ಗರ್ಭಾವಸ್ಥೆಯಲ್ಲಿ ಬ್ರಾ ಧರಿಸೋ ವಿಷ್ಯದಲ್ಲಿ ಈ ತಪ್ಪು ಮಾಡ್ಲೇಬೇಡಿ…
ಗರ್ಭಾವಸ್ಥೆಯಲ್ಲಿ ಬ್ರಾ ಧರಿಸುವುದರಿಂದ ಮಹಿಳೆಯರ ದೇಹದಲ್ಲಿ ಯಾವ ಪರಿಣಾಮ ಬೀರುತ್ತದೆ, ಅನ್ನೋದರ ಬಗ್ಗೆ ತಜ್ಞರಿಂದ ತಿಳಿದುಕೊಳ್ಳೋಣ ಸರಿಯಾದ ಮಾಹಿತಿ.
ಗರ್ಭಧಾರಣೆ ಅಥವಾ ಪ್ರೆಗ್ನೆನ್ಸಿ (pregnancy) ಅನ್ನೋದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು.ಇದು ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳಿಗೆ ಕಾರಣವಾಗುತ್ತದೆ. ಈ ಸಮಯದಲ್ಲಿ,ತಿನ್ನುವುದು, ಕುಡಿಯುವುದು ಮತ್ತು ಮಲಗುವುದರ ಹೊರತಾಗಿ, ಉಡುಗೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳಲ್ಲಿ ಒಂದು ಬ್ರಾ ಧರಿಸುವುದಕ್ಕೆ (wearing bra) ಸಂಬಂಧಿಸಿದ್ದೂ ಇದೆ.
ಸಾಮಾನ್ಯವಾಗಿ, ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬ್ರಾ ಧರಿಸಲು ತುಂಬಾ ತೊಂದರೆ ಅನುಭವಿಸುತ್ತಾರೆ ಅನ್ನೋದು ನಿಜ. ಹಾಗಾಗಿ ಈ ಲೇಖನದ ಮೂಲಕ ನಾವು ಗರ್ಭಾವಸ್ಥೆಯಲ್ಲಿ ಬ್ರಾ ಧರಿಸುವ ಬಗ್ಗೆ ಸರಿಯಾದ ಮಾಹಿತಿ ತಿಳಿಸುತ್ತೇವೆ. ಗರ್ಭಾವಸ್ಥೆಯಲ್ಲಿ ಬ್ರಾ ಧರಿಸದಿರುವುದು ಮಹಿಳೆಯರ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದರ ಬಗ್ಗೆ ತಜ್ಞರು ಏನ್ ಹೇಳ್ತಾರೆ ಅನ್ನೋದನ್ನು ಸವಿವರವಾಗಿ ಇಲ್ಲಿ ನೀಡಲಾಗಿದೆ.
ಗರ್ಭಾವಸ್ಥೆಯಲ್ಲಿ ಬ್ರಾ ಧರಿಸದಿದ್ದರೆ ಏನಾಗುತ್ತದೆ?
ಸ್ತನಗಳಿಗೆ ಬೆಂಬಲ ನೀಡುತ್ತೆ
ಗರ್ಭಾವಸ್ಥೆಯಲ್ಲಿ, ಮಹಿಳೆಯರ ಸ್ತನಗಳ ಗಾತ್ರ ಮತ್ತು ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ. ಬ್ರಾ ಸ್ತನಗಳಿಗೆ ಬೆಂಬಲ ನೀಡುವ ಕೆಲಸ ಮಾಡುತ್ತೆ. ಒಂದು ವೇಳೆ ನೀವು ಬ್ರಾ ಧರಿಸದಿದ್ದರೆ, ಅದು ನಿಮ್ಮ ಸ್ತನಗಳನ್ನು ಜಗ್ಗಿಸುತ್ತದೆ.
ಸ್ತನಗಳ ಕೋಮಲತೆ
ಗರ್ಭಾವಸ್ಥೆಯಲ್ಲಿ ಮಹಿಳೆಯರ ಸ್ತನಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಹೀಗಿರುವಾಗ, ಬ್ರಾ ಧರಿಸದಿರುವುದು ಸ್ತನಗಳ ಆರಾಮವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಸ್ತನಗಳ ಸೂಕ್ಷ್ಮತೆಯೂ ಹೆಚ್ಚಾಗಬಹುದು. ಇದರಿಂದ ಸ್ತನಗಳಲ್ಲಿ ಇನ್ ಫೆಕ್ಷನ್ (infection) ಕೂಡ ಕಾಡಬಹುದು.
ಬೆಂಬಲದ ಕೊರತೆ
ಬ್ರಾ ಇಲ್ಲದೆ, ಸ್ತನಗಳಿಗೆ ಸರಿಯಾದ ಬೆಂಬಲ (support) ಸಿಗುವುದಿಲ್ಲ, ಇದು ಅವುಗಳನ್ನು ಇನ್ನಷ್ಟು ಬೆಳೆಯುವಂತೆ ಮಾಡುತ್ತದೆ. ಅದರ ಆಕಾರಗಳು ವಿಚಿತ್ರವಾಗಿ ಬೆಳೆಯಬಹುದು. ಇದರಿಂದ ಸ್ತನಗಳಿಗೆ ಸರಿಯಾದ ಆಕಾರವು ಇರಲಾರದು, ಜೊತೆಗೆ ನೀವು ಭಾರವನ್ನು ಸಹ ಅನುಭವಿಸಬೇಕಾಗಬಹುದು.
ನೈರ್ಮಲ್ಯ ಸಮಸ್ಯೆಗಳು
ಬ್ರಾ ಧರಿಸದಿರುವುದು ಸ್ತನಗಳ ಕೆಳಗೆ ಒದ್ದೆಯಾಗುವುದು, ಬೆವರುವುದು ಅಥವಾ ತುರಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು, ಇದು ನಿಮ್ಮ ಸ್ತನಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಕೆಳಗಿನ ಚರ್ಮದಲ್ಲಿ ಸಮಸ್ಯೆಗಳು (skin problem) ಉಂಟಾಗಬಹುದು.
ಸ್ತನ ಗಾತ್ರದ ಬೆಳವಣಿಗೆಗೆ ಕುತ್ತು
ಗರ್ಭಾವಸ್ಥೆಯಲ್ಲಿ ಸರಿಯಾದ ಬೆಂಬಲವಿಲ್ಲದೆ ಹೋದರೆ, ಸ್ತನ ಹಿಗ್ಗುವಿಕೆಯ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇದು ನಿಮ್ಮ ಬೆನ್ನು, ಕುತ್ತಿಗೆ, ಬೆನ್ನು ಅಥವಾ ಭುಜಗಳಲ್ಲಿ ನೋವಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಮಹಿಳೆಯರು ಬ್ರಾ ಧರಿಸುವುದು ಬಹಳ ಮುಖ್ಯ, ಇದರಿಂದ ಸ್ತನಗಳಿಗೆ ಸರಿಯಾದ ಬೆಂಬಲ ಮತ್ತು ಆರಾಮ ಸಿಗುತ್ತದೆ.