ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಅಲ್ಲಿನ ಮೊರದಾಬಾದ್‌ನ ವೈದ್ಯರೊಬ್ಬರು ತಮ್ಮ ಸಂಪೂರ್ಣ ಆಸ್ತಿಯನ್ನೇ ದಾನ ಮಾಡಿದ್ದಾರೆ. ಬರೋಬ್ಬರಿ 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರಕ್ಕೆ ಅಲ್ಲಿನ ಮೊರದಾಬಾದ್‌ ಮೂಲದ ವೈದ್ಯರೊಬ್ಬರು ತಮ್ಮ ಆಸ್ತಿಯನ್ನೇ ದಾನ ಮಾಡಿದ್ದಾರೆ. ಬಡವರಿಗೆ ಸಹಾಯ ಮಾಡಲು ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಹೆಸರಿನಲ್ಲಿದ್ದ ಸಂಪೂರ್ಣ ಆಸ್ತಿಯನ್ನೇ ದಾನ ಮಾಡಿದ್ದಾರೆ ಎಂದು ವರದಿಯಾಗಿದೆ. 

ಇನ್ನು, ಅವರು ದಾನ ಮಾಡಿರುವ ಆಸ್ತಿಯ ಮೌಲ್ಯ ಕಡಿಮೆಯೇನಲ್ಲ. ನೂರಾರು ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಅವರು ದಾನ ಮಾಡಿರುವ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ..? ಬರೋಬ್ಬರಿ 600 ಕೋಟಿ ರೂ. ಗೆ ಹತ್ತಿರ ಎಂದು ತಿಳಿದುಬಂದಿದೆ. ಮೊರಾದಾಬಾದ್‌ನ ಅರವಿಂದ್‌ ಗೋಯಲ್‌ ಎಂಬ ಈ ವೈದ್ಯರು ಕಳೆದ ಐದು ದಶಕಗಳಿಂದ ಅಂದರೆ ಬರೋಬ್ಬರಿ 50 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿದ್ದರು ಎಂದೂ ಹೇಳಲಾಗಿದ್ದು, ಸಾಕಷ್ಟು ಖ್ಯಾತಿಯನ್ನೂ ಗಳಿಸಿದ್ದಾರೆ.

ಪೋಷಕರಂತೆ ಮುಂದೆ ನಿಂತು ಅನಾಥೆಯ ಮದುವೆ ಮಾಡಿದ ಪೊಲೀಸರು

ಇನ್ನು, ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ದೇಣಿಗೆಯಾಗಿ ನೀಡುವ ಅವರ ಈ ನಿರ್ಧಾರ ನಿಮಗೊಂತೂ ಅಚ್ಚರಿ ತರಬಹುದು. ಆದರೆ, ಅವರ ಬಗ್ಗೆ ಬಲ್ಲವರಿಗೆ ಈ ನಿರ್ಧಾರ ಅಂತಹ ಅಚ್ಚರಿದಾಯಕವೇನಲ್ಲ ಎಂದು ಹೇಳಬಹುದು.

ಏಕೆಂದರೆ, ತಮ್ಮ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡುವ ಅವರ ಈ ನಿರ್ಧಾರ 25 ವರ್ಷಗಳ ಹಿಂದಿನದ್ದಂತೆ. ಅಲ್ಲದೆ, ಈ ಹಿಂದೆಯೂ ಅವರು ಜನರಿಗೆ ಸಾಕಷ್ಟು ಸಹಾಯ ಮಾಡಿದ್ದು, ಪ್ರಖ್ಯಾತರೆನಿಸಿಕೊಂಡಿದ್ದಾರೆ. ಈಗಿನ ರಾಷ್ಟ್ರಪತಿ ಸೇರಿ ಈ ಹಿಂದಿನ ಮೂವರು ರಾಷ್ಟ್ರಪತಿಗಳಿಂದ ಸನ್ಮಾನವನ್ನೂ ಮಾಡಿಸಿಕೊಂಡಿದ್ದಾರೆ ಅರವಿಂದ್‌ ಗೋಯಲ್‌.
ಅಲ್ಲದೆ, ಕೋವಿಡ್ -19 ಲಾಕ್‌ಡೌನ್‌ ವೇಳೆ ಉತ್ತರ ಪ್ರದೇಶದ ಮೊರಾದಾಬಾದ್‌ ಬಳಿಯ 50 ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದ ಅರವಿಂದ್‌ ಗೋಯಲ್‌ ಜನರಿಗೆ ಉಚಿತ ಸೌಲಭ್ಯಗಳನ್ನು ಒದಗಿಸುತ್ತಿದ್ದರಂತೆ. ಹಾಗೂ, ಯುಪಿಯ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ಚಿಕಿತ್ಸೆಯನ್ನೂ ನೀಡಿದ್ದರಂತೆ.

ನಾಲ್ವರು ರಾಷ್ಟ್ರಪತಿಗಳಿಂದ ಸನ್ಮಾನ
ಇನ್ನು, ಡಾಕ್ಟರ್‌ ಅರವಿಂದ್ ಗೋಯಲ್‌ ಅವರಿಗೆ ಈಗಿನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸೇರಿ ನಾಲ್ವರು ರಾಷ್ಟ್ರಪತಿಗಳು ಸನ್ಮಾನ ಮಾಡಿದ್ದಾರೆ. ಮಾಜಿ ರಾಷ್ಟ್ರಪತಿಗಳಾದ ಪ್ರಣಬ್‌ ಮುಖರ್ಜಿ, ಪ್ರತಿಭಾ ಪಾಟೀಲ್‌ ಹಾಗೂ ಡಾ. ಎಪಿಜೆ ಅಬ್ದುಲ್‌ ಕಲಾಂ ಸಹ ಇವರಿಗೆ ಸನ್ಮಾನ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. 

ಇನ್ನು, ಅರವಿಂದ್ ಗೋಯಲ್‌ ತಮ್ಮ ಪತ್ನಿ ರೇಣು ಗೋಯಲ್‌ ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬರು ಹೆಣ್ಣು ಮಗಳೊಂದಿಗೆ ವಾಸ ಮಾಡುತ್ತಿದ್ದಾರೆ. 

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಡಾಕ್ಟರ್‌ ದಾನ ಮಾಡಿರುವ ತಮ್ಮ ಸಂಪೂರ್ಣ ಆಸ್ತಿಯ ಮೌಲ್ಯ ಬರೋಬ್ಬರಿ 600 ಕೋಟಿ ಎಂದು ಹೇಳಲಾಗಿದೆ. ಆದರೂ, ಐವರು ಸದಸ್ಯರನ್ನು ಒಳಗೊಂಡ ಸಮಿತಿಯೊಂದು ಈ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕಲಿದೆ ಎಂದೂ ವರದಿಯಾಗಿದೆ. ಈ ಸಮಿತಿಯನ್ನು ಇನ್ನಷ್ಟೇ ರಚಿಸಬೇಕಿದೆ ಎಂದೂ ತಿಳಿದುಬಂದಿದೆ.

ರಾಮಮಂದಿರ ನಿರ್ಮಾಣಕ್ಕೆ ಪ್ರತಿ ತಿಂಗಳು 1 ಕೋಟಿ ದೇಣಿಗೆ, ಈವರೆಗೂ 5500 ಕೋಟಿ ಸಂಗ್ರಹ!

ಆದರೂ, ಬಡವರಿಗೆ ನೆರವಾಗಲೆಂದು ಈ ರೀತಿ ಸರ್ಕಾರಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನೇ ದಾನ ಮಾಡಿರುವುದು ನಿಜಕ್ಕೂ ಅಚ್ಚರಿದಾಯಕವಲ್ಲವೇ. ಈ ಹಿಂದೆಯೂ ಸಾಕಷ್ಟು ಬಡವರಿಗೆ ಸಹಾಯ ಮಾಡಿರುವ ಡಾಕ್ಟರ್‌ ಅರವಿಂದ್ ಗೋಯಲ್‌ ಈಗ ಸರ್ಕಾರಕ್ಕೆ ಸುಮಾರು 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಅವರ ಈ ಸಮಾಜ ಸೇವಾ ಕಾರ್ಯಕ್ಕೆ ಸಾಕಷ್ಟು ಪ್ರಶಸ್ತಿಗಳೂ ಸಂದಿವೆ.