Asianet Suvarna News Asianet Suvarna News

ನಬಾ ದಾಸ್ ರೀತಿಯಲ್ಲೇ ಹತ್ಯೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಿಗೆ ಕೊಲೆ ಬೆದರಿಕೆ!

ಈ ವರ್ಷದ ಆರಂಭದಲ್ಲೇ ಒಡಿಶಾ ಸಚಿವರನ್ನು ಹಾಡಹಗಲೇ ಶೂಟ್ ಮಾಡಿ ಹತ್ಯೆ ಮಾಡಲಾಗಿತ್ತು. ಇದೇ ರೀತಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನು ಹತ್ಯೆ ಮಾಡಲಾಗುವುದು ಎಂಬ ಕೊಲೆ ಬೆದರಿಕೆ ಬಂದಿದೆ.

BJP leader Baijayant Panda receives threat call by unknow you will be killed like Naba Das ckm
Author
First Published Sep 21, 2023, 5:11 PM IST

ನವದೆಹಲಿ(ಸೆ.21) ಲೋಕಸಭಾ ಚುನಾವಣೆ ತಯಾರಿ ಚುರುಕುಗೊಳ್ಳುತ್ತಿದ್ದಂತೆ ಇದೀಗ ಬಿಜೆಪಿಗೆ ನಾಯಕರಿಗೆ ಕೊಲೆ ಬೆದರಿಕೆಗಳು ಹೆಚ್ಚಾಗುತ್ತಿದೆ. ಇದೀಗ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾಗೆ ಕೊಲೆ ಬೆದರಿಕೆ ಬಂದಿದೆ. ಪಾಂಡ ಕಾರ್ಯದರ್ಶಿಗೆ ಅನಾಮಿಕ ವ್ಯಕ್ತಿ ಕರೆ ಮಾಡಿ ಬೈಜಯಂತ್‌ರನ್ನು ಕೊಲೆ ಮಾಡುವುದಾಗಿ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಹಾಡಹಗಲೇ ಒಡಿಶಾ ಸಚಿವ ನಬಾ ದಾಸ್ ಹತ್ಯೆ ಮಾಡಿದ ರೀತಿಯಲ್ಲೇ ಬೈಜಯಂತ್ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಈ ಕುರಿತು ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಬೈಜಯಂತ್‌ಗೆ ಭದ್ರತೆ ನೀಡಲಾಗಿದೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಬೈಜಯಂತ್ ಪಾಂಡ ಕಾರ್ಯದರ್ಶಿ, ಬೆದರಿಕೆ ಕರೆ ಕುರಿತು ಕೆಲ ಮಾಹಿತಿ ನೀಡಿದ್ದಾರೆ. ಜಯ್ ಪಾಂಡಾ ಕಚೇರಿಗೆ  ಅನಾಮಿಕ ವ್ಯಕ್ತಿಯಿಂದ ಕರೆ ಬಂದಿದೆ. ನೇರವಾಗಿ ಜಯ ಪಾಂಡಾ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದೇ ವೇಳೆ ಒಡಿಶಾ ಸಂಪುಟದ ಸಚಿವರನ್ನು ಹತ್ಯೆ ಮಾಡಿದ ರೀತಿಯಲ್ಲೇ ಹಾಡಹಗಲೇ ಹತ್ಯೆ ಮಾಡುವುದಾಗಿ ಹೇಳಿ ಕರೆ ಕಟ್ ಮಾಡಿದ್ದಾನೆ.

ಖಲಿಸ್ತಾನ ಉಗ್ರ ಪನ್ನು ಸತ್ತಿಲ್ಲ, ಮೋದಿ-ಶಾ ಸೇರಿ ಹಲವರಿಗೆ ಕೊಲೆ ಬೆದರಿಕೆ ವಿಡಿಯೋ ಬಹಿರಂಗ!

ಈ ಅನಾಮಿಕ ಕರೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಬೆದರಿಕೆ ಕರೆ ನಕಲಿಯೋ ಅಥವಾ ನಿಜವಾಗಿಯೋ ಬೆದರಿಕೆ ಕರೆಯೋ ಅನ್ನೋದನ್ನು ಪತ್ತೆ ಹಚ್ಚಲಾಗುತ್ತಿದೆ. ಕರೆ ಬಂದಿರುವ ನಂಬರ್ ಟ್ರೇಸ್ ಮಾಡಲಾಗುತ್ತಿದೆ. ಬೆದರಿಕೆ ಕರೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ.  ಈ ಕುರಿತು ಪೊಲೀಸ್ ಅಧಿಕಾರಿಗಳ ತಂಡ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.ಟ

ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ಶಾಸಕ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ ಬಂದಿತ್ತು. ಈ ಕುರಿತು ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಜಿ ಸಚಿವರೂ ಆಗಿದ್ದ ಟಿ.ಬಿ. ಜಯಚಂದ್ರ ಅವರು ಹಿಂದೆ ಸಚಿವರಾಗಿದ್ದಾಗ ನೈಸ್‌ ಸಂಸ್ಥೆಯ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ವರದಿ ಪ್ರಕಾರ ನೈಸ್‌ ಸಂಸ್ಥೆಯ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು.

ನಟ ಪ್ರಕಾಶ್ ರಾಜ್‌ಗೆ ಜೀವ ಬೆದರಿಕೆ ಹಾಕಿದ ಯೂಟ್ಯೂಬ್​ ವಾಹಿನಿ ವಿರುದ್ಧ ಎಫ್​ಐಆರ್‌: ಆರೋಪ ಏನು?

ಆಗಿನಿಂದ ಜಯಚಂದ್ರ ಅವರಿಗೆ ಸತತವಾಗಿ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಪ್ರತಿ ಬಾರಿಯೂ ಬೇರೆ ಬೇರೆ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದು ಅವುಗಳನ್ನು ಬರೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ತಾವು ಕೂಡಲೇ ಕಾರ್ಯಪ್ರವೃತ್ತರಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಯಚಂದ್ರ ಅವರ ವಿಶೇಷ ಕರ್ತವ್ಯಾಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios