11:18 PM (IST) Oct 30

India Latets News Live 30 October 2025INDW vs AUSW - ಆಸ್ಟ್ರೇಲಿಯಾ ಮಣಿಸಿ ವಿಶ್ವದಾಖಲೆಯೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ICC ಮಹಿಳಾ ವಿಶ್ವಕಪ್ 2025: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಜೆಮಿಮಾ ರೋಡ್ರಿಗಸ್ ಅವರ ಸೂಪರ್ ಶತಕ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಗೆಲುವು ಸಾಧಿಸಿತು.

Read Full Story
09:24 PM (IST) Oct 30

India Latets News Live 30 October 2025ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್‌ - ಜೇಮಿಮಾ, ಹರ್ಮಾನ್‌ಪ್ರೀತ್‌ ಅರ್ಧಶತಕ, ದಿಟ್ಟ ಚೇಸಿಂಗ್‌ನತ್ತ ಭಾರತ!

India vs Australia Women's WC Semi-Final ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ನೀಡಿದ 339 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡಿದೆ. ನಾಯಕಿ ಹರ್ಮಾನ್‌ಪ್ರೀತ್‌ ಕೌರ್‌ ಮತ್ತು ಜೆಮಿಮಾ ರೋಡ್ರಿಗಸ್‌ ಅವರ ಅಮೋಘ ಅರ್ಧಶತಕ ಬಾರಿಸಿದ್ದಾರೆ.

Read Full Story
07:54 PM (IST) Oct 30

India Latets News Live 30 October 202517 ಮಕ್ಕಳ ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿಯ ಎನ್‌ಕೌಂಟರ್‌ ಮಾಡಿದ ಮುಂಬೈ ಪೊಲೀಸ್‌!

Mumbai Hostage Crisis ಪೊವೈ ಸ್ಟುಡಿಯೋದಲ್ಲಿ ರೋಹಿತ್ ಆರ್ಯ ಎಂಬ ವ್ಯಕ್ತಿ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ. ಸರ್ಕಾರಿ ಯೋಜನೆಯೊಂದರ ಕುರಿತು ಅಸಮಾಧಾನಗೊಂಡಿದ್ದ ಆತನನ್ನು ಮುಂಬೈ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

Read Full Story
06:37 PM (IST) Oct 30

India Latets News Live 30 October 2025ಹೇಳಿದ ದಿನ ಬ್ಲೌಸ್​ ಕೊಡದ ಟೈಲರ್​ - 7 ಸಾವಿರ ರೂ. ದಂಡ ವಿಧಿಸಿದ ಕೋರ್ಟ್​- ಏನಿದು ಕೇಸ್​?

ಮದುವೆಗೆಂದು ಹೊಲಿಯಲು ಕೊಟ್ಟಿದ್ದ ಬ್ಲೌಸನ್ನು ಸಮಯಕ್ಕೆ ಸರಿಯಾಗಿ ನೀಡದ ಟೈಲರ್ ವಿರುದ್ಧ ಮಹಿಳೆಯೊಬ್ಬರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಅಹಮದಾಬಾದ್ ಕೋರ್ಟ್, ಸೇವೆಯಲ್ಲಿನ ಕೊರತೆಗಾಗಿ ದರ್ಜಿಗೆ ಸುಮಾರು 7,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
Read Full Story
05:45 PM (IST) Oct 30

India Latets News Live 30 October 2025ಕೆಕೆಆರ್‌ ತಂಡಕ್ಕೆ ನೂತನ ಕೋಚ್ ನೇಮಕ; ಕೋಚ್ ಮೂಲಕ ರೋಹಿತ್‌ ಶರ್ಮಾಗೆ ಗಾಳ ಹಾಕುತ್ತಾ ಫ್ರಾಂಚೈಸಿ?

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚಂದ್ರಕಾಂತ್ ಪಂಡಿತ್ ಅವರ ಸ್ಥಾನಕ್ಕೆ ಅಭಿಷೇಕ್ ನಾಯರ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಈ ಹಿಂದೆ ಸಹಾಯಕ ಕೋಚ್ ಆಗಿದ್ದ ನಾಯರ್, ರೋಹಿತ್ ಶರ್ಮಾ ಜತೆಗೆ ನಂಟು ಹೊಂದಿದ್ದು, ಇದು ಮುಂದಿನ ಸೀಸನ್‌ನಲ್ಲಿ ಆಟಗಾರರ ಸಂಭಾವ್ಯ ವರ್ಗಾವಣೆಯ ಕುತೂಹಲಕ್ಕೆ ಕಾರಣವಾಗಿದೆ.

Read Full Story
05:36 PM (IST) Oct 30

India Latets News Live 30 October 2025Gen Z honeymoon trends - ಜೆನ್ ಝಿ ಕಪಲ್ ಹನಿಮೂನ್ ರಹಸ್ಯ - ಬದಲಾದ ಯುವ ಜೋಡಿಗಳ ಆಯ್ಕೆ!

Gen Z honeymoon trends: ಜೆನ್ ಝಿ ತಲೆಮಾರಿನ ಜೋಡಿಗಳು ಹನಿಮೂನ್ ಪರಿಕಲ್ಪನೆಯನ್ನೇ ಬದಲಿಸುತ್ತಿದ್ದಾರೆ. ದುಬಾರಿ ಪ್ರವಾಸಗಳ ಬದಲು, ಅವರು ವೈಯಕ್ತಿಕ ಅನುಭವ ನೀಡುವ, ಸಾಂಸ್ಕೃತಿಕ ಮಹತ್ವವಿರುವ ತಾಣಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅವರ ನೆಚ್ಚಿನ ತಾಣಗಳು ಯಾವುದು ಎಂಬ ಬಗ್ಗೆ ಇಲ್ಲಿದೆ ಡಿಟೇಲ್.

Read Full Story
05:14 PM (IST) Oct 30

India Latets News Live 30 October 2025ಘಾಟ್‌ ಮಾರ್ಗದಲ್ಲಿ ಪ್ರಯಾಣಿಸುವಾಗ ಬೆಟ್ಟದ ಮೇಲಿಂದ ಕಾರ್‌ ಮೇಲೆ ಬಿದ್ದ ಬಂಡೆ, ಸ್ಥಳದಲ್ಲೇ ಮಹಿಳೆ ಸಾವು!

Woman Dies Instantly as Boulder Crushes Car Sunroof in Tragic Tamhini Ghat Accident ತಮ್ಹಿನಿ ಘಾಟ್‌ನಲ್ಲಿ ಚಲಿಸುತ್ತಿದ್ದ ಕಾರಿನ ಸನ್‌ರೂಫ್‌ ಮೇಲೆ ಬಂಡೆ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

Read Full Story
05:03 PM (IST) Oct 30

India Latets News Live 30 October 2025ಇದೇ ಕಾರಣಕ್ಕೆ ಮಹಿಳಾ ವಿಶ್ವಕಪ್ ಸೆಮೀಸ್‌ನಲ್ಲಿ ಕಪ್ಪು ಪಟ್ಟಿ ತೊಟ್ಟು ಮೈದಾನಕ್ಕಿಳಿದ ಭಾರತ-ಆಸೀಸ್!

ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರ್ತಿಯರು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ನೆಟ್ ಅಭ್ಯಾಸದ ವೇಳೆ ಚೆಂಡು ತಗುಲಿ ಮೃತಪಟ್ಟ 17 ವರ್ಷದ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್‌ಗೆ ಸಂತಾಪ ಸೂಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
Read Full Story
04:38 PM (IST) Oct 30

India Latets News Live 30 October 2025ಬ್ಯಾಂಕ್​ ವಹಿವಾಟಿನಲ್ಲಿ ನವೆಂಬರ್​ 1ರಿಂದ ಭಾರಿ ಬದಲಾವಣೆ - ಈಗಲೇ ಈ ಬಗ್ಗೆ ತಿಳಿದುಕೊಳ್ಳಿ

ನವೆಂಬರ್‌ನಿಂದ, ಬ್ಯಾಂಕ್ ಠೇವಣಿಗಳಿಗೆ ನಾಲ್ಕು ನಾಮಿನಿಗಳನ್ನು ನೇಮಿಸುವುದು, ಎಸ್‌ಬಿಐ ಕಾರ್ಡ್‌ನ ಕೆಲವು ಪಾವತಿಗಳ ಮೇಲೆ ಹೊಸ ಶುಲ್ಕಗಳು, ಮತ್ತು ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಯ ಗಡುವು ಸೇರಿದಂತೆ ಹಲವು ಹಣಕಾಸು ನಿಯಮಗಳು ಬದಲಾಗಲಿವೆ.

Read Full Story
04:38 PM (IST) Oct 30

India Latets News Live 30 October 2025ಮಿತ್ರಪಕ್ಷಗಳ ವಿರೋಧ - ಸುಶಿಕ್ಷಿತರ ನಾಡಲ್ಲಿ ಪಿಎಂಶ್ರೀ ಯೋಜನೆಗೆ ಕೇರಳ ಸರ್ಕಾರದ ಬ್ರೇಕ್?

PMShri scheme in Kerala: ಕೇಂದ್ರ ಸರ್ಕಾರದ ಮಹತ್ವದ ಪಿಎಂಶ್ರೀ ಶಾಲಾ ಅಭಿವೃದ್ಧಿ ಯೋಜನೆಗೆ ಕೇರಳದಲ್ಲಿ ಬ್ರೇಕ್ ಬೀಳುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಆಡಳಿತಾರೂಢ ಎಲ್‌ಡಿಎಫ್‌ನ ಮಿತ್ರಪಕ್ಷವಾದ ಸಿಪಿಐನಿಂದಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

Read Full Story
04:31 PM (IST) Oct 30

India Latets News Live 30 October 2025ದಾವೂದ್‌ ಇಬ್ರಾಹಿಂ ಭಯೋತ್ಪಾದಕನಲ್ಲ, ಮುಂಬೈ ದಾಳಿಯಲ್ಲಿ ಆತನ ಪಾತ್ರವಿಲ್ಲ ಎಂದ ಮಾಜಿ ಬಾಲಿವುಡ್‌ ನಟಿ!

Ex-Actress Mamta Kulkarni Claims Dawood Ibrahim is Not a Terrorist ಬಾಲಿವುಡ್‌ನ ಮಾಜಿ ನಟಿ ಮಮತಾ ಕುಲಕರ್ಣಿ ಇತ್ತೀಚೆಗೆ ದಾವೂದ್ ಇಬ್ರಾಹಿಂ ಮತ್ತು ವಿಕಿ ಗೋಸ್ವಾಮಿ ಅವರನ್ನು ಒಳಗೊಂಡ ಹೇಳಿಕೆಗಳ ಕುರಿತು ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

Read Full Story
04:13 PM (IST) Oct 30

India Latets News Live 30 October 2025ಆಸ್ಟ್ರೇಲಿಯಾ ಎದುರಿನ ಇನ್ನುಳಿದ 2 ಪಂದ್ಯದಿಂದಲೂ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಔಟ್!

ಭಾರತ ಮತ್ತು ಆಸ್ಟ್ರೇಲಿಯಾ T20 ಸರಣಿಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಆಂಧ್ರದ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಗಾಯದ ಕಾರಣ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದಾರೆ.

Read Full Story
03:17 PM (IST) Oct 30

India Latets News Live 30 October 2025ವಿವಾಹಿತ ಮುಸ್ಲಿಂ ವ್ಯಕ್ತಿ ಜೊತೆ ಪ್ರೀತಿ - ಮಗಳ ಗೃಹ ಬಂಧನದಲ್ಲಿಟ್ಟ ಕೇರಳ ಸಿಪಿಎಂ ನಾಯಕ

Sangeetha Kerala viral video: ಕೇರಳ ಫೈಲ್ಸ್ ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ ಕೇರಳ ಸಿಪಿಐಎಂ ನಾಯಕ ಭಾಸ್ಕರನ್ ಅವರ ಪುತ್ರಿಯೇ ಈಗ ತನ್ನ ತಂದೆ ಮುಸ್ಲಿಂ ಯುವಕನ ಜೊತೆಗಿನ ತನ್ನ ಪ್ರೇಮವನ್ನು ವಿರೋಧಿಸಿ ತನ್ನನ್ನು ಗೃಹಬಂಧನದಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story
02:43 PM (IST) Oct 30

India Latets News Live 30 October 2025ಮಹಿಳಾ ವಿಶ್ವಕಪ್ ಸೆಮಿಫೈನಲ್‌ - ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ; ಭಾರತ ತಂಡದಲ್ಲಿ 3 ಮೇಜರ್ ಚೇಂಜ್

2025ರ ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಗಾಯಾಳುವಿನ ಬದಲಾಗಿ ಶಫಾಲಿ ವರ್ಮಾ ಸೇರಿದಂತೆ ಭಾರತ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದ್ದು, ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.

Read Full Story
01:25 PM (IST) Oct 30

India Latets News Live 30 October 2025ವಿಮಾನ 36000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಹೃದಯಾಘಾತ - ಪ್ರಯಾಣಿಕನ ಜೀವ ಉಳಿಸಿದ ಕೇರಳದ ನರ್ಸ್‌ಗಳು

ಕೊಚ್ಚಿಯಿಂದ ಅಬುಧಾಬಿಗೆ ತೆರಳುತ್ತಿದ್ದ ಏರ್ ಅರೇಬಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿತ್ತು. ಅದೇ ವಿಮಾನದಲ್ಲಿದ್ದ ಕೇರಳ ಮೂಲದ ಇಬ್ಬರು ನರ್ಸ್‌ಗಳು ತಕ್ಷಣವೇ ಸಿಪಿಆರ್ ನೀಡಿ ಪ್ರಯಾಣಿಕನ ಜೀವ ಉಳಿಸಿದ್ದಾರೆ. 

Read Full Story
12:33 PM (IST) Oct 30

India Latets News Live 30 October 2025ಮಹಿಳಾ ವಿಶ್ವಕಪ್ ಸೆಮೀಸ್ - ಇಂದು ಭಾರತ-ಆಸ್ಟ್ರೇಲಿಯಾ ಮ್ಯಾಚ್ ನಡಿಯೋದೇ ಡೌಟ್! ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ? ಇಲ್ಲಿದೆ ಡೀಟೈಲ್ಸ್

ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಸ್ಥಾನಕ್ಕಾಗಿ ಭಾರತ ಇಂದು ನವಿ ಮುಂಬೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಬಲಿಷ್ಠ ಕಾಂಗರೂ ಪಡೆಯ ಜೊತೆಗೆ ಮಳೆಯೂ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಮೀಸಲು ದಿನದ ನಿಯಮಗಳು ಕುತೂಹಲ ಕೆರಳಿಸಿವೆ. 

Read Full Story
11:14 AM (IST) Oct 30

India Latets News Live 30 October 2025ರ್‍ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮಾಗಿಲ್ಲ ಸರಿಸಾಟಿ! 18 ವರ್ಷಗಳ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ಹಿಟ್‌ಮ್ಯಾನ್

ದುಬೈ: ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story
09:36 AM (IST) Oct 30

India Latets News Live 30 October 2025ಮಹಿಳಾ ವಿಶ್ವಕಪ್‌ ಸೆಮಿಫೈನಲ್‌ - ಭಾರತಕ್ಕಿಂದು ಬಲಿಷ್ಠ ಆಸ್ಟ್ರೇಲಿಯಾ ಸವಾಲು! ಪಂದ್ಯ ಆರಂಭ ಎಷ್ಟು ಗಂಟೆಯಿಂದ?

ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2017ರ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಸ್ಫೋಟಕ ಶತಕದಂತೆ ಈ ಬಾರಿಯೂ ಭಾರತೀಯ ಆಟಗಾರ್ತಿಯಿಂದ ಅದ್ಭುತ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ. 

Read Full Story
09:00 AM (IST) Oct 30

India Latets News Live 30 October 2025ಮಳೆರಾಯನ ಆರ್ಭಟದ ನಡುವೆ ಸೂರ್ಯಕುಮಾರ್ ಯಾದವ್ ಐತಿಹಾಸಿಕ ಸಾಧನೆ!

ಕ್ಯಾನ್‌ಬೆರಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಪಂದ್ಯ ರದ್ದಾಗುವ ಮುನ್ನ, ನಾಯಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Read Full Story