ಎಲ್ಲರೂ ಯಾವಾಗ್ಲೂ ಸಂತೋಷ (Happy)ವಾಗಿರಬೇಕೆಂದು ಬಯಸುತ್ತಾರೆ. ಅದೇ ಕಾರಣಕ್ಕೆ ತಮಗಿಷ್ಟವಾದ ಕೆಲಸ (Work)ವನ್ನು ಹೆಚ್ಚೆಚ್ಚು ಮಾಡ್ತಾರೆ. ಆದ್ರೆ ಇದೇ ಹೆಚ್ಚು ಹುಚ್ಚಿಗೆ ಕಾರಣವಾಗುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ.

ಮನುಷ್ಯ (Human)ನ ಮೆದುಳು (Brain) ಒಂದು ಸೆಕೆಂಡ್‌ಗೆ ಲಕ್ಷಾಂತರ ವಿಷ್ಯದ ಬಗ್ಗೆ ಆಲೋಚನೆ ಮಾಡುತ್ತದೆ. ಮನುಷ್ಯ ಪ್ರತಿ ಬಾರಿ ಹೊಸದನ್ನು ಮಾಡಲು ಪ್ರಯತ್ನಿಸುತ್ತಲೇ ಇರುತ್ತಾನೆ. ನಮ್ಮ ಮೆದುಳಿನಲ್ಲಿ ಡೋಪಮೈನ್ (Dopamine) ರಾಸಾಯನ ಸ್ರವಿಸುವುದ್ರಿಂದ ಇದು ನಿರ್ಧಾರವಾಗುತ್ತದೆ. ಡೋಪಮೈನ್ ಹೆಚ್ಚು ಸ್ರವಿಸಿದಾಗ ಆನಂದ ಮತ್ತು ಸಂತೋಷದ ಭಾವನೆ ಹೆಚ್ಚಾಗುತ್ತದೆ. ಮೆದುಳಿನಲ್ಲಿ ದೊಡ್ಡ ಪ್ರಮಾಣದಲ್ಲಿ ಡೋಪಮೈನ್ ರಾಸಾಯನಿಕ ಬಿಡುಗಡೆಯಾಗುತ್ತದೆ. ಆಗ ಮನಸ್ಸಿನಲ್ಲಿ ಸ್ಫೂರ್ತಿ, ನೆನಪುಗಳು, ಸಂತೋಷ ಮತ್ತು ವಿಶ್ರಾಂತಿ ಮುಂತಾದ ಅನೇಕ ಸಕಾರಾತ್ಮಕ ಭಾವನೆಗಳು ಹುಟ್ಟುತ್ತವೆ. ಡೋಪಮೈನ್ ಪ್ರಮಾಣ ಸ್ರವಿಸುವಿಕೆ ಕಡಿಮೆಯಾದ್ರೆ ನಿರಾಶೆ, ಅಸಂತೋಷದ ಅನುಭವವಾಗುತ್ತದೆ. ಆದರೆ ಈ ರಾಸಾಯನಿಕವು ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾದಾಗ ಜನರು ಹತಾಶೆಯಂತಹ ನಡವಳಿಕೆ ಅನುಭವಿಸುತ್ತಾರೆ.

ದೈನಂದಿನ ಜೀವನದಲ್ಲಿ ನಮ್ಮ ಅಭ್ಯಾಸಗಳು ಡೋಪಮೈನ್ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ. ಕೆಫೀನ್, ಸಾಮಾಜಿಕ ಜಾಲತಾಣ, ವಿಡಿಯೋ ಗೇಮ್‌ಗಳು ಇದನ್ನು ತೀವ್ರ ಮಟ್ಟದಲ್ಲಿ ಬದಲಾವಣೆ ಮಾಡುತ್ತದೆ. ಕೆಲವೊಮ್ಮೆ ಅತಿಯಾದ ಖುಷಿ ಕೂಡ ನಮ್ಮ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರುತ್ತದೆ. ಡೋಪಮೈನ್ ಸಮತೋಲನದಲ್ಲಿರುವುದು ಬಹಳ ಮುಖ್ಯ. ಡೋಪಮೈನ್ ಮಟ್ಟ ಸರಿಯಾಗಿದ್ದರೆ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇಂದು ಡೋಪಮೈನ್ ಮಟ್ಟವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವು ಹೇಳ್ತೇವೆ.

Mental Health: ಮಾನಸಿಕವಾಗಿ ತೊಂದರೆಯಲ್ಲಿರೋರಿಗೆ ನಿಮ್ಮ ಸಹಾಯ ಹೀಗಿರಲಿ

ಚಟದಿಂದ ದೂರವಿರಿ : ಚಟ ಚಟ್ಟ ಏರಿಸಿತ್ತು ಎಂಬ ಮಾತಿದೆ. ತಜ್ಞರ ಪ್ರಕಾರ ಯಾವುದೇ ಹವ್ಯಾಸ ಚಟವಾಗ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂದರೆ ಎಚ್ಚೆತ್ತುಕೊಳ್ಳಿ. ಅನೇಕ ಬಾರಿ ಇದೇ ಚಟ ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಆದ್ರೆ ಅದ್ರಿಂದ ಅನಾರೋಗ್ಯ ಶುರುವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಈ ಸಾಮಾಜಿಕ ಜಾಲತಾಣಗಳು ನಿಮ್ಮ ಸಂತೋಷವನ್ನು ಹೆಚ್ಚಿಸಿದ್ರೂ ಮಾನಸಿಕ ಸಮಸ್ಯೆ ಶುರು ಮಾಡ್ತಿವೆ.

ವ್ಯಕ್ತಿಯೊಬ್ಬನಿಗೆ ಆನ್‌ಲೈನ್ ಶಾಪಿಂಗ್ ಎಷ್ಟು ಖುಷಿ ನೀಡ್ತಿತ್ತಂದ್ರೆ ಆತ ಇಡೀ ದಿನವನ್ನು ಅದರಲ್ಲಿಯೇ ಕಳೆಯುತ್ತಿದ್ದ. ಇದ್ರಿಂದ ಸಾಲದ ಹೊರೆ ಹೆಚ್ಚಾಗಿತ್ತು. ಆತನನ್ನು ಈ ಚಟದಿಂದ ಹೊರಗೆ ತರಲು ಔಷಧಿ ನೀಡುವ ಅನಿವಾರ್ಯತೆ ಎದುರಾಗಿತ್ತು. ಆತ ಅದ್ರಿಂದ ಚೇತರಿಸಿಕೊಳ್ಳಲು ಒಂದು ತಿಂಗಳು ಬೇಕಾಯ್ತು. ಪ್ರತಿಯೊಬ್ಬರೂ ಚೇತರಿಸಿಕೊಳ್ಳಲು 30 ದಿನಗಳು ಬೇಕಾಗಿಲ್ಲ. ಕೆಲವರು ಒಂದು ವಾರದಲ್ಲಿಯೇ ಈ ಅಭ್ಯಾಸದಿಂದ ಹೊರಗೆ ಬರ್ತಾರೆ. ಆದ್ರೆ ನಮಗೆ ಈ ಸಮಸ್ಯೆಯಾಗ್ತಿದೆ ಎಂಬುದನ್ನು ಅರಿಯುವುದು ಮುಖ್ಯವಾಗುತ್ತದೆ.

ಡೋಪಮೈನ್ ಮಟ್ಟ ಸಮತೋಲನಗೊಳಿಸುತ್ತೆ ವ್ಯಾಯಾಮ : ಕೆಲವೊಮ್ಮೆ ವ್ಯಾಯಾಮ (Exercise)ದಿಂದ ಉಂಟಾಗುವ ನೋವು ಸಹ ಧನಾತ್ಮಕ ಬದಲಾವಣೆಯನ್ನು ತರುತ್ತದೆ. ವಯಸ್ಸು ಹೆಚ್ಚಾದಂತೆ ಡೋಪಮೈನ್ ಸ್ರವಿಸುವಿಕೆ ಕಡಿಮೆಯಾಗುತ್ತದೆ. ಪ್ರತಿ ದಶಕದಲ್ಲಿ 10 ಪ್ರತಿಶತದಷ್ಟು ಡೋಪಮೈನ್ ಕಡಿಮೆಯಾಗುತ್ತದೆ. ವ್ಯಾಯಾಮದಿಂದ ಇದನ್ನು ಸಮತೋಲನದಲ್ಲಿಡಬಹುದು.

ಕೊರೋನಾ ಕಡಿಮೆಯಾದ್ರೂ ಆರೋಗ್ಯ ಸಮಸ್ಯೆ ಹಾಗೇ ಇದ್ಯಾ ? ಅದಕ್ಕೇನು ಕಾರಣ ತಿಳ್ಕೊಳ್ಳಿ

ಸಂಗೀತದಲ್ಲಿದೆ ಮ್ಯಾಜಿಕ್: ಸಂಗೀತ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ. ಇದ್ರಿಂದ ಡೋಪಮೈನ್ ಮಟ್ಟವನ್ನು ಸಮತೋಲನದಲ್ಲಿಡಬಹುದು. ಸಾಮಾನ್ಯವಾಗಿ ಜನರು ಚಟುವಟಿಕೆಯಿಂದಿರಲು ಅಥವಾ ಕೆಲಸ ಮಾಡುವ ಉತ್ಸಾಹ ಹೆಚ್ಚಿಸಿಕೊಳ್ಳಲು ಕೆಫೀನ್ ಇರುವ ಕಾಫಿ, ಟೀ ಕುಡಿಯುತ್ತಾರೆ. ಇನ್ನು ಕೆಲವರು ಎನರ್ಜಿ ಡ್ರಿಂಕ್ ಸೇವನೆ ಮಾಡ್ತಾರೆ. ಆದ್ರೆ ಇವೆಲ್ಲ ಮೆದುಳಿನ ಸಾಮಾರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮೆದುಳಿನಲ್ಲಿ ಖಿನ್ನತೆಯನ್ನು ಹೆಚ್ಚಿಸುತ್ತದೆ. ನಿರಂತರವಾಗಿ ಒಂದೇ ಕೆಲಸವನ್ನು ಮಾಡ್ತಿದ್ದರೆ ಮೆದುಳು ಸಮತೋಲನ ಕಳೆದುಕೊಳ್ಳುತ್ತದೆ. ಹಾಗಾಗಿ ನಿರಂತರವಾಗಿ ಒಂದೇ ಕೆಲಸ ಮಾಡಬಾರದು. ಮೆದುಳಿಗೆ ವಿಶ್ರಾಂತಿ ನೀಡುವ ಅವಶ್ಯಕತೆಯಿದೆ. ಮೆದುಳಿಗೆ ವಿಶ್ರಾಂತಿ ನೀಡಿದಾಗ ಮೆದುಳು (Brain) ಡೋಪಮೈನ್ ಸಮತೋಲನ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.

ತಣ್ಣನೆಯ ಶವರ್ ನಿಂದ ಸಿಗುತ್ತೆ ಪರಿಹಾರ : ಅತಿಯಾದ ಅಥವಾ ಕಡಿಮೆ ಮಟ್ಟದ ಡೋಪಮೈನ್ ದೀರ್ಘಾವಧಿಯಲ್ಲಿ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತೆ. ಕೆಲವು ಕ್ಷಣ ಚೆನ್ನಾಗಿರುತ್ತೀರಿ ಮತ್ತೆ ಕೆಲ ಕ್ಷಣ ನಕಾರಾತ್ಮಕ ಭಾವನೆ ಬರುತ್ತದೆ. ತಜ್ಞರ ಪ್ರಕಾರ ಇಂಥ ಸಮಯದಲ್ಲಿ ತಣ್ಣೀರಿನ ಸ್ನಾನ ಪ್ರಯೋಜನಕಾರಿ. ಇದು ಡೋಪಮೈನ್ ಸೇರಿದಂತೆ ಮೆದುಳಿನಲ್ಲಿ ಉತ್ತಮ ರಾಸಾಯನಿಕಗಳನ್ನು ಹೆಚ್ಚಿಸುತ್ತದೆ.