Asianet Suvarna News Asianet Suvarna News

2 ತಿಂಗಳ ಹಿಂದೆ ಅನ್ಯ ಧರ್ಮದವನೊಂದಿಗೆ ಪರಾರಿದ ಯುವತಿ, ತಂದೆ ಮನೆಯಲ್ಲಿ ರಕ್ತ ಸಿಕ್ತ ಶವ ಪತ್ತೆ!

* ಮರ್ಯಾದಾ ಹತ್ಯೆಯ ಶಂಕೆ, ಮಗಳನ್ನೇ ಕೊಂದರಾ ತಂದೆ

* 2 ತಿಂಗಳ ಹಿಂದೆ ಅನ್ಯ ಧರ್ಮದವನೊಂದಿಗೆ ಪರಾರಿದ ಯುವತಿ

* ತಂದೆ ಮನೆಯಲ್ಲಿ ರಕ್ತ ಸಿಕ್ತ ಶವ ಪತ್ತೆ!

21 year old girl in inter faith relationship found dead at home in Telangana pod
Author
Bangalore, First Published May 28, 2022, 1:33 PM IST

ಹೈದರಾಬಾದ್(ಮೇ.28): ತೆಲಂಗಾಣದ 21 ವರ್ಷದ ಯುವತಿಯೊಬ್ಬಳು ಅನ್ಯ ಧರ್ಮದ ಹುಡುಗನ ಪ್ರೀತಿಗೆ ಬಿದ್ದು ಬೆಲೆ ತೆತ್ತಿದ್ದಾಳೆ. ಶುಕ್ರವಾರ ಯುವತಿಯ ಶವ ಅವರ ಮನೆಯಲ್ಲಿ ಪತ್ತೆಯಾಗಿದೆ. ದೇಹವು ರಕ್ತ ಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ಯುವತಿಯ ತಂದೆ ಕೂಡಾ ಸುಳ್ಳು ಕಥೆ ಹೇಳಿ ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.

ಘಟನೆ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನಾಗಲ್ ಕೊಂಡ ಗ್ರಾಮದಲ್ಲಿ 21 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಯುವತಿ ಅನ್ಯ ಧರ್ಮದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಎರಡು ತಿಂಗಳ ಹಿಂದೆ ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಬಳಿಕ ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಮಧ್ಯೆ ಯುವತಿ ತನ್ನ ಪ್ರಿಯಕರನ ಜೊತೆ ಮಹಾರಾಷ್ಟ್ರಕ್ಕೆ ಹೋಗಿ ವಾಸವಾಗಿದ್ದಾಳೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ ತೆರಳಿ ಬಾಲಕಿಯನ್ನು ಕರೆತಂದು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದರು.

ಕುತ್ತಿಗೆಯಲ್ಲಿ ಹಲವು ಗಾಯ

ಶುಕ್ರವಾರ ಬಾಲಕಿಯ ಶವ ಆಕೆಯ ಮನೆಯಲ್ಲಿ ಪತ್ತೆಯಾಗಿದೆ. ಹರಿತವಾದ ಆಯುಧದಿಂದ ಆಕೆಯ ಕತ್ತು ಸೀಳಲಾಗಿತ್ತು. ಪೊಲೀಸರ ಪ್ರಕಾರ, ಆಕೆಯ ಕುತ್ತಿಗೆಯಲ್ಲಿ ಹಲವಾರು ಆಳವಾದ ಗಾಯಗಳಿವೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಯುವತಿಯೊಬ್ಬಳು ಈ ರೀತಿ ಹರಿತವಾದ ಆಯುಧದಿಂದ ತನ್ನ ಕತ್ತು ಸೀಳಿಕೊಂಡಿದ್ದು ಹೇಗೆ ಎಂದು ಪೊಲೀಸ್ ಅಧಿಕಾರಿಗಳಿಗೆ ಕಾಡಿದ ಪ್ರಶ್ನೆಯಾಗಿತ್ತು. ಯುವತಿಯನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ತಂದೆ ಸುಳ್ಳು ಕಥೆ ಹೇಳುತ್ತಿದ್ದಾರೆ. ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

ಮಗಳನ್ನು ತಂದೆಯೇ ಕೊಂದಿರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು

ಯುವತಿಯನ್ನು ಆಕೆಯ ತಂದೆಯೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಆದಿಲಾಬಾದ್ ಎಸ್ಪಿ ಉದಯ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಮಗಳು ಅನ್ಯ ಧರ್ಮದ ಹುಡುಗನ ಜೊತೆ ಮನೆ ಬಿಟ್ಟು ಓಡಿ ಹೋಗಿರುವುದಕ್ಕೆ ಸಿಟ್ಟು ಬಂದಿತ್ತು. ಬಾಲಕಿಯನ್ನು ಮಹಾರಾಷ್ಟ್ರದಿಂದ ಕರೆತಂದ ಬಳಿಕ ಆಕೆಯ ಸಂಬಂಧಿಕರಿಗೆ ಕೌನ್ಸೆಲಿಂಗ್ ನಡೆಸಲಾಯಿತು. ಇದಾದ ಬಳಿಕ ಬಾಲಕಿಯನ್ನು ಅವರಿಗೆ ಒಪ್ಪಿಸಲಾಗಿತ್ತು. 

Follow Us:
Download App:
  • android
  • ios