ಅವಿಶ್ವಾಸ ನಿರ್ಣಯ ಗೊತ್ತುವಳಿ ಚರ್ಚೆ ಮೇಲೆ ವಿಪಕ್ಷಗಳ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ ಮೋದಿ, ಈಶಾನ್ಯ ರಾಜಗಳ ಮೇಲೆ ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ಮಿಜೋರಾಂ ದೇಶದ ಮೇಲೆ ವಾಯು ದಾಳಿ ನಡೆಸಿದ ಇಂದಿರಾ ಗಾಂಧಿ ನಡೆ ಹಾಗೂ ಕಾಂಗ್ರೆಸ್ ಆಡಳಿತನ್ನು ಮೋದಿ ಪ್ರಶ್ನಿಸಿದ್ದಾರೆ.ಅಷ್ಟಕ್ಕೂ 1966ರಲ್ಲಿ ನಮ್ಮದೇ ದೇಶದ ಜನರ ಮೇಲೆ ನಮ್ಮದೇ ಸರ್ಕಾರ ಬಾಂಬ್ ದಾಳಿ ನಡೆಸಿದ್ದು ಯಾಕೆ? ಇಲ್ಲಿದೆ ಇತಿಹಾಸ.
ನವದೆಹಲಿ(ಆ.11) ಮಣಿಪುರ ಹಿಂಸಾಚಾರ ವಿಚಾರದಲ್ಲಿ ಪ್ರಧಾನಿ ಮೌನ ವಹಿಸಿದ್ದಾರೆ ಎಂದು ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆದರೆ ವಿಪಕ್ಷಗಳ ಆರೋಪ, ಪ್ರಶ್ನೆಗಳಿಗೆ ಪ್ರಧಾನಿ ಮೋದಿ ತಕ್ಕ ತಿರುಗೇಟು ನೀಡಿದ್ದಾರೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿ ವಿಚಾರ, ಭಾರತದ ಜೊತೆಗೆ ಮುಖ್ಯವಾಹನಿಯಲ್ಲಿ ಜೋಡಿಸುವ ವಿಚಾರದಲ್ಲಿ ಬಿಜೆಪಿ ಯಾವತ್ತೂ ಹಿಂದೆ ಸರಿದಿಲ್ಲ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಈಶಾನ್ಯ ರಾಜ್ಯಗಳ ಮೇಲೆ ನಡೆಸಿದ ಅನ್ಯಾಯವನ್ನು ಮೋದಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಾರ್ಚ್ 5, 1966ರಂದು ಇಂದಿರಾ ಗಾಂಧಿ ನೇೃತ್ವದ ಕಾಂಗ್ರೆಸ್ ಸರ್ಕಾರ ಮಿಜೋರಾಂ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇತಿಹಾಸ ಕೆದಕಿದ ಮೋದಿ, ಕಾಂಗ್ರೆಸ್ ಮುಚ್ಚಿಟ್ಟಿದ ಘಟನೆಯನ್ನು ಜನತೆಗೆ ನೆನಪಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಮೋದಿ, ಈಶಾನ್ಯಕ್ಕೆ ಸಂಬಂಧಿಸಿದ ಮೂರು ಘಟನೆಗಳನ್ನು ಉಲ್ಲೇಖಿಸಿದರು. ಮೊದಲನೆಯದಾಗಿ, ಮಾರ್ಚ್ 5, 1966 ರಂದು, ಮಿಜೋರಾಂನಲ್ಲಿ ಜನರ ಮೇಲೆ ದಾಳಿ ಮಾಡಲು ವಾಯುಪಡೆಯನ್ನು ಬಳಸಲಾಯಿತು. ಎರಡನೆಯದಾಗಿ, 1962ರಲ್ಲಿ ಆಗಿನ ಪ್ರಧಾನಿ ನೆಹರೂ ಅವರು ಚೀನಾದ ಆಕ್ರಮಣದ ಸಮಯದಲ್ಲಿ ಈಶಾನ್ಯದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು ರೇಡಿಯೋ ಮೂಲಕ ಪ್ರಸಾರ ಮಾಡಿದರು. ಈ ಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂಬ ರಾಮ್ ಮನೋಹರ್ ಲೋಹಿಯಾ ಅವರ ಆರೋಪವನ್ನು ಸಹ ಪ್ರಧಾನಿ ಉಲ್ಲೇಖಿಸಿದರು. ಪ್ರಸ್ತುತ ಸರ್ಕಾರದಲ್ಲಿ ಸಚಿವರು ಈಶಾನ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ 400 ರಾತ್ರಿಗಳು ತಂಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರ ಮಾತು ಆರಂಭಿಸುತ್ತಿದ್ದಂತೆ ಸದನದಿಂದ ಹೊರನಡೆದ ವಿಪಕ್ಷ!
ನಾನು ಈಶಾನ್ಯದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೇನೆ. ಪ್ರಧಾನಿಯಾಗುವ ಮೊದಲೇ ನಾನು ಈ ಪ್ರದೇಶದಾದ್ಯಂತ ಪ್ರವಾಸ ಮಾಡಿದ್ದೇನೆ ಎಂದು 1966ರ ಘಟನೆಯನ್ನು ನೆನಪಿಸಿದ್ದಾರೆ. ಅಷ್ಟಕ್ಕೂ 1966ರ ಮಾರ್ಚ್ 5 ರಂದು ಅಂದಿನ ಕಾಂಗ್ರೆಸ್ ಸರ್ಕಾರ ಘನಘೋರ ನಿರ್ಧಾರ ತೆಗೆದುಕೊಂಡಿತ್ತು. ಬಂಡಾಯ ಹತ್ತಿಕ್ಕಲು ಜನಸಾಮಾನ್ಯರ ಮೇಲೆ ತಮ್ಮದೇ ದೇಶದ ವಾಯುಸೇನೆ ಬಳಸಿ ತಮ್ಮದೇ ದೇಶದ ಜನರ ಮೇಲೆ ಬಾಂಬ್ ದಾಳಿ ನಡೆಸಿತ್ತು.
ಕಾಂಗ್ರೆಸ್ ಇದಕ್ಕೆ ಉತ್ತರ ನೀಡಬೇಕು. ಮಿಜೋರಾಂ ಮೇಲೆ ಅನ್ಯ ದೇಶದ ವಾಯು ಪಡೆ ದಾಳಿ ಮಾಡಿತ್ತಾ? ನಮ್ಮ ದೇಶದ ಅಮಾಯಕ ಜನರ ಮೇಲೆ ಬಾಂಬ್ ದಾಳಿ ಮಾಡಿದ್ದೀರಿ. ಯಾಕೆ ಮಿಜೋರಾಂ ಜನರು ನಮ್ಮ ದೇಶದವರಲ್ಲವೇ? ಮಿಜೋರಾಂ ಜನರ ಭದ್ರತೆ ಭಾರತ ಸರ್ಕಾರದ ಜವಾಬ್ದಾರಿ ಆಗಿರಲಿಲ್ಲವೇ? ಎಂದು ಮೋದಿ ಸದನದಲ್ಲಿ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದರು. ಈಗಲೂ ಮಾರ್ಚ್ 5 ರಂದು ಮಿಜೋರಾಂ ಜನತೆ ಶೋಕಾಚರಣೆ ಆಚರಿಸುತ್ತಾರೆ.ಈ ನೋವಿನಿಂದ ಮಿಜೋರಾಂ ಜನತೆ ಈಗಲೂ ಹೊರಬಂದಿಲ್ಲ ಎಂದು ಮೋದಿ ಹೇಳಿದ್ದಾರೆ.
1966ರಲ್ಲಿ ಮಿಜೋರಾಂ ಮೇಲಿನ ಬಾಂಬ್ ದಾಳಿ ಇತಿಹಾಸ: ಮಾರ್ಚ್ 5, 1966ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ನಿರ್ದೇಶದ ಮೇರೆ ಭಾರತೀಯ ಸೇನೆ ಮಿಜೋರಾಂನ ಐಜ್ವಾಲ್ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸಾವಿರಾರು ಮಂದಿ ಅಮಾಯಕರು ಬಲಿಯಾಗಿದ್ದರು. ಐಜ್ವಾಲ್ ಸಂಪೂರ್ಣ ಸ್ಮಶಾನವಾಗಿತ್ತು. ಮನೆ, ಕಟ್ಟಡ ನೆಲಸಮಗೊಂಡಿತ್ತು.
ಬೆಂಗಳೂರಿನಲ್ಲಿ UPA ಅಂತ್ಯಕ್ರಿಯೆ ಮಾಡಿ ಹೊಸ ಪೈಂಟ್ ಬಳಿದ ಕಾಂಗ್ರೆಸ್, ವಿಪಕ್ಷ ಒಕ್ಕೂಟ ತಿವಿದ ಮೋದಿ!
ಕಾಂಗ್ರೆಸ್ ಸರ್ಕಾರ ದಂಗೆ ಹತ್ತಿಕ್ಕಲು ಈ ದಾಳಿ ನಡೆಸಿತ್ತು. ಆದರೆ ಈ ದಾಳಿಯಲ್ಲಿ ಜೀವ ಕಳೆದುಕೊಂಡವರ ಪೈಕಿ ಅಮಾಯಕರೇ ಹೆಚ್ಚು. 1960ರ ದಶಕದಲ್ಲಿ ಮಿಜೋ ಹಿಲ್ಸ್ ಅಸ್ಸಾಂನ ಭಾಗವಾಗಿತ್ತು. ಮಿಜೋರಾಂ ಪ್ರತ್ಯೇಕ ರಾಜ್ಯವಾಗಿರಲಿಲ್ಲ. ಮಿಜೋರಾಂ ಪರ್ವತ ಶ್ರೇಣಿಯ ಕಾಂಡಂಚಿನ ಗ್ರಾಮಗಳ ಜನರಿಗೆ ಪರಿಹಾರ ಸಾಮಾಗ್ರಿ, ಆಹಾರ, ಔಷಧಿ ವಿತರಣೆಗೆ ಮಿಜೋ ನ್ಯಾಷನಲ್ ಫೆಮಿನ್ ಫ್ರಂಟ್(MNFF) ಸಂಘಟನೆ ಆರಂಭಗೊಂಡಿತು. 1960ರಲ್ಲಿ MNFF ಸಂಘಟನೆ ಲಾಲ್ದೆಂಗಾ, ಲಾಲುನಮಾವಿಯಾ, ಸೈಂಗಕಾ ಹಾಗೂ ವನ್ಲಾಲ್ರುಯಾ ನಾಯಕತ್ವದಲ್ಲಿ ಮುನ್ನಡೆಯಿತು.
ಈ ಸಂಘಟನೆಗೆ ಮಿಜೋರಾಂ ಹಾಗೂ ಅಸ್ಸಾಂನಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು. 1961ರಲ್ಲಿ ಸಾಮಾಜಿಕ ಸಂಘಟನೆಯಾಗಿದ್ದ ಮಿಜೋ ನ್ಯಾಷನಲ್ ಫೆಮಿನ್ ಫ್ರಂಟ್ ರಾಜಕೀಯವಾಗಿ ಪ್ರೇರಿತಗೊಂಡಿತು. ಹೀಗಾಗಿ ಮಿಜೋ ನ್ಯಾಷನಲ್ ಫ್ರಂಟ್ ಎಂದು ಹೆಸರು ಬದಲಾಯಿಸಿಕೊಂಡು ಹೋರಾಟಕ್ಕೆ ಇಳಿಯಿತು. ಮಿಜೋರಾಂ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭಗೊಂಡಿತು. ಪ್ರತ್ಯೇಕ ರಾಜ್ಯದ ಕಲ್ಪನೆಯ ಹೋರಾಟ ಪ್ರತ್ಯೇಕ ಮಿಜೋರಾಂ ರಾಷ್ಟ್ರವಾಗಿ ರೂಪುಗೊಂಡಿತು. ಇದೇ ವೇಳೆ ಗ್ರೇಟರ್ ಮಿಜೋರಾಂ ಆಂದೋಲನ ಆರಂಭಿಸಲಾಯಿತು.
ಮಿಜೋರಾಂ, ಅಸ್ಸಾಂ, ಮಣಿಪುರ ಹಾಗೂ ಮಿಜೋ ಹಿಡಿತದಲ್ಲಿದ್ದ ಬರ್ಮಾದಲ್ಲೂ ಪ್ರತ್ಯೇಕ ಮಿಜೋರಾಂ ರಾಷ್ಟ್ರದ ಪರಿಕಲ್ಪನೆ ಹರಡಲಾಯಿತು. ಬಂಡುಕೋರರು ಈ ಗುಂಪು ಸೇರಿಕೊಂಡರು. ನಿವೃತ್ತ ಮಾಜಿ ಸೈನಿಕರು ಈ ಗುಂಪು ಸೇರಿಕೊಂಡು ಬಂಧೂಕು ಹೋರಾಟ ಆರಂಭಿಸಿತು. ಫೆಬ್ರವರಿ 28, 1966ರಲ್ಲಿ MNF ಸಂಘಟನೆ ಉಗ್ರ ಸ್ವರೂಪ ಪಡೆದುಕೊಂಡಿತು. ಮಿಜೋರಾಂನಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆ ಮೇಲೆ ದಾಳಿ ಆರಂಭಿಸಿತು. ಐಜ್ವಾಲ್ ಹಾಗೂ ಲುಂಗ್ಲೈನಲ್ಲಿ ಭಾರಿ ಹಿಂಸಾಚಾರ ನಡೆಯಿತು.
ಭಾರಿ ಮರಗಳನ್ನು ರಸ್ತೆಯಲ್ಲಿ ಕಡಿದು ಹಾಕಿ ಮಿಜೋರಾಂ ಜೊತೆಗಿನ ಇತರ ಎಲ್ಲಾ ರಾಜ್ಯಗಳುು ಹಾಗೂ ಭಾರತದ ಸಂಪರ್ಕ ಕಡಿತಗೊಳಿಸಲಾಯಿತು. 1966, ಮಾರ್ಚ್ 1 ರಂದು ಮಿಜೋ ನ್ಯಾಷನಲ್ ಫ್ರಂಟ್ ಸಂಘಟನೆ ಮಹತ್ವದ ಘೋಷಣೆ ಮಾಡಿತು. ಮಿಜೋ ಸ್ವಾತಂತ್ರಗೊಂಡಿದೆ ಎಂದು ಘೋಷಿಸಿತು. ಅಷ್ಟರಲ್ಲೇ ಸೇನೆಗೆ ಪರಿಸ್ಥಿತಿ ನಿಭಾಯಿಸಲು ಕಾಂಗ್ರೆಸ್ ಸರ್ಕಾರ ಸೂಚನೆ ನೀಡಿತ್ತು.
ಹಿಂಸಾಚಾರ ಭುಗಿಲೆದ್ದ ಕಾರಣ ಐಜ್ವಾಲ್ ಹಾಗೂ ಸುತ್ತಮುತ್ತಲಿನ ಜನರು ಗ್ರಾಮಗಳನ್ನು ತೊರೆಯಲು ಆರಂಭಿಸಿದರು. ಮಿಜೋ ನ್ಯಾಷನಲ್ ಫ್ರಂಟ್ ಸಂಘಟನೆ ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಂಡಿತು. ಸೇನಾ ನೆಲೆಗಳನ್ನು ಕೈವಶ ಮಾಡಿತ್ತು. ಕಾಲೇಜು, ಆಸ್ಪತ್ರೆ ಸೇರಿದಂತೆ ಹಲವು ಪ್ರದೇಶಗಳು ಮಿಜೋ ನ್ಯಾಷನಲ್ ಫ್ರಂಟ್ ಸಂಘಟನೆ ಕೈವಶವಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಇಂದಿರಾ ಗಾಂಧಿ ಭಾರತೀಯ ವಾಯು ಸೇನೆಗೆ ಆದೇಶ ನೀಡಿದರು. ಐಜ್ವಾಲ್ ಹಾಗೂ ಬಂಡುಕೋರರು ಹೆಚ್ಚಿರುವ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸಲು ಸೂಚನೆ ನೀಡಿದರು.
ವಿಪಕ್ಷಗಳ ಅವಿಶ್ವಾಸ ಬಿಜೆಪಿಗೆ ಶುಭ ಸಂಕೇತ, 2019ರ ಘಟನೆ ನೆನೆಪಿಸಿದ ಪ್ರಧಾನಿ ಮೋದಿ!
ಇದರಂತೆ ಭಾರತೀಯ ವಾಯು ಸೇನೆ ತನ್ನ ದೇಶದ ನಾಗರೀಕರ ಮೇಲೆ ಬಾಂಬ್ ದಾಳಿ ನೆಡೆಸಿತು. ಈ ದಾಳಿಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಸಂಘಟನೆ ಬಂಡುಕೋರರಿಗಿಂತ ಮಿಜೋರಾಂ ಅಮಾಯಕರು ಬಲಿಯಾಗಿದ್ದರು. ಈ ಕಾರ್ಯಾಚರಣೆಗೆ ಭಾರತೀಯ ವಾಯುಸೇನೆ, ಫ್ರಾನ್ಸ್ ನಿರ್ಮಿತ ದಸಾಲ್ಟ್ ಫೈಟರ್ಸ್ ಏರ್‌ಕ್ರಾಫ್ಟ್, ಬ್ರಿಟೀಷ್ ಹಂಟರ್ ಏರ್‌ಕ್ರಾಫ್ಟ್ ಬಳಕೆ ಮಾಡಿತ್ತು. ಮಿಶಿನ್ ಗನ್ ಮೂಲಕ ಸೇನೆ ದಾಳಿ ನಡೆಸುತ್ತಿದ್ದಂತೆ ವಾಯು ಸೇನೆ ಬಾಂಬ್ ದಾಳಿ ನಡೆಸಿತ್ತು.
ಆದರೆ ಈ ವಿಚಾರವನ್ನು ಹೊರಬರದಂತೆ ನೋಡಿಕೊಳ್ಳಲಾಯಿತು. ದಾಳಿಯೇ ನಡೆದಿಲ್ಲ ಎಂಬಂತೆ ಬಿಂಬಿಸಲಾಗಿತ್ತು. ಮಾಧ್ಯಮಗಳ ವರದಿಯನ್ನು ಅಲ್ಲಗೆಳೆದ ಸರ್ಕಾರ ಪರಿಹಾರ ಸಾಮಾಗ್ರಿ ಹೊತ್ತ ವಾಯುಸೇನೆ ವಿಮಾನಗಳು ಮಿಜೋರಾಂಗೆ ತೆರಳಿತ್ತು. ಆದರೆ ದಾಳಿ ನಡೆದಿಲ್ಲ ಎಂದಿತ್ತು. ಈ ದಾಳಿಯನ್ನು ಕಣ್ಣಾರೆ ಕಂಡ ಹಾಗೂ ಮಿಜೋ ನ್ಯಾಷನಲ್ ಫ್ರಂಟ್ ಸಂಘಟನೆಯಲ್ಲಿದ್ದ ಹಲವರು ಈ ಘಟನೆನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.
