Asianet Suvarna News Asianet Suvarna News

ನಿಷೇಧದ ಬೆನ್ನಲ್ಲೇ ಪಂಡಿತರಿಗೆ ಟಿಆರ್‌ಎಫ್‌ ಉಗ್ರರ ಬೆದರಿಕೆ

ಗೃಹ ಸಚಿವಾಲಯದಿಂದ ಗುರುವಾರ ದೇಶವ್ಯಾಪಿ ನಿಷೇಧಕ್ಕೊಳಗಾದ ಬೆನ್ನಲ್ಲೇ ಟಿಆರ್‌ಎಫ್‌ ಉಗ್ರ ಸಂಘಟನೆಯು, ಕಾಶ್ಮೀರಿ ಪಂಡಿತರ ವಿರುದ್ಧ ಶನಿವಾರ ಹಿಟ್‌ಲಿಸ್ಟ್‌ ಬಿಡುಗಡೆ ಮಾಡುವ ಮೂಲಕ ಭಯೋತ್ಪಾದಕ ದಾಳಿಯ ಎಚ್ಚರಿಕೆ ನೀಡಿದೆ.  

After the ban, TRF militants threatened the kashmir Pandits akb
Author
First Published Jan 8, 2023, 8:51 AM IST

ನವದೆಹಲಿ: ಗೃಹ ಸಚಿವಾಲಯದಿಂದ ಗುರುವಾರ ದೇಶವ್ಯಾಪಿ ನಿಷೇಧಕ್ಕೊಳಗಾದ ಬೆನ್ನಲ್ಲೇ ಟಿಆರ್‌ಎಫ್‌ ಉಗ್ರ ಸಂಘಟನೆಯು, ಕಾಶ್ಮೀರಿ ಪಂಡಿತರ ವಿರುದ್ಧ ಶನಿವಾರ ಹಿಟ್‌ಲಿಸ್ಟ್‌ ಬಿಡುಗಡೆ ಮಾಡುವ ಮೂಲಕ ಭಯೋತ್ಪಾದಕ ದಾಳಿಯ ಎಚ್ಚರಿಕೆ ನೀಡಿದೆ.  ಟಿಆರ್‌ಎಫ್‌ ಜಮ್ಮು ಕಾಶ್ಮೀರದ ಜನರನ್ನು ಭಾರತ ಸರ್ಕಾರದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಪ್ರಚೋದನೆ ನೀಡುತ್ತದೆ ಹಾಗೂ ಉಗ್ರರ ಒಳನುಸುಳುವಿಕೆಗೆ ಮತ್ತು ಪಾಕಿಸ್ತಾನದಿಂದ ಜಮ್ಮು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಮಾದಕ ವಸ್ತುಗಳ ಸಾಗಣೆಗೆ ಪ್ರೇರಣೆ ನೀಡುತ್ತದೆ. ಈ ಹಿಂದೆ ಕೂಡ ಅದು ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿತ್ತು. ಲಷ್ಕರ್‌ ಎ ತೊಯ್ಬಾದ ಸೋದರ ಸಂಘಟನೆ ಇದಾಗಿದೆ. 2019ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಕಾಶ್ಮೀರದ ಆ್ಯಂಟಿ ಫ್ಯಾಸಿಸ್ಟ್‌ ಫ್ರಂಟ್‌ ಉಗ್ರ ಸಂಘಟನೆಗೆ ಕೇಂದ್ರ ನಿಷೇಧ

ಜೈಶ್‌-ಎ-ಮೊಹಮ್ಮದ್‌ (Jaish-e-Mohammed) ಉಗ್ರ ಸಂಘಟನೆಯಾದ ಆ್ಯಂಟಿ ಫ್ಯಾಸಿಸ್ಟ್‌ ಫ್ರಂಟ್‌ಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಇದೇ ವೇಳೆ, ಲಷ್ಕರ್‌-ಎ-ತೊಯ್ಬಾ (Lashkar-e-Taiba) ಉಗ್ರ ಅರ್ಬಾಜ್‌ ಅಹ್ಮದ್‌ ಮೀರ್‌ನನ್ನು (Arbaz Ahmed Mir) ಯುಎಪಿ ಕಾಯ್ದೆಯಡಿ ಭಯೋತ್ಪಾದಕ ಎಂದು ಘೋಷಿಸಿದೆ. ಜಮ್ಮು ಕಾಶ್ಮೀರದಲ್ಲಿ (Jammu and Kashmir) ಕೆಲಸ ಮಾಡುತ್ತಿರುವ ಬೇರೆ ರಾಜ್ಯದ ಭದ್ರತಾ ಪಡೆಗಳು, ರಾಜಕೀಯ ನಾಯಕರು ಸೇರಿದಂತೆ ನಾಗರಿಕರಿಗೆ ಫ್ಯಾಸಿಸ್ಟ್‌ ಫ್ರಂಟ್‌ ನಿರಂತರವಾಗಿ ಬೆದರಿಕೆ ಒಡ್ಡುತ್ತಿದ್ದು, ಇತರ ಉಗ್ರ ಸಂಘಟನೆಗಳೊಂದಿಗೆ ಸೇರಿ ಹಿಂಸಾತ್ಮಕ ಕೃತ್ಯ ನಡೆಸಲು ಪಿತೂರಿ ನಡೆಸುತ್ತಿದೆ. ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆದು ಬಂದೂಕು ತರಬೇತಿ ನೀಡುವಂತಹ ಕೃತ್ಯಗಳಲ್ಲಿ ತೊಡಗಿದ್ದು ಆ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಗೃಹ ಸಚಿವಾಲಯ (The Ministry of Home Affairs)ತಿಳಿಸಿದೆ.

ಇನ್ನು ಕಾಶ್ಮೀರದಿಂದ ಪಾಕಿಸ್ತಾನಕ್ಕೆ (Pakistan) ವಲಸೆ ಹೋಗಿ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಕೆಲಸ ಮಾಡುತ್ತಿರುವ ಅರ್ಬಾಜ್‌ ಅಹ್ಮದ್‌ ಮೀರ್‌ನನ್ನು ಉಗ್ರನೆಂದು ಘೋಷಿಸಿದೆ. ಈತ ಕೆಲವು ತಿಂಗಳ ಹಿಂದೆ ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಶಿಕ್ಷಕಿ ರೈನ್‌ ಬಾಲಾ ಹತ್ಯೆಯ ಪ್ರಮುಖ ಪಾತ್ರಧಾರಿಯಾಗಿದ್ದ. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಸಾಗಣೆಯಂತ ಚಟುವಟಿಕೆಯಲ್ಲಿ ತೊಡಗಿದ್ದಾನೆ.

Follow Us:
Download App:
  • android
  • ios