ಚೆನ್ನೈ (ಮಾ.28) : ತಮಿಳುನಾಡು ವಿಧಾನಸಭೆ ಚುನಾವಣೆಯ ಪ್ರಚಾರ ರಾರ‍ಯಲಿಯೊಂದರಲ್ಲಿ ಡಿಎಂಕೆ ಹಿರಿಯ ಮುಖಂಡ ದಿಂಡಿಗಲ್‌ ಲಿಯೋನಿ ಅವರು ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. 

ಕೊಯಮತ್ತೂರಿನಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ವಿದೇಶಿ ತಳಿಯ ಹಸುಗಳ ಹಾಲು ಸೇವನೆಯಿಂದ ಮಹಿಳೆಯರ ಸೊಂಟ ಹಿಗ್ಗಿದ್ದು, ಅವರು ಬ್ಯಾರೆಲ್‌ನಂತೆ ಆಗಿದ್ದಾರೆ. 

ಆಸ್ಪತ್ರೆಯೊಳಗೆ ನುಗ್ಗಿದ ಮದವೇರಿದ ಹಸು, ಮುಂದೇನಾಯ್ತು..? ..

ಬ್ಯಾರೆಲ್‌ನಂತಾದ ಸೊಂಟದ ಮೇಲೆ ಕುಳಿತುಕೊಳ್ಳಲಾಗದೆ ಮಕ್ಕಳು ಕೆಳಕ್ಕೆ ಜಾರುತ್ತಿದ್ದಾರೆ ಎಂದು ಕೀಳು ಹೇಳಿಕೆ ನೀಡಿದ್ದಾರೆ. ಇದು ವೈರಲ್‌ ಆಗಿದ್ದು, ಲಿಯೋನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.