Asianet Suvarna News Asianet Suvarna News

ದೇವರ ನಾಡೀಗ ಉಗ್ರರ ನೇಮಕಾತಿ ತಾಣ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೇರಳ DGP!

  • ಕೇರಳದಲ್ಲಿನ ಭಯೋತ್ಪಾದನಾ ಚಟುವಟಿಕೆ ಕುರಿತು ಡಿಜಿಪಿ ಸ್ಫೋಟಕ ಮಾಹಿತಿ
  • ದೇವರ ನಾಡೀಗ ಉಗ್ರರ ನೇಮಕ ತಾಣವಾಗಿ ಬದಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ
  • ಏಷ್ಯಾನೆಟ್ ನ್ಯೂಸ್ ಸಂದರ್ಶನದಲ್ಲಿ ಕೇರಳದ ಅಸಲಿ ಸತ್ಯ ಬಹಿರಂಗ ಪಡಿಸಿದ ಲೋಕನಾಥ್ ಬೆಹ್ರ
Kerala becoming recruiting ground for terrorists organizations outgoing Kerala Police chief CKM
Author
Bengaluru, First Published Jun 27, 2021, 6:53 PM IST

ಕೇರಳ(ಜೂ.27): ದೇಶದಲ್ಲಿ ನಡೆಯುತ್ತಿರುವ ವಿದ್ವಂಸಕ ಕೃತ್ಯ, ಭಯೋತ್ಪಾದನಾ ದಾಳಿ ಸೇರಿದಂತೆ ಹಲವು ಉಗ್ರರ ಚಟುವಟಿಕೆಗಳಿಗೆ ಕೇರಳ ಪ್ರಮುಖ ಕೇಂದ್ರವಾಗುತ್ತಿದೆ. ಹೌದು, ದೇವರ ಸ್ವಂತ ನಾಡೀಗ ಉಗ್ರರ ನೇಮಕಾತಿ ತಾಣವಾಗಿ ಬದಲಾಗುತ್ತಿದೆ ಎಂದು ಕೇರಳದ ನಿರ್ಗಮಿತಿ ಪೊಲೀಸ್ ಡಿಜಿಪಿ ಲೋಕನಾಥ್ ಬೆಹ್ರ ಹೇಳಿದ್ದಾರೆ.

ಕರ್ನಾಟಕ, ಕೇರಳದಲ್ಲಿ ಐಸಿಸ್ ಉಗ್ರರ ಸಂಖ್ಯೆ ಹೆಚ್ಚಳ; ದಾಳಿಗೆ ಅಲ್‌ಖೈದಾ ಸಂಚು!

ಸುವರ್ಣನ್ಯೂಸ್ ಸಹೋಹದರ ಸಂಸ್ಥೆ ಏಷ್ಯಾನೆಟ್ ಮಲೆಯಾಳಂಗೆ ನೀಡಿದ ಸಂದರ್ಶನದಲ್ಲಿ ಈ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕೇರಳದ ಸದ್ಯದ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಕೇರಳ ಉಗ್ರರ ನೇಮಕಾತಿ ತಾಣವಾಗಿ ಬದಲಾಗುತ್ತಿದೆ. ಆದರೆ ಕೆಲವರು ಉಗ್ರ ಚಟುವಟಿಕೆಗೆ ಕೋಮು ಬಣ್ಣ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ವಿದ್ಯಾವಂತರು, ಉಗ್ರರ ಜೊತೆ ಸಂಪರ್ಕ ಹೊಂದಿರುವುದೇ ಮತ್ತಷ್ಟು ಆತಂಕ ತರುತ್ತಿದೆ ಎಂದು ಬೆಹ್ರ ಹೇಳಿದ್ದಾರೆ.

ಕೇರಳದಲ್ಲಿ ಶಾಂತಿ ಹಾಗೂ ಸಾಮರಸ್ಯ ಕದಡುವ ಪ್ರಯತ್ನಗಳನ್ನು ಹತ್ತಿಕ್ಕಲಾಗಿದೆ. ಇದರಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಚರಣೆ ಕೂಡ ಒಂದಾಗಿದೆ.  ಮಾವೋವಾದಿ ವಿರುದ್ಧದ ಕಾರ್ಯಚರಣೆಗೆ ಯಾವುದೇ ವಿಷಾದವಿಲ್ಲ. ಅವರಿಗೆ ಭೇಷರತ್ತಾಗಿ ಶರಣಾಗಲು ಅವಕಾಶ ಕೊಡಲಾಗಿದೆ. ಆದರೆ ಇದನ್ನು ನಿರಾಕರಿಸಿ ರಾಜ್ಯದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂರಕ್ಷಿತ ಅರಣ್ಯದಲ್ಲಿ ಅಡಗಿ ಕುಳಿತಿರುವ ಈ ವಾವೋವಾದಿಗಳು ನಿರಪರಾಧಿಗಳಲ್ಲ. ಹೀಗಾಗಿ ಅವರ ವಿರುದ್ಧದ ಕಾರ್ಯಚರಣೆಗೆ ಯಾವುದೇ ವಿಷಾಧವಿಲ್ಲ ಎಂದು ಬೆಹ್ರ ಸಂದರ್ಶನದಲ್ಲಿ ಹೇಳಿದ್ದಾರೆ.

ಎನ್‌ಐಎಯಿಂದ ಐಸಿಸ್‌ ಬೇಟೆ: ಕರ್ನಾಟಕ, ಕೇರಳದ ಕೆಲವರ ಹತ್ಯೆ ಸಂಚು ಬಯಲು!

ಕೇರಳದಲ್ಲಿ ಯುವಕ ಯುವತಿಯರು ವಿದೇಶದ ಪ್ರಮುಖ ಭಯೋತ್ಪಾದನಾ ಗುಂಪುಗಳಲ್ಲಿ ಕಾಣಿಸಿಕೊಂಡ ಹಲವು ಉದಾಹರಣೆಗಳಿವೆ. ಭಯೋತ್ಪಾದಾಕ ಗುಂಪುಗಳಿಗೆ ಅಮಾಯಕರು ಸಿಲುಕದಂತೆ ತಡೆಯಲು ಕೇರಳ ಪೊಲೀಸ್ ಹಲವು ಪ್ರಯತ್ನಗಳನ್ನು ಮಾಡಿದೆ. ಭಯೋತ್ಪಾದಕ ಗಂಪುಗಳ ಕುರಿತು ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಡಿಜಿಪಿ ಲೋಕನಾಥ್ ಬೆಹ್ರ ಹೇಳಿದ್ದಾರೆ.

Follow Us:
Download App:
  • android
  • ios