ಪ್ಲೀಸ್ ಅಂಕಲ್ ಬಿಡಿ: ಗೆಳತಿಯ 5 ವರ್ಷದ ಮಗಳನ್ನು ಅತ್ಯಾಚಾರಗೈದ ಪಾಪಿ!
ಮಹಿಳೆಯೊಬ್ಬಳು ತನ್ನ 5 ವರ್ಷದ ಮಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ಆರಂಭವಾಯಿತು. ತನಿಖೆ ನಡುವೆ ಬಾಲಕಿಯ ಶವ ನದಿಯಲ್ಲಿ ಪತ್ತೆಯಾಗಿದೆ. ಇದನ್ನು ಕಂಡ ತಾಯಿ ಸಂಪೂರ್ಣವಾಗಿ ಕುಸಿದು ಹೋಗಿದ್ದಾರೆ. ಆದರೆ ಬಾಲಕಿಯನ್ನು ಕೊಲೆ ಮಾಡಿ ನದಿಗೆಸೆಯಲಾಗಿದ್ದು, ಅದಕ್ಕೂ ಮುನ್ನ ಆಕೆಯ ಅತ್ಯಾಚಾರ ನಡೆದಿದೆ. ಇದನ್ನೆಲ್ಲ ನೋಡಿದ ತಾಯಿ ಹೀಗೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಆದರೆ ಆ ತಾಯಿಯ ಪ್ರಶ್ನೆಗೆ ಆಗ ಪೊಲೀಸರ ಬಳಿಯೂ ಉತ್ತರವಿರಲಿಲ್ಲ. ಆದರೆ ತನಿಖೆ ನಡೆದು ಈ ಕುಕೃತ್ಯ ಎಸಗಿದವರು ಯಾರು ಎಂದು ತಿಳಿದಾಗ ಆಕೆ ಆಘಾತಕ್ಕೊಳಗಾಗಿದ್ದಾರೆ. ಕೊಲೆಗಾರ ತನ್ನ ಅತ್ಯಾಪ್ತ ಎಂದು ಆಕೆ ಊಹಿಸಿಯೂ ಇರಲಿಲ್ಲ. ತನಗೆ ಹತ್ತಿರವಾಗಿದ್ದು, ಪ್ರತಿದಿನ ಮಾತನಾಡಿ ತನ್ನ ಸುಖ, ದುಃಖ ಹಂಚಿಕೊಳ್ಳುತ್ತಿದ್ದ ಸ್ನೇಹಿತನೇ ಈ ಹೇಯ ಕೃತ್ಯ ಎಸಗಿದ್ದ.
ಸ್ನೇಹಿತೆಯ 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ 35 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 4 ರಂದು, ಅಧಿಕಾರಿಗಳು ಬ್ರೆಜಿಲ್ನ ಲಾಜೆಡೋದಲ್ಲಿ ಶಂಕಿತನನ್ನು ಅರೆಸ್ಟ್ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಬಾಲಕಿಯ ತಾಯಿ ಶಂಕಿತನನ್ನು ಮೂರು ತಿಂಗಳಿನಿಂದ ಬಲ್ಲವರಾಗಿದ್ದರು. ಅಲ್ಲದೇ ಅಪರಾಧ ನಡೆದ ದಿನ ತನ್ನ ಚಿಕ್ಕ ಮಗಳನ್ನು ಹತ್ತಿರದ ಮಾರುಕಟ್ಟೆಗೆ ಕರೆದೊಯ್ಯಲು ಅನುಮತಿ ನೀಡಿದ್ದಳು. ಮಹಿಳೆ ಆತನಿಗೂ ತನಗೂ ಸಂಬಂಧವಿಲ್ಲ ಎಂದಿದ್ದರೂ ಆರೋಪಿ ತನ್ನ ಮನೆಗೆ ಐದು ಬಾರಿ ಭೇಟಿ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಆದರೆ ಆರೋಪಿಯೊಂದಿಗೆ ವಾಕ್ ಮಾಡಲು ತನ್ನ ಮಗಳಿಗೆ ಅನುಮತಿ ನೀಡಿದ್ದು ಇದೇ ಮೊದಲು ಎಂದು ಮಹಿಳೆ ಹೇಳಿದ್ದಾಳೆ. ಆದರೆ ಅವನು ಹಿಂತಿರುಗಿ ಬಂದಾಗ, ಮಗಳು ಅವನೊಂದಿಗೆ ಇರಲಿಲ್ಲ. ಇದಾದ ಬಳಿಕ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ, ಹೀಗಿರುವಾಗ ಕೆಲ ಮಂದಿ ತಾವು ಆ ಬಾಲಕಿಯನ್ನು ಆರೋಪಿ ಜೊತೆ ನದಿ ದಡಕ್ಕೆ ಹೋಗುತ್ತಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದಾಗ ಆತನ ಬಟ್ಟೆ ಒದ್ದೆಯಾಗಿ ಮತ್ತು ಕೊಳಕಾಗಿತ್ತು. ಅವನು ಯಾರೊಂದಿಗೋ ಜಗಳವಾಡಿದಂತೆ ಕಾಣುತ್ತದೆ. ಆರೋಪಿಯನ್ನು ಬಂಧಿಸಿ ಲಾಜೆಡೋದಲ್ಲಿರುವ ಜೈಲಿಗೆ ಕರೆದೊಯ್ಯಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆರೋಪಿಯು ಹಳೆಯ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ. ತನ್ನ ಜೊತೆಗಾರನನ್ನು ಬೆದರಿಸಿದ ಆರೋಪದಡಿ ಜನವರಿಯಲ್ಲೇ ಜೈಲು ಪಾಲಾಗಿದ್ದ.
ಆರೋಪಿ ಬಾಲಕಿಯನ್ನು ಕ್ರೂರವಾಗಿ ನಡೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ನಡೆಸಿ ಬಾಲಕಿಯನ್ನು ಕೊಲೆಗೈದ ಆರೋಪು ಮೃತ ದೇಹವನ್ನು ನದಿಗೆ ಎಸೆದಿದ್ದಾನೆ. ಹುಡುಗಿಯ ತಾಯಿಯ ಮೇಲೂ ನಿರ್ಲಕ್ಷ್ಯದ ಆರೋಪವಿದೆ. ಮಾಧ್ಯಮ ವರದಿಗಳ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಹುಡುಗಿ ಮನೆಗೆ ಹೋಗಬೇಕೆಂದು ಹೇಳುತ್ತಿದ್ದಳು, ಆದರೆ ಆರೋಪಿ ಕೇಳಲಿಲ್ಲ ಎಂದೂ ಉಲ್ಲೇಖಿಸಲಾಗಿದೆ.
ಬಾಲಕಿಯ ತಾಯಿ ಮೇಲೆ ಆಕೆಗೆ ಮೊದಲೇ ಆರೋಪಿಯ ಪರಿಚಯವಿತ್ತುಎಂಬ ಆರೋಪ ಕೇಳಿ ಬರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರವೂ ಆಕೆ ತನ್ನ ಮಗಳನ್ನು ಅಪರಾಧಿ ಜೊತೆ ಕಳುಹಿಸಿದ್ದೇಕೆ? ಎಂಬ ಪ್ರಶ್ನೆ ಮೂಡುತ್ತದೆ. ಆರೋಪ ಸಾಬೀತಾದರೆ, 2 ವರ್ಷಗಳವರೆಗೆ ಶಿಕ್ಷೆಗೆ ಗುರಿಯಾಗಬಹುದು. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.