Asianet Suvarna News Asianet Suvarna News

Nagaland firing: ಮೊಬೈಲ್‌, ಇಂಟರ್‌ನೆಟ್‌ ಎಸ್‌ಎಂಎಸ್‌ ಸೇವೆ ಸ್ಥಗಿತ

  • 13 ನಾಗರಿಕರ ಸಾವು ಹಿನ್ನೆಲೆ ನಾಗಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ
  • ಮೊಬೈಲ್‌, ಇಂಟರ್‌ನೆಟ್‌ ಎಸ್‌ಎಂಎಸ್‌ ಸೇವೆ ಸ್ಥಗಿತ
  • ಉಗ್ರಗಾಮಿಗಳೆಂದು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದ ಭದ್ರತಾಪಡೆ
Mobile internet SMS services suspended in Mon district Nagaland akb
Author
Bangalore, First Published Dec 5, 2021, 7:55 PM IST
  • Facebook
  • Twitter
  • Whatsapp

ಕೊಹಿಮಾ: ನಿನ್ನೆ ಭದ್ರತಾಪಡೆಗಳ ಮಿಸ್‌ ಫೈರಿಂಗ್‌ನಿಂದ 13 ನಾಗರಿಕರು ಹತ್ಯೆಗೀಡಾದ ಹಿನ್ನೆಲೆ ನಾಗಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್‌ ಸೇವೆ, ಇಂಟರ್‌ನೆಟ್‌ ಹಾಗೂ ಬಲ್ಕ್‌ ಎಸ್‌ಎಂಎಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಾಗಲ್ಯಾಂಡ್‌ನ ಕಮೀಷನರ್‌ ಅಭಿಜಿತ್‌ ಸಿನ್ಹಾ(Abhijit Sinha) ಹೇಳಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಇಡೀ ಪ್ರದೇಶದಲ್ಲಿ ಮೊಬೈಲ್‌ ಇಂಟರ್‌ನೆಟ್‌, ಡಾಟಾ ಸೇವೆ, ಬಲ್ಕ್‌ ಎಸ್ಎಂಎಸ್‌ ಸೇವೆ ಸ್ಥಗಿತಗೊಳಿಸುವಂತೆ ಪೂರೈಕೆದಾರರಿಗೆ ಆದೇಶ ನೀಡಲಾಗಿದೆ. ಇದು ಮುಂದಿನ ಆದೇಶ ಬರುವವರೆಗೆ ಜಾರಿಯಲ್ಲಿರಲಿದೆ. 

ಈ ನಡುವೆ ನಾಗಲ್ಯಾಂಡ್‌ ಗವರ್ನರ್‌  ಜಗದೀಶ್‌ ಮುಖಿ (Jagdish Mukhi)ಶನಿವಾರ ನಡೆದ ಈ ಶೂಟೌಟ್‌ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.  ಅಲ್ಲದೇ ವಿಶೇಷ ತನಿಖಾ ತಂಡ(ಎಸ್‌ಐಟಿ) ಎಲ್ಲಾ ಆಯಾಮಗಳಿಂದ ಈ ಪ್ರಕರಣದ ತನಿಖೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ನಿನ್ನೆ ಸಂಜೆ  ನಾಗಲ್ಯಾಂಡ್‌ನ ಮೊನ್‌ ಜಿಲ್ಲೆಯ ಒಟಿಂಗ್‌(Oting) ಹಾಗೂ ತಿರು(Tiru) ಗ್ರಾಮದ ನಡುವೆ ಈ ದುರಂತ ಸಂಭವಿಸಿತ್ತು. ಪ್ಯಾರಾ ಕಮಾಂಡೋಗಳೆಂದು ಹೇಳಲಾದ ಭದ್ರತಾ ಸಿಬ್ಬಂದಿ, ಸಂತ್ರಸ್ತರನ್ನು ಉಗ್ರಗಾಮಿಗಳೆಂದು ತಪ್ಪಾಗಿ ಗ್ರಹಿಸಿ ದಾಳಿ ನಡೆಸಿದ್ದರು. 


Michigan Shootout: ಶಾಲಾ ಬಾಲಕನಿಂದ ಫೈರಿಂಗ್‌, 3 ವಿದ್ಯಾರ್ಥಿಗಳು ಬಲಿ, ಶಿಕ್ಷಕ ಸೇರಿ 8 ಮಂದಿಗೆ ಗಾಯ!

ಮೃತರೆಲ್ಲರೂ ಪಿಕ್-ಅಪ್ ವಾಹನದಲ್ಲಿ ಕಲ್ಲಿದ್ದಲು ಗಣಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಅವರು ಕಲ್ಲಿದ್ದಲು ಗಣಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.  ದುರಂತದಲ್ಲಿ ಶನಿವಾರ ಸಂಜೆ ಆರು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಇನ್ನೂ ಏಳು ಮಂದಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದರು.  ಘಟನೆ ಖಂಡಿಸಿ ಅಲ್ಲಲ್ಲಿ ಗಲಭೆ ಏರ್ಪಟ್ಟಿದ್ದು, ಈ ಗಲಭೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

 

ಶನಿವಾರ ಸಂಜೆ ಪಿಕ್-ಅಪ್ ವ್ಯಾನ್‌ನಲ್ಲಿ ಹಾಡುಗಳನ್ನು ಹಾಕಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಕಲ್ಲಿದ್ದಲು ಗಣಿ ಕಾರ್ಮಿಕರನ್ನು, ನಿಷೇಧಿತ ಸಂಘಟನೆಯಾದ ಎನ್‌ಎಸ್‌ಸಿಎನ್ (ಕೆ) ನ ಯುಂಗ್ ಆಂಗ್ ಬಣಕ್ಕೆ ಸೇರಿದ ದಂಗೆಕೋರರು ಎಂದು ತಪ್ಪಾಗಿ ಭಾವಿಸಿದ ಸೇನಾ ಸಿಬ್ಬಂದಿ  ಗುಂಡಿನ ದಾಳಿ ನಡೆಸಿತ್ತು. ಈ ವೇಳೆ 6 ಜನರು ಸಾವಿಗೀಡಾಗಿದ್ದರು. ಈ ಮಧ್ಯೆ ಕೆಲಸಕ್ಕೆ ತರಳಿದ್ದ ಮನೆ ಮಂದಿ ರಾತ್ರಿಯಾದರೂ ಮನೆಗೆ ಮರಳದ ಹಿನ್ನೆಲೆ ಸ್ಥಳೀಯ ಯುವಕರು ಮತ್ತು ಗ್ರಾಮಸ್ಥರು ಅವರನ್ನು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಉಂಟಾದ ಗಲಭೆಯಲ್ಲಿಒಬ್ಬ ಯೋಧ ಸಾವಿಗೀಡಾಗಿದ್ದಲ್ಲದೇ, ಸೇನಾ ವಾಹನಗಳು ಆಕ್ರೋಶಿತರ ಕೋಪಕ್ಕೆ ಆಹುತಿಯಾಗಿವೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಮತ್ತೆ ಗುಂಡು ಹಾರಿಸಿದ್ದು, ಇದರಿಂದ ಮತ್ತೆ 7 ಜನ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

 

Nagaland Civilian Killings :ನಾಗಾಲ್ಯಾಂಡ್‌ನಲ್ಲಿ ಉಗ್ರಗಾಮಿಗಳೆಂದು ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ

ಘಟನೆ ಖಂಡಿಸಿ ಭಾನುವಾರ ಮಧ್ಯಾಹ್ನ ಗಲಭೆ  ಎಲ್ಲೆಡೆ ಹರಡಿದ್ದು, ಕೋಪಗೊಂಡ ಜನರು ಕೊನ್ಯಾಕ್ ಯೂನಿಯನ್‌ಗೆ ಸೇರಿದ  ಕಚೇರಿಗಳನ್ನು ಮತ್ತು ಆ ಪ್ರದೇಶದಲ್ಲಿದ್ದ ಅಸ್ಸಾಂ ರೈಫಲ್ಸ್ ಶಿಬಿರವನ್ನು ಧ್ವಂಸಗೊಳಿಸಿದ್ದಾರೆ. ಘಟನೆ ಖಂಡಿಸಿ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ENPO) ರಾಜ್ಯದ ರಾಜಧಾನಿ ಕೊಹಿಮಾ ಬಳಿಯ ಕಿಸಾಮಾದಲ್ಲಿ ನಡೆಯಲಿರುವ ವಾರ್ಷಿಕ ಹಾರ್ನ್‌ಬಿಲ್ ಉತ್ಸವದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಆರು ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ (ENPO) ತನ್ನ ಪ್ರದೇಶದಲ್ಲಿ ರಕ್ತಪಾತದ ವಿರುದ್ಧ ಮೊದಲೇ ನಿರ್ಣಯವನ್ನು ಅಂಗೀಕರಿಸಿತ್ತು. "ನಮ್ಮ ಜನರು ಕೊಲ್ಲಲ್ಪಟ್ಟಿರುವ ಈ ಸಂದರ್ಭದಲ್ಲಿ ನಾವು ಉತ್ಸವದಲ್ಲಿ ಹೇಗೆ ನೃತ್ಯ ಮಾಡಲು ಸಾಧ್ಯ ಎಂದು ಕೊನ್ಯಾಕ್ ಸಮುದಾಯದ ನಾಯಕರು ಕೇಳಿದ್ದಾರೆ.
 

Follow Us:
Download App:
  • android
  • ios