ಕೇಂದ್ರ ಸಚಿವ ನಮಿಸಿದ ಅಂಬೇಡ್ಕರ್‌ ಪ್ರತಿಮೆ ಶುದ್ಧೀಕರಣ ಮಾಡಿದರು| ಗಂಗಾಜಲದಿಂದ ಶುದ್ಧೀಕರಣ ಮಾಡಿದ ಆರ್‌ಜೆಡಿ ಕಾರ್ಯಕರ್ತರು

ಬೇಗುಸರಾಯ್‌[ಫೆ.16]: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ಮಾಲಾರ್ಪಣೆ ಮಾಡಿದ್ದ ಅಂಬೇಡ್ಕರ್‌ ಪ್ರತಿಮೆಯನ್ನು ಸಿಪಿಐ ಹಾಗೂ ಆರ್‌ಜೆಡಿ ಕಾರ್ಯಕರ್ತರು ಗಂಗಾಜಲದಿಂದ ಶುದ್ಧೀಕರಣ ಮಾಡಿದ ಘಟನೆ ಇಲ್ಲಿನ ಬಲಿಯಾ ಬ್ಲಾಕ್‌ನಲ್ಲಿ ನಡೆದಿದೆ.

ಗಿರಿರಾಜ್‌ ಸಿಂಗ್‌ ಮನುವಾದಿಯಾಗಿದ್ದು, ಅಂಬೇಡ್ಕರ್‌ ತತ್ವ- ಸಿದ್ಧಾಂತಗಳ ವಿರೋಧಿ. ಅಂಥವರು ಮಾಲಾರ್ಪಣೆ ಮಾಡುವುದು ಮೂರ್ತಿಯನ್ನು ಅಪವಿತ್ರಗೊಳಿಸಿದಂತೆ ಎಂದು ವಾದಿಸಿದ್ದಾರೆ. ಶುಕ್ರವಾರ ನಡೆದ ಸಿಎಎ ಪರ ರಾರ‍ಯಲಿ ವೇಳೆ ಗಿರಿರಾಜ್‌ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.

Scroll to load tweet…

ಇದಾದ ಮರುದಿನವೇ ಸಿಎಎ ವಿರೋಧಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಪಿಐ ಹಾಗೂ ಆರ್‌ಜೆಡಿ ನಾಯಕರು ಗಂಗಾಜಲದಿಂದ ಶುದ್ಧೀಕರಣ ಮಾಡಿದ್ದಾರೆ.