* ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ನ್ಯಾಯಾಲಯದಲ್ಲಿ ಭಾರೀ ಮುಖಭಂಗ* ಶಾಸಕ ಜಿಗ್ನೇಶ್ ಮೇವಾನಿ, ರೇಶ್ಮಾ ಪಟೇಲ್‌ಗೆ 3 ತಿಂಗಳು ಜೈಲು ಶಿಕ್ಷೆ, 1000 ರೂ. ದಂಡ* ಅಸಹಕಾರವನ್ನು ಸಹಿಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ
ಅಹಮದಾಬಾದ್(ಮೇ.05): ಗುಜರಾತ್‌ನ ವಡ್ಗಾಮ್‌ನ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ನ್ಯಾಯಾಲಯದಲ್ಲಿ ಭಾರೀ ಮುಖಭಂಗವಾಗಿದೆ. ಗುರುವಾರ ಮೆಹ್ಸಾನಾ ಕೋರ್ಟ್ ಮೆವಾನಿ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಮೇವಾನಿಗೆ ಒಂದು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಜಿಗ್ನೇಶ್ ಮೇವಾನಿ ಸೇರಿ ಒಟ್ಟು 12 ಮಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅನುಮತಿಯಿಲ್ಲದೆ ರ್ಯಾಲಿ ನಡೆಸಿದ ಎಲ್ಲಾ ಜನರನ್ನು ತಪ್ಪಿತಸ್ಥರೆಂದು ಪರಿಗಣಿಸಿ ನ್ಯಾಯಾಲಯವು ಈ ಶಿಕ್ಷೆ ವಿಧಿಸಿದೆ.
ಶಾಸಕ ಜಿಗ್ನೇಶ್ ಮೇವಾನಿ ಜೊತೆಗೆ 3 ತಿಂಗಳ ಜೈಲು ಶಿಕ್ಷೆ, ಎನ್‌ಸಿಪಿ ನಾಯಕರಾದ ರೇಷ್ಮಾ ಪಟೇಲ್ ಮತ್ತು ಸುಬೋಧ್ ಪರ್ಮಾರ್ ಅವರಿಗೂ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಸುಮಾರು 5 ವರ್ಷಗಳ ನಂತರ ಈ ವಿಚಾರದಲ್ಲಿ ನ್ಯಾಯಾಲಯದಿಂದ ತೀರ್ಪು ಬಂದಿದೆ. ಅಪರಾಧಿಗಳು 2017 ರಲ್ಲಿ ಅನುಮತಿಯಿಲ್ಲದೆ ಸ್ವಾತಂತ್ರ್ಯ ಮೆರವಣಿಗೆಯನ್ನು ಆಯೋಜಿಸಿದ್ದರು.
ಜಿಗ್ನೇಶ್ ಮೇವಾನಿ, ಎನ್‌ಸಿಪಿ ನಾಯಕರಾದ ರೇಷ್ಮಾ ಪಟೇಲ್ ಮತ್ತು ಸುಬೋಧ್ ಪರ್ಮಾರ್ ಅವರು ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ರ್ಯಾಲಿಯನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಜಿಗ್ನೇಶ್ ಮೇವಾನಿ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಜಿಗ್ನೇಶ್ ಮೇವಾನಿ ಜೊತೆಗೆ ಎಲ್ಲಾ ಆರೋಪಿಗಳಿಗೂ ನ್ಯಾಯಾಲಯ ಒಂದು ಸಾವಿರ ರೂಪಾಯಿ ದಂಡ ವಿಧಿಸಿದೆ.
ಅಸಹಕಾರವನ್ನು ಸಹಿಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಸುದ್ದಿ ಪ್ರಕಾರ, ಮ್ಯಾಜಿಸ್ಟ್ರೇಟ್ ಜೆಎ ಪರ್ಮಾರ್, ಈ ವಿಷಯದ ಬಗ್ಗೆ ತೀರ್ಪು ನೀಡುವಾಗ, ರ್ಯಾಲಿ ಮಾಡುವುದು ಯಾವುದೇ ರೀತಿಯಲ್ಲಿ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ, ಆದರೆ ಆಡಳಿತದ ಅನುಮತಿಯಿಲ್ಲದೆ ರ್ಯಾಲಿ ಮಾಡುವುದು ಖಂಡಿತವಾಗಿಯೂ ಈ ವರ್ಗದ ಅಡಿಯಲ್ಲಿ ಬರುತ್ತದೆ, ಅದೊಂದ ಅಪರಾಧ. ಅಂತಹ ಅಸಹಕಾರವನ್ನು ನಿರ್ಲಕ್ಷಿಸಲಾಗುವುದಿಲ್ಲ ಅಥವಾ ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಅಪರಾಧಿಗಳಿಗೆ ಹೇಳಿದೆ.
ಜಿಗ್ನೇಶ್ ಮೇವಾನಿ, ರೇಷ್ಮಾ ಪಟೇಲ್ ಮತ್ತು ಸುಬೋಧ್ ಪರ್ಮಾರ್ ಶಿಕ್ಷೆಗೆ ಗುರಿಯಾಗಿರುವ ಪ್ರಕರಣವು ಸುಮಾರು ಐದು ವರ್ಷಗಳಷ್ಟು ಹಳೆಯದು. 2017 ರಲ್ಲಿ ಅವರು ಸ್ವಾತಂತ್ರ್ಯ ಮೆರವಣಿಗೆ ರ್ಯಾಲಿಯನ್ನು ಮಾಡಿದರು. ಅನುಮತಿ ಪಡೆಯದೇ ಈ ರ್ಯಾಲಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ಮೆಹ್ಸಾನಾ ಕೋರ್ಟ್ ಅವರನ್ನು ದೋಷಿಗಳೆಂದು ಘೋಷಿಸಿದೆ.
ಶಾಸಕ ಜಿಗ್ನೇಶ್ ಮೇವಾನಿ, ಎನ್‌ಸಿಪಿ ನಾಯಕಿ ರೇಷ್ಮಾ ಪಟೇಲ್, ಸುಬೋಧ್ ಪರ್ಮಾರ್ ಅವರು ರ್ಯಾಲಿ ನಡೆಸುವ ಮೂಲಕ ಸರ್ಕಾರದ ಅಧಿಸೂಚನೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. ರೇಷ್ಮಾ ಪಟೇಲ್ ರಾಷ್ಟ್ರೀಯವಾದಿ ಮಹಿಳಾ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷೆ ಎಂಬುವುದು ಉಲ್ಲೇಖನೀಯ.
ಉನಾದಲ್ಲಿ ದಲಿತರನ್ನು ಥಳಿಸಿದ ಪ್ರಕರಣ ಬೆಳಕಿಗೆ ಬಂದ ನಂತರ, 12 ಜುಲೈ 2017 ರಂದು, ಮೆಹ್ಸಾನಾ ಬಳಿಯ ಬನಸ್ಕಾಂತದಲ್ಲಿ ‘ಆಜಾದು ಕೂಚ್’ ಎಂಬ ಹೆಸರಿನಲ್ಲಿ ಚಳವಳಿಯನ್ನು ಆಯೋಜಿಸಲಾಗಿತ್ತು.
ಜಾಮೀನಿನ ಮೇಲೆ ಹೊರಬಂದಿದ್ದ ಜಿಗ್ನೇಶ್ ಮೇವಾನಿ
ಸದ್ಯ ಜಿಗ್ನೇಶ್ ಮೇವಾನಿ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಗುಜರಾತ್‌ನಿಂದ ಅಸ್ಸಾಂ ಪೊಲೀಸರು ಮೇವಾನಿ ಅವರನ್ನು ಬಂಧಿಸಿದ್ದರು. ನಂತರ ಜಿಗ್ನೇಶ್ ಮೇವಾನಿ ಕೊಕ್ರಜಾರ್ ನ್ಯಾಯಾಲಯದಿಂದ ಜಾಮೀನು ಪಡೆದರು. ಆದರೆ, ಇದಾದ ಬೆನ್ನಲ್ಲೇ ಮತ್ತೊಂದು ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಜಿಗ್ನೇಶ್‌ನನ್ನು ಪೊಲೀಸರು ಬಂಧಿಸಿದ್ದರು.
ನಂತರ ಈ ಪ್ರಕರಣದಲ್ಲೂ ಮೇವಾನಿ ಅವರಿಗೆ ಜಾಮೀನು ಸಿಕ್ಕಿತ್ತು. ಪ್ರಸ್ತುತ, ಅಸ್ಸಾಂ ಸರ್ಕಾರವು ಈ ಜಾಮೀನಿನ ವಿರುದ್ಧ ಗುವಾಹಟಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಇದೀಗ ಮೇ 27ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ರೇಷ್ಮಾ ಪಟೇಲ್ ಬಗ್ಗೆ ಮಾತನಾಡುತ್ತಾ, ಅವರು ಎನ್‌ಸಿಪಿಗಿಂತ ಮೊದಲು ಬಿಜೆಪಿಯಲ್ಲಿದ್ದರು. ನಂತರ ಅವರು ಡಿಸೆಂಬರ್ 2017 ರ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿ ಸೇರಿದರು. ನಂತರ 2019 ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ರಾಜೀನಾಮೆ ನೀಡಿದ್ದರು ಮತ್ತು ಬಿಜೆಪಿ ಈಗ ಕೇವಲ ಮಾರ್ಕೆಟಿಂಗ್ ಕಂಪನಿಯಾಗಿದೆ ಎಂದು ಹೇಳಿದರು. ರೇಷ್ಮಾ ಪಟೇಲ್ ಹಾರ್ದಿಕ್ ಪಟೇಲ್ ಜೊತೆಗೆ ಪಾಟಿದಾರ್ ಚಳವಳಿಯ ಭಾಗವಾಗಿದ್ದರು.
