ಗೋಧ್ರಾ ಗಲಭೆ ಪ್ರಕರಣ ಕುರಿತು ಸುಳ್ಳು ಸಾಕ್ಷಿ ಸೃಷ್ಟಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾಗೆ ಗುಜರಾತ್ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಆದರೆ ತಡ ರಾತ್ರಿ ಸುಪ್ರೀಂ ಕೋರ್ಟ್ ಮಧ್ಯಮಂತರ ಜಾಮೀನು ನೀಡಿದೆ.

ನವದೆಹಲಿ(ಜು.01) ಗೋಧಾ ಗಲಭೆ ಪ್ರಕರಣದಲ್ಲಿ ದಾಖಲೆಗಳನ್ನು ತಿರುಚಿದ ಆರೋಪದಡಿ ಅರೆಸ್ಟ್ ಆಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಮಧ್ಯಮಂತರ ಜಾಮೀನು ಸಿಕ್ಕಿದೆ. ಗುಜರಾತ್ ಹೈಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ ತೀಸ್ತಾಗೆ ರಿಲೀಫ್ ಸಿಕ್ಕಿದೆ. ತಡ ರಾತ್ರಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ 1 ವಾರದ ಮಧ್ಯಮಂತರ ಜಾಮೀನು ನೀಡಿದೆ. ಜುಲೈ 8 ರಂದು ತೀಸ್ತಾ ಸೆಟಲ್ವಾಡ್ ಪ್ರಕರಣದ ಜಾಮೀನು ಅರ್ಚಿ ವಿಚಾರಣೆ ಮಾಡುವುದಾಗಿ ತ್ರಿಸದಸ್ಯ ಪೀಠ ಹೇಳಿದೆ.

ಜಸ್ಟೀಸ್ ಬಿಆರ್ ಗವಾಯಿ, ಜಸ್ಟೀಸ್ ಬೋಪಣ್ಣ ಹಾಗೂ ಜಸ್ಟೀಸ್ ದೀಪಾಂಕರ್ ದತ್ತಾ ಅವರಿದ್ ತ್ರಿಸದಸ್ಯ ಪೀಠ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣ ಸಂಬಂಧ ಇಂದು ಸುಪ್ರೀಂ ಕೋರ್ಟ್ ಜಸ್ಟೀಸ್ ಎಎಸ್ ಓಕಾ ಹಾಗೂ ಪಿಕೆ ಮಿಶ್ರಾ ಅವರಿದ್ದ ದ್ವಿಸದಸ್ಯ ಪೀಠ ಜಾಮೀನು ಅರ್ಜಿ ವಿಚಾರಣೆಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು. ಹೀಗಾಗಿ ತಡರಾತ್ರಿ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ 1 ವಾರದ ಅವಧಿಗೆ ಮಧ್ಯಮಂತರ ಜಾಮೀನು ನೀಡಿದೆ.

ಮೋದಿಗೆ ಮರಣದಂಡನೆ ಸಿಗಬೇಕು, ತೀಸ್ತಾ ಸೆಟಲ್ವಾಡ್ ವಿರುದ್ಧ ಸಲ್ಲಿಸಿರುವ ಚಾರ್ಜ್‌ಶೀಟ್ ಸ್ಫೋಟಕ ಮಾಹಿತಿ ಬಹಿರಂಗ!

2002 ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷಿ ಸೃಷ್ಟಿಅಮಾಯಕರನ್ನು ತೊಂದರೆಗೆ ಸಿಲುಕಿಸಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾದ್‌ಗೆ ಜಾಮೀನು ನೀಡಲು ಗುಜರಾತ್‌ ಹೈಕೋರ್ಚ್‌ ನಿರಾಕರಿಸಿತ್ತು. ಇದುವರೆಗೆ ಮಧ್ಯಂತರ ಜಾಮೀನು ಪಡೆದಿದ್ದ ತೀಸ್ತಾ, ಸಾಮಾನ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಜಾ ಮಾಡಿರುವ ಕೋರ್ಚ್‌, ತಕ್ಷಣವೇ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತ್ತು. ಆದರೆ ಅದರ ಬೆನ್ನಲ್ಲೇ ತೀಸ್ತಾ ಸುಪ್ರೀಂಕೋರ್ಚ್‌ ಮೆಟ್ಟಿಲೇರಿದ್ದರು. ಶನಿವಾರ ಈ ಅರ್ಜಿಯನ್ನು ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತಾದರೂ, ಇಬ್ಬರ ನಡುವೆ ಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂವರು ನ್ಯಾಯಾಧೀಶರ ಪೀಠಕ್ಕೆ ಅರ್ಜಿ ವರ್ಗಾಯಿಸಲಾಗಿತ್ತು. ಇದೀಗ ತ್ರಿಸದಸ್ಯ ಪೀಠ 1 ವಾರದ ಮಧ್ಯಂತರ ಜಾಮೀನು ನೀಡಿದೆ.

ತೀಸ್ತಾ ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸುವ ಗುರಿ ಇಟ್ಟುಕೊಂಡಿದ್ದರು. ದುಷ್ಟ ಉದ್ದೇಶಗಳಿಗಾಗಿ ಪ್ರಜಾ ಪ್ರಭುತ್ವವನ್ನು ದೂಷಿಸುವ ಉದ್ದೇಶ ಹೊಂದಿದ್ದರು ಎಂದಿದ್ದ ಅಹಮ್ಮದಾಬಾದ್ ಸೆಷನ್ ನ್ಯಾಯಲಯ ಜುಲೈ 30, 2022ರಂದು ತೀಸ್ತಾಗೆ ಜಾಮೀನು ನಿರಾಕರಿಸಿತ್ತು. 

ಗುಜರಾತ್‌ ಗಲಭೆ: ತೀಸ್ತಾಗೆ ಹಣ ಬೇಕಾ ಎಂದು ಕೇಳಿದ್ದರಂತೆ ಸೋನಿಯಾ!

 ಗುಜರಾತ್ ಗಲಭೆ ವೇಳೆ ಹತ್ಯೆಗೀಡಾದ ಕಾಂಗ್ರೆಸ್ ಸಂಸದ (ಎಂಪಿ) ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರ ಮನವಿಯನ್ನು 2022ರ ಜೂನ್ 24ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದೇ ವೇಳೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತೀಸ್ತಾ ವಿರುದ್ಧ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ ಮರುದಿನ ತೀಸ್ತಾ ಬಂಧನವಾಗಿತ್ತು. ಗೋಧ್ರಾ ಗಲಭೆ ಪ್ರಕರಣದಲ್ಲಿ ವಿಶೇಷಾ ತನಿಖಾ ತಂಡ ಸಲ್ಲಿಸಿದ್ದ ವರದಿಯನ್ನು ಗುಜರಾತ್‌ ಹೈಕೋರ್ಟ್‌ 2017ರಲ್ಲಿ ಎತ್ತಿ ಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಝಾಕಿಯಾ ಸುಪ್ರೀಂ ಮೆಟ್ಟಿಲೇರಿದ್ದರು.