ನವದೆಹಲಿ[ಫೆ.17]: ಉತ್ತರ ಪ್ರದೇಶದ ದೇವಬಂದ್‌ ಪಟ್ಟಣವು ಭಯೋತ್ಪಾದನೆಯ ಗಂಗೋತ್ರಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಮಧ್ಯಾಹ್ನ ಪಕ್ಷದ ಕೇಂದ್ರ ಕಚೇರಿಗೆ ಬರುವಂತೆ ಸಿಂಗ್‌ಗೆ ಸೂಚನೆ ನೀಡಿದ್ದ ನಡ್ಡಾ, ಮುಂದಿನ ದಿನಗಳಲ್ಲಿ ಇಂಥ ಅವಹೇಳನಕಾರಿ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಸಚಿವ ನಮಿಸಿದ ಅಂಬೇಡ್ಕರ್‌ ಪ್ರತಿಮೆ ಶುದ್ಧೀಕರಣ!

ದೆಹಲಿ ವಿಧಾನಸಭಾ ಚುನಾವಣೆ ಸೋಲಿಗೆ ಪಕ್ಷದ ಕೆಲ ನಾಯಕರ ಪ್ರಚೋದನಾಕಾರಿ, ಅವಹೇಳನಕಾರಿ ಹೇಳಿಕೆಗಳೂ ಕಾರಣ ಎಂಬ ಅಮಿತ್‌ ಶಾ ಹೇಳಿಕೆ ಬೆನ್ನಲ್ಲೇ ಸಿಂಗ್‌ಗೆ ಈ ಎಚ್ಚರಿಕೆ ನೀಡಲಾಗಿದೆ.