ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಇದೇ ವೇಳೆ ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ಗಗನಯಾನಿಗಳ ಹೆಸರನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ.
ನವದೆಹಲಿ: ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಇದೇ ವೇಳೆ ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ಗಗನಯಾನಿಗಳ ಹೆಸರನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ.
ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುವ ಕ್ಯಾ. ಪ್ರಶಾಂತ್ ನಾಯರ್, ಕ್ಯಾ, ಅಜಿತ್ ಕೃಷ್ಣನ್, ಕ್ಯಾ. ಅಂಗದ ಪ್ರತಾಪ್, ವಿಂಗ್ ಕಮ್ಯಾಂಡರ್ ಶುಭಾಂಶು ಶುಕ್ಲಾ ಅವರು ಇಸ್ರೋದ ಗಗನಯಾತ್ರೆಗೆ ಸಜ್ಜಾಗಿದ್ದು, ಕಳೆದ 5 ವರ್ಷಗಳಿಂದ ಇಸ್ರೋ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಗನಯಾತ್ರೆ ಕೈಗೊಳ್ಳುವ ಗಗನಯಾನಿಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ಗಗನಯಾತ್ರೆಗೆ ಸಿದ್ಧಗೊಳ್ಳುತ್ತಿರುವ ಈ ವಾಯುಸೇನಾ ಅಧಿಕಾರಿಗಳಿಗೆ ಭಾರತದ ವಿವಿಧ ಸೇನಾಪಡೆಗಳಲ್ಲಿ ನಿಯೋಜಿಸಿ ವಿವಿಧ ರೀತಿಯ ತರಬೇತಿ ನೀಡಲಾಗುತ್ತಿದೆ. ಇದರ ಜೊತೆಗೆ ರಷ್ಯಾದಲ್ಲೂ ಕಠಿಣ ತರಬೇತಿಯನ್ನು ಈ ಗಗನಯಾನಿಗಳು ಪಡೆದಿದ್ದಾರೆ. ಇಸ್ರೋ ಕೈಗೊಳ್ಳಲಿರುವ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನಕ್ಕೆ ಭಾರತೀಯ ವಾಯುಸೇಯ ಅಧಿಕಾರಿಗಳಾದ ಕ್ಯಾ. ಪ್ರಶಾಂತ್ ನಾಯರ್, ಕ್ಯಾ, ಅಜಿತ್ ಕೃಷ್ಣನ್, ಕ್ಯಾ. ಅಂಗದ ಪ್ರತಾಪ್, ವಿಂಗ್ ಕಮ್ಯಾಂಡರ್ ಶುಭಾಂಶು ಶುಕ್ಲಾ ಅವರನ್ನು ಆಯ್ಕೆ ಮಾಡಿ ಕಠಿಣ ತರಬೇತಿ ನೀಡಲಾಗುತ್ತಿದೆ.
