ಲೇಡೀಸ್… ನೀವು ಒಂದು ಬ್ರಾ ವಾಶ್ ಮಾಡದೇ ಎಷ್ಟು ದಿನ ಹಾಕ್ತೀರಿ?
ನೀವು ಕೆಲವು ಗಂಟೆ ಮಾತ್ರ ಬ್ರಾ ಧರಿಸಿರುತ್ತೀರಿ, ಹೆಚ್ಚಾಗಿ ಬೆವರದಿರೋದ್ರಿಂದ, ಯಾಕೆ ಇದನ್ನ ವಾಶ್ ಮಾಡ್ಬೇಕು, ನಾಳೆ ಮತ್ತೊಮ್ಮೆ ಹಾಕಿದ್ರಾಯ್ತು ಎಂದು ಅಂದುಕೊಳ್ತೀರಿ ಅಲ್ವಾ? ಕೆಲವರು ಒಂದ್ಸಲ ಹಾಕಿದ ಬ್ರಾವನ್ನು ಎರಡು ಮೂರು ಸಲ, ಕೆಲವರು ವಾರದವರೆಗೂ ಬಳಸ್ತಾರಂತೆ. ಯಾವತ್ತಾದ್ರೂ ಈ ಬ್ರಾವನ್ನು ಎಷ್ಟು ಸಮಯ ವಾಶ್ ಮಾಡದೇ ಬಳಸಬಹುದು ಅನ್ನೋದರ ಬಗ್ಗೆ ಯೋಚನೆ ಮಾಡಿದ್ದೀರಾ?
ದಿನವಿಡಿ ಕೆಲಸ ಮಾಡೋದ್ರಿಂದ ಅಥವಾ ಸೆಕೆಯಿಂದಾಗಿ ಬೆವರುವುದರಿಂದ ನಾವು ಪ್ರತಿದಿನ ಬಟ್ಟೆಗಳನ್ನು ಬದಲಾಯಿಸುತ್ತೇವೆ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ, ಬೆವರಿನ ಅಭಿಷೇಕವೇ ಆಗೋದರಿಂದ ಬಟ್ಟೆಗಳನ್ನು ಬದಲಾಯಿಸಬೇಕಾಗುತ್ತದೆ. ಬಟ್ಟೆ ಬದಲಾಯಿಸುವಂತೆ, ಒಳ ಉಡುಪುಗಳನ್ನು (Inner Wears) ಬದಲಾಯಿಸುವುದು ಸಹ ತುಂಬಾನೆ ಮುಖ್ಯ. ಉದಾಹರಣೆಗೆ, ಬ್ರಾದ ಕೆಲಸವು ಸ್ತನಗಳಿಗೆ ಸಪೋರ್ಟ್ ನೀಡೋದು ಮಾತ್ರ, ಆದರೆ ಹೆಚ್ಚಿನ ತಾಪಮಾನ ಮತ್ತು ಬೆವರಿನಿಂದಾಗಿ ಟಿ-ಶರ್ಟ್ ಗಳು ಮತ್ತು ಪ್ಯಾಂಟ್, ಡ್ರೆಸ್ ವಾಶ್ ಮಾಡುವಂತೆ, ಬ್ರಾವನ್ನು ಕಾಲಕಾಲಕ್ಕೆ ತೊಳೆಯುವುದು ಮುಖ್ಯ. ಆದಾಗ್ಯೂ, ನೀವು ಎಷ್ಟು ದಿನಗಳವರೆಗೆ ಬ್ರಾ ಧರಿಸಬಹುದು (wearing bra) ಮತ್ತು ಎಷ್ಟು ದಿನಗಳ ನಂತರ ಅದನ್ನು ತೊಳೆಯುವುದು ಅಗತ್ಯವಾಗುತ್ತದೆ ಎಂದು ತಿಳಿಯೋಣ.
ಬ್ರಾ ತೊಳೆಯುವುದು ಏಕೆ ಮುಖ್ಯ?
ಬ್ರಾ ಬಟ್ಟೆಗಳಿಗಿಂತ ಹೆಚ್ಚಾಗಿ ನಿಮ್ಮ ಚರ್ಮದೊಂದಿಗೆ ನಿಕಟ ಸಂಬಂಧ ಹೊಂದಿದೆ. ಬೆವರು, ಕೊಳೆ ಮತ್ತು ಬ್ಯಾಕ್ಟೀರಿಯಾಗಳು ಅದರ ಬಟ್ಟೆಗಳಲ್ಲಿ ಸಂಗ್ರಹವಾಗುತ್ತವೆ. ನೀವು ಪ್ರತಿದಿನ ಸ್ವಚ್ಛವಾದ ಬ್ರಾ ಧರಿಸಿದರೆ, ಅದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುವುದಲ್ಲದೆ (healthy skin), ಅದು ಆರಾಮವನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುತ್ತದೆ, ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ತಜ್ಞರ ಪ್ರಕಾರ, ಬ್ರಾ ಯಾವಾಗ ವಾಶ್ ಮಾಡಬೇಕು?
ಬ್ರಾಗಳನ್ನು ತೊಳೆಯುವ ವಿಷಯಕ್ಕೆ ಬಂದಾಗ, ಉತ್ತಮ ನೈರ್ಮಲ್ಯದ ಬಗ್ಗೆ ಯಾವುದೇ ಸರಿಯಾದ ಅಧ್ಯಯನಗಳಿಲ್ಲ. ತಜ್ಞರ ಪ್ರಕಾರ, ವಾರವಿಡೀ ಒಂದೇ ಬ್ರಾ ಧರಿಸುವುದು ಸರಿಯಾದ ಅಭ್ಯಾಸವಲ್ಲ. ಬ್ರಾವನ್ನು ಎರಡರಿಂದ ಮೂರು ಬಾರಿ ಧರಿಸಿದ ನಂತರ, ಅದನ್ನು ತೊಳೆಯಬೇಕು, ಇದರಿಂದ ನೈರ್ಮಲ್ಯ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಂದೇ ಬ್ರಾವನ್ನು ಸತತ ಹಲವಾರು ದಿನಗಳವರೆಗೆ (wearing bra for many days) ಧರಿಸುವುದರಿಂದ ಬ್ಯಾಕ್ಟೀರಿಯಾ, ಸತ್ತ ಚರ್ಮದ ಕೋಶಗಳು, ಬೆವರು ಕೊಳೆ ಇತ್ಯಾದಿಗಳು ಸಂಗ್ರಹವಾಗುತ್ತವೆ, ಇದು ನಿಮ್ಮನ್ನು ಅನಾರೋಗ್ಯಕ್ಕೆ ದೂಡುತ್ತದೆ.
ನೀವು ಉಳಿದ ಬಟ್ಟೆಗಳನ್ನು ಬದಲಾಯಿಸುವಂತೆಯೇ ವ್ಯಾಯಾಮದ ನಂತರ ಬ್ರಾ ಬದಲಾಯಿಸುವುದು ಸಹ ತುಂಬಾ ಮುಖ್ಯ. ವ್ಯಾಯಾಮದಿಂದಾಗಿ ಹೆಚ್ಚು ಬೆವರುತ್ತದೆ, ಬೆವರು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ, ಇದು ಅಲರ್ಜಿ ಅಥವಾ ಮೊಡವೆಗೆ ಕಾರಣವಾಗಬಹುದು. ಅಷ್ಟೇ ಅಲ್ಲದೇ, ಪ್ರತಿದಿನ ಲೋಷನ್ ಮತ್ತು ಸುಗಂಧ ದ್ರವ್ಯವನ್ನು ಹಚ್ಚೋದ್ರಿಂದಲೂ ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ. ಹಾಗಾಗಿ ಬ್ರಾ ಪ್ರತಿ ದಿನ ವಾಶ್ ಮಾಡಬೇಕು.
ಬ್ರಾ ವಾಶ್ ಮಾಡಲು ಸರಿಯಾದ ಮಾರ್ಗ ಯಾವುದು?
ಮೊದಲನೆಯದಾಗಿ, ಬ್ರಾ ವಾಶ್ (washing bra) ಮಾಡಲು ಸರಿಯಾದ ಸೂಚನೆ ಅನುಸರಿಸಿ. ಬ್ರಾವನ್ನು ಲಘು ಡಿಟರ್ಜೆಂಟ್ (mild detergent) ಮತ್ತು ತಣ್ಣೀರಿನಿಂದ ಕೈಗಳಿಂದ ತೊಳೆಯುವುದು ಉತ್ತಮ ಎಂದು ತಜ್ಞರು ಹೇಳ್ತಾರೆ. ಪ್ಯಾಡೆಡ್ ಬ್ರಾವನ್ನು ವಾಶ್ ಮಾಡುವಾಗ ಹೆಚ್ಚು ಗಮನ ಹರಿಸಬೇಕು, ಅದರಲ್ಲಿ ಡಿಟರ್ಜೆಂಟ್ ಉಳಿಯದಂತೆ ಚೆನ್ನಾಗಿ ವಾಶ್ ಮಾಡಬೇಕು. ನಂತರ ಸರಿಯಾದ ಬಿಸಿಲಿನಲ್ಲಿ ಅದು ಸಂಪೂರ್ಣವಾಗಿ ಒಣಗುವವರೆಗೆ ಡ್ರೈ ಮಾಡಬೇಕು.
ಹಲವಾರು ದಿನಗಳವರೆಗೆ ಬ್ರಾ ತೊಳೆಯದಿದ್ದರೆ ಏನಾಗುತ್ತದೆ?
ಬ್ರಾವನ್ನು ಒಂದು ವಾರದವರೆಗೆ ಧರಿಸಿದ ನಂತರವೇ ತೊಳೆಯುತ್ತಿದ್ದರೆ, ಅದು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೆವರು, ಸತ್ತ ಚರ್ಮದ ಕೋಶಗಳು ಮತ್ತು ಕೊಳಕು ಬ್ರಾದಲ್ಲಿ ಸಂಗ್ರಹವಾಗುತ್ತದೆ, ಇದು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನೀವು ಫೋಲಿಕ್ಯುಲಿಟಿಸ್ ಅಥವಾ ಕ್ಯಾಂಡಿಡಾ ಇಂಟರ್ಟ್ರಿಗೊದಂತಹ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಸೋಂಕುಗಳಿಗೆ ಬಲಿಯಾಗಬಹುದು.
ಫೋಲಿಕ್ಯುಲಿಟಿಸ್ ಒಂದು ರೀತಿಯ ಚರ್ಮದ ಸೋಂಕಾಗಿದ್ದು, (skin infection) ಇದು ಕೂದಲಿನ ಕಿರುಚೀಲಗಳಲ್ಲಿ ಬೆಳೆಯುತ್ತದೆ ಮತ್ತು ಮೊಡವೆಗಳನ್ನು ಹೋಲುತ್ತದೆ. ಇದರಿಂದ ತುಂಬಾ ನೋವಾಗುತ್ತೆ. ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಬಿಸಿ ಮತ್ತು ತೇವವಾದ ಚರ್ಮದ ಕಿರುಚೀಲಗಳು ಹಾನಿಗೊಳಗಾಗುತ್ತವೆ, ಇದು ಸೋಂಕಿಗೆ ಕಾರಣವಾಗುತ್ತದೆ.
ಕ್ಯಾಂಡಿಡಾ ಇಂಟರ್ಟ್ರಿಗೊ ಕೂಡ ಒಂದು ರೀತಿಯ ಸೋಂಕು, ಇದು ಚರ್ಮದ ಮಡಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ, ಇದು ಯೀಸ್ಟ್ನಿಂದ ಉಂಟಾಗುತ್ತದೆ. ಈ ಸೋಂಕಿನ ಯಾವುದೇ ಚಿಹ್ನೆಗಳನ್ನು ನೀವು ನೋಡಿದರೆ, ನಿಮ್ಮ ಎಲ್ಲಾ ಬ್ರಾಗಳನ್ನು ಸೋಂಕುನಿವಾರಕದಿಂದ ತೊಳೆಯಿರಿ ಮತ್ತು ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸಿ. ಅಲ್ಲದೆ, ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.