ನವದೆಹಲಿ(ಏ.18): ಕೊರೋನಾ ವ್ಯಾಪಕವಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮಾ.25ರಿಂದ ಘೋಷಿಸಿದ್ದ ದೇಶವ್ಯಾಪಿ ಲಾಕ್‌ಡೌನ್‌ ಪರಿಣಾಮಗಳು ಗೋಚರವಾಗಲು ಆರಂಭವಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೊಳಿಸುವುದಕ್ಕಿಂತ ಮೊದಲು ದೇಶದಲ್ಲಿ 3 ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆಯೀಗ 6.2 ದಿನಕ್ಕೆ ದುಪ್ಪಟ್ಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮಾಚ್‌ರ್‍ 25ಕ್ಕಿಂತ ಮೊದಲ ಅಂಕಿಅಂಶ ಹಾಗೂ ಕಳೆದ 7 ದಿನಗಳ ಅಂಕಿಅಂಶಗಳನ್ನು ತುಲನೆ ಮಾಡಿ ಈ ಮಾಹಿತಿ ನೀಡಿದೆ.

ರಾಜ್ಯಕ್ಕೆ ಕೊರೋನಾಘಾತ: ಒಂದೇ ದಿನ 44 ಮಂದಿಗೆ ಸೋಂಕು!

19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವ ವೇಗ ಇನ್ನೂ ಕಡಿಮೆಯಿದೆ. ದೇಶಾದ್ಯಂತ ಕೊರೋನಾ ಸೋಂಕಿತರು ಗುಣಮುಖರಾಗುವ ಪ್ರಮಾಣ ಕೂಡ ಸುಧಾರಿಸಿದೆ. ಈಗಲೂ ಬೇರೆ ಬೇರೆ ದೇಶಗಳಲ್ಲಿ ಗುಣಮುಖರಾಗುವ ದರಕ್ಕಿಂತ ನಮ್ಮದು ಹೆಚ್ಚಿದೆ. ಶೇ.80ರಷ್ಟುಸೋಂಕಿತರು ಗುಣಮುಖರಾಗಿದ್ದು, ಶೇ.20ರಷ್ಟುಸೋಂಕಿತರು ಮರಣಹೊಂದಿದ್ದಾರೆ. ಇಲ್ಲಿಯವರೆಗೆ ದೇಶದಲ್ಲಿ 1079 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಬೆಂಝ್ ಕಾರಿನಲ್ಲಿ ಸ್ವರ್ಗ ಪ್ರಯಾಣ, ನಿಧನದಲ್ಲೂ ಪ್ರಚಾರ ಪಡೆದ ರಾಜಕಾರಣಿ!

ಒಟ್ಟಾರೆ ಹೊಸ ಸೋಂಕುಗಳ ಪತ್ತೆ ಪ್ರಮಾಣದಲ್ಲಿ ಶೇ.40ರಷ್ಟುಇಳಿಕೆಯಾಗಿದೆ. ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲು ದೇಶದಲ್ಲಿ ಸಂಶೋಧನೆ ನಡೆಯುತ್ತಿದ್ದು, ಬಿಸಿಜಿ, ಪ್ಲಾಸ್ಮಾ ಥೆರಪಿ, ಮೋನೋಕ್ಲೋನಲ್‌ ಪ್ರತಿಕಾಯಗಳು ಮುಂದಾದ ವಿಧಾನಗಳನ್ನು ಪ್ರಯತ್ನಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.