಲ್ಲಿ ನಿರಾಕರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆಯ ಸುತ್ತೋಲೆ ಹೊರಡಿಸಿದೆ. 2016ರಲ್ಲಿ ದೇವಾಲಯದ ಸಂಕೀರ್ಣದಲ್ಲಿ ಆರೆಸ್ಸೆಸ್‌ನ ಎಲ್ಲಾ ತರಬೇತಿಗಳನ್ನು ಟಿಡಿಬಿ ನಿಷೇಧಿಸಿತ್ತು.

ಆರ್‌ಎಸ್‌ಎಸ್‌ನ ಹಿತೈಷಿಗಳು ಮತ ನೀಡುವ ವಿಶ್ವಾಸ: ಲಕ್ಷ್ಮಣ ಸವದಿ 

ತಮಿಳುನಾಡಿನಲ್ಲಿ ಹಲವು ಪ್ರಕರಣಗಳಲ್ಲಿ RSS ಬಲಿಪಶುವಾಗಿದೆ ಅಪರಾಧಿಯಲ್ಲ: ಸುಪ್ರೀಂಕೋರ್ಟ್‌

ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ ಮದ್ರಾಸ್‌ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ಅಲ್ಲೂ ಮುಖಭಂಗವಾಗಿದೆ.  ಡಿಎಂಕೆ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಮದ್ರಾಸ್‌ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.  ಇದೇ ವೇಳೆ ಸುಪ್ರೀಂಕೋರ್ಟ್‌  ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ನಿಷೇಧದ ನಂತರ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ತಮಿಳುನಾಡಿನಲ್ಲಿ ದಾಖಲಾದ ಹಲವು ಪ್ರಕರಣಗಳಲ್ಲಿ ಆರ್‌ಎಸ್‌ಎಸ್‌ ಬಲಿಪಶುವಾಗಿದೆಯೇ ಹೊರತು ಅಪರಾಧಿಯಾಗಿಲ್ಲ ಎಂದು ಕೋರ್ಟ್ ಹೇಳಿದೆ.  

ವಿ ರಾಮಸುಬ್ರಮಣಿಯಂ ಹಾಗೂ ಪಂಕಜ್ ಮಿಥಲ್ ಅವರಿದ್ದ ಸುಪ್ರೀಂಕೋರ್ಟ್  (Supreme court) ಪೀಠ ಈ ಹೇಳಿಕೆ ನೀಡಿದೆ. ಅಲ್ಲದೇ ಮದ್ರಾಸ್‌ ಹೈಕೋರ್ಟ್‌ ಪೀಠ (Madras High court) ಸುಮ್ಮನೆ ಬೇಕಾಬಿಟ್ಟಿಯಾಗಿ ಆರ್‌ಎಸ್‌ಎಸ್‌ಗೆ ಅನುಮತಿ ನೀಡಿಲ್ಲ. ಕಾನೂನಿನ ಸಂಬಂಧಿತ ನಿಬಂಧನೆಗಳನ್ನು ಸರಿಯಾಗಿ ಅರ್ಥೈಸುವುದಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆಗಳನ್ನು ಅನುಮತಿಸುವಾಗ ಅಗತ್ಯ ಷರತ್ತುಗಳನ್ನು ಕೂಡ ವಿಧಿಸಿತ್ತು ಎಂದು ಸುಪ್ರೀಂ ಪೀಠ ಹೇಳಿದೆ.  ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮನವಿಯ ತೀರ್ಪನ್ನು ಮಾರ್ಚ್‌ 27ರಂದು ಸುಪ್ರೀಂಕೋರ್ಟ್  ಕಾಯ್ದಿರಿಸಿತ್ತು. 

ಸೋತ 100 ಕ್ಷೇತ್ರಗಳಲ್ಲಿ ಆರ್‌ಎಸ್‌ಎಸ್‌ ರೀತಿ ಯುವ ಕಾಂಗ್ರೆಸ್‌ ಪ್ರಚಾರ

ಈ ವಿಚಾರಣೆಗೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯ ಸರ್ಕಾರ ಗಲಭೆಗೆ ಜವಾಬ್ದಾರರೆಂದು ಆರೋಪ ಮಾಡಿ ಕೋರ್ಟ್‌ಗೆ ಸಲ್ಲಿಸಿದ್ದ  ದಾಖಲೆಯನ್ನು ಪರಿಶೀಲಿಸಿದ ಕೋರ್ಟ್‌  ಇಲ್ಲಿ ಸಂಘಟನೆಯ ಕಾರ್ಯಕರ್ತರು ಅಪರಾಧಿಗಳಲ್ಲ ಬಲಿಪಶುಗಳು ಎಂದು ಹೇಳಿದೆ. ಆದ್ದರಿಂದ, ಮುಖ್ಯ ರಿಟ್ ಅರ್ಜಿಗಳಲ್ಲಿ ಅಥವಾ ಮರುಪರಿಶೀಲನಾ ಅರ್ಜಿಗಳಲ್ಲಿ ನ್ಯಾಯಾಧೀಶರು ನೀಡಿದ ಆದೇಶದಲ್ಲಿ ದೋಷವನ್ನು ಕಂಡುಹಿಡಿಯಲು ನಮಗೆ ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ವಿಶೇಷ  ಅರ್ಜಿಗಳನ್ನು ವಜಾಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿ  ತಮಿಳುನಾಡು ಸರ್ಕಾರ ಅರ್ಜಿಯನ್ನು ವಜಾ ಮಾಡಿತ್ತು.

ಫೆಬ್ರವರಿ 10 ರಂದು ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ ಆದೇಶದಲ್ಲಿ, ಆರ್‌ಎಸ್‌ಎಸ್‌ಗೆ ಪಥಸಂಚಲನಕ್ಕೆ (RSS route March) ಅನುಮತಿ ನೀಡುವಂತೆ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿತ್ತು. ರಾಜ್ಯದಲ್ಲಿ ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥಸಂಚಲನಕ್ಕೆ ಈ ಹಿಂದೆ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ತೆಗೆದು ಹಾಕಿದ ಮದ್ರಾಸ್ ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Latest Videos
Follow Us:
Download App:
  • android
  • ios