Asianet Suvarna News Asianet Suvarna News

ಶ್ರೀನಗರದಲ್ಲಿ ಉಗ್ರರ ಕ್ರೌರ್ಯ: ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕನ ಹತ್ಯೆ!

* ಕಣಿವೆನಾಡಿನಲ್ಲಿ ಮೊಳಗಿದ ಗುಂಡಿನ ಸದ್ದು

* ಶಾಲೆಗೆ ದಾಳಿ ಇಟ್ಟ ಉಗ್ರರು

* ಉಗ್ರರ ಅಟ್ಟಹಾಸಕ್ಕೆ ಇಬ್ಬರು ಶಿಕ್ಷಕರು ಬಲಿ

2 Teachers Killed By Terrorists in Srinagar 3 Days After Serial Attacks pod
Author
Bangalore, First Published Oct 7, 2021, 4:06 PM IST

ಶ್ರೀನಗರ(ಅ.07): ಜಮ್ಮು ಮತ್ತು ಕಾಶ್ಮೀರದಲ್ಲಿ(jammu And Kashmir) ಭಯೋತ್ಪಾದಕರು(Terrorists) ಮತ್ತೊಮ್ಮೆ ದುಷ್ಕೃತ್ಯ ಆರಂಭಿಸಿದ್ದು, ಇಬ್ಬರು ಶಿಕ್ಷಕರನ್ನು ಹತ್ಯೆಗೈದಿದ್ದಾರೆ. ಶ್ರೀನಗರದ ಈದ್ಗಾ ಸಂಗಮ್ ಪ್ರದೇಶದ ಶಾಲೆಯಲ್ಲಿ ಭಯೋತ್ಪಾದಕರು ಈ ಹತ್ಯಾಕಾಂಡವನ್ನು ನಡೆಸಿದ್ದಾರೆ. ಭಯೋತ್ಪಾದಕರು ಮಹಿಳಾ ಪ್ರಾಂಶುಪಾಲೆ ಸುಪಿಂದರ್ ಕೌರ್ ಮತ್ತು ದೀಪಕ್ ಚಂದ್ ಎಂಬ ಮತ್ತೊಬ್ಬ ಶಿಕ್ಷಕನ ತಲೆಗೆ ಗುಂಡು ಹಾರಿಸಿ ಈ ಹತ್ಯೆ ನಡೆಸಿದ್ದಾರೆ. ಈ ಘಟನೆಯ ಕುರಿತು, ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಮಾತನಾಡುತ್ತಾ ಸಮಾಜದ ಒಳಿತಿಗಾಗಿ ತೊಡಗಿರುವ ಅಮಾಯಕರನ್ನು ಗುರಿಯಾಗಿಸಲಾಗಿದೆ. ಪಾಕಿಸ್ತಾನದ ಆದೇಶದಂತೆ ಗಡಿಯಾಚೆಗಿನ ಭಯೋತ್ಪಾದಕರು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ (ಜೆ & ಕೆ ಎಲ್ ಜಿ) ಮನೋಜ್ ಸಿನ್ಹಾ ದಾಳಿಯನ್ನು ಬಲವಾಗಿ ಖಂಡಿಸಿದ್ದು, ಮುಗ್ಧ ಜನರ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆಸಿದ ಅಪರಾಧಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದಿದ್ದಾರೆ.

ಉಗ್ರರಿಗೆ ಸವಾಲೆಸೆದ ತಾಯಿ

ಈ ಕುಕೃತ್ಯದ ಮಾಹಿತಿ ತಿಳಿದ ಬೆನ್ನಲ್ಲೇ ಸುಪಿಂದರ್ ಕೌರ್ ಅವರ ವೃದ್ಧ ತಾಯಿ ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ಧೈರ್ಯವಿದ್ದರೆ ತನ್ನ ಮಗಳ ಬದಲು ನನ್ನನ್ನೇ ಕೊಲ್ಲಬೇಕಿತ್ತು ಎಂದಿದ್ದಾರೆ.

ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಯತ್ನ

ಸಾಮಾನ್ಯ ನಾಗರಿಕರನ್ನು ಕೊಲ್ಲುವ ಮೂಲಕ ಭಯೋತ್ಪಾದಕರು ಕಾಶ್ಮೀರದ ಹಳೆಯ ಹಾಗೂ ಸಾಂಪ್ರದಾಯಿಕ ಕೋಮು ಸೌಹಾರ್ದತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಘಟನೆಗಳ ಬಗ್ಗೆ ಕೆಲವು ಮಹತ್ವದ ಸುಳಿವು ಸಿಕ್ಕಿದೆ ಎಂದು ಡಿಜಿಪಿ ಹೇಳಿದ್ದಾರೆ. ಶೀಘ್ರದಲ್ಲೇ ಹಂತಕರನ್ನು ಹಿಡಿಯಲಾಗುವುದು. ಸುದ್ದಿ ಸಂಸ್ಥೆ KNO ಪ್ರಕಾರ, ಸರ್ಕಾರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತನಿಖೆಯ ಸಮಯದಲ್ಲಿ, ಮುಗ್ಧ ನಾಗರಿಕರ ಹತ್ಯೆಯು ಭಯೋತ್ಪಾದಕರ ಹತಾಶೆ ಮತ್ತು ಅನಾಗರಿಕತೆಯನ್ನು ತೋರಿಸುತ್ತದೆ ಎಂದು ಡಿಜಿಪಿ ಹೇಳಿದ್ದಾರೆ. ಇದು ಕಾಶ್ಮೀರದ ಸ್ಥಳೀಯ ಮುಸ್ಲಿಮರ ಮಾನಹಾನಿ ಮಾಡುವ ಸಂಚು ಎಂದೂ ಆರೋಪಿಸಿದ್ದಾರೆ. 

ಪಾಕಿಸ್ತಾನದ ಮೇಲೆ ವಾಯುದಾಳಿಗೆ ಬೇಡಿಕೆ

ಭಯೋತ್ಪಾದಕ ಘಟನೆಗಳ ನಂತರ ಕಾಶ್ಮೀರ ಪಂಡಿತರ ಕೋಪ ಭುಗಿಲೆದ್ದಿದೆ. ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಲಾಗುತ್ತಿದೆ ಎಂದು ಶಿವಸೇನೆಯ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ಮನೀಶ್ ಸಾಹ್ನಿ ಹೇಳಿದ್ದಾರೆ. ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ವಸಾಹತು ಮತ್ತು ಸೇನೆಯ ಆಪರೇಷನ್ ಆಲ್ ಔಟ್ ಬಗ್ಗೆ ಭಯೋತ್ಪಾದಕರು ಕೋಪಗೊಂಡಿದ್ದಾರೆ. ಇದರ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಹೀಗಾಗಿ ಪಾಕಿಸ್ತಾನದ ಮೇಲೆ ವಾಯುದಾಳಿಯ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಗುರಿ ಇಟ್ಟು ಹತ್ಯೆ

ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಭಯೋತ್ಪಾದಕರು ಹೈಸ್ಕಂಡರಿ ಶಾಲೆಯನ್ನು ಗುರಿಯಾಗಿಸಿಕೊಂಡರು. ಭಯೋತ್ಪಾದಕರ ಸಂಖ್ಯೆ 2-3 ಇತ್ತೆನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಭದ್ರತಾ ಪಡೆಗಳು ಶೋಧ ಆರಂಭಿಸಿವೆ. ಭಯೋತ್ಪಾದಕರು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಇಲ್ಲಿಯವರೆಗಿನ 7 ನೇ ಘಟನೆ. ಮಂಗಳವಾರವೇ ಭಯೋತ್ಪಾದಕರು ಒಂದು ಗಂಟೆಯಲ್ಲಿ ಮೂರು ಪ್ರತ್ಯೇಕ ದಾಳಿಗಳನ್ನು ನಡೆಸಿದ್ದಾರೆ. ಇದರಲ್ಲಿ 3 ಜನರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕರು ಕಾಶ್ಮೀರ ಪಂಡಿತ್ ಮತ್ತು ಬಿಂದ್ರು ಮೆಡಿಕೇಟ್ ಎಂಬ ದೊಡ್ಡ ಫಾರ್ಮಸಿ ಕಂಪನಿಯ ಮಾಲೀಕರಾದ ಮಖನ್ ಲಾಲ್ ಬಿಂದ್ರು ಅವರನ್ನು ಕೊಂದಿದ್ದರು. ಇನ್ನೊಂದು ದಾಳಿಯಲ್ಲಿ, ಬಿಹಾರದ ಭಾಗಲ್ಪುರ ಜಿಲ್ಲೆಯ ನಿವಾಸಿ ವೀರಂಜನ್ ಪಾಸ್ವಾನ್ ಮೇಲೆ ಗುಂಡು ಹಾರಿಸಲಾಯಿತು. ಭಾಗಲ್ಪುರ ಜಿಲ್ಲೆಯ ಜಗದೀಶ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೈದ್ ಪುರ ಹಳ್ಳಿಯ ನಿವಾಸಿ 56 ವರ್ಷದ ವೀರಂಜನ್ ಕಳೆದ ಎರಡೂವರೆ ವರ್ಷಗಳಿಂದ ಶ್ರೀನಗರದಲ್ಲಿ ಗೋಲ್ಗಪ್ಪ ಸ್ಲರಿ ಮಾಡುತ್ತಿದ್ದರು.

Follow Us:
Download App:
  • android
  • ios