ತುಳಸಿ, ಬಿಲ್ವ, ನೆಲ್ಲಿ.. ಪ್ರತಿದಿನ ಪೂಜೆ ಮಾಡಿ ಭಾಗ್ಯ ಬದಲಾಯಿಸಿ
ಹಿಂದೂ ಸಂಪ್ರದಾಯದಲ್ಲಿ ಹಲವು ಗಿಡಗಳನ್ನು ದೈವೀಕ ಭಾವನೆಯಿಂದ ನೋಡಲಾಗುತ್ತದೆ. ಅದರಲ್ಲೂ ವಿಭಿನ್ನವಾದ ಗಿಡಗಳು ಮನುಷ್ಯದ ವಿವಿಧ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಎಂದು ನಂಬಲಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರಕೃತಿಯನ್ನು ದೇವತೆಯ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಪ್ರಕೃತಿಯಿಂದಾಗಿಯೇ ನಮಗೆ ಈ ಭೂಮಿಯ ಮೇಲೆ ಬದುಕುವ ಅವಕಾಶ ದೊರಕಿರುವುದರಿಂದ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.
ಇಲ್ಲಿ ಕೆಲವೊಂದು ಗಿಡಗಳ ಬಗ್ಗೆ ಮಾಹಿತಿ ನೀಡಲಾಗಿದೆ, ಅವುಗಳಿಗೆ ಮನೆಯಲ್ಲಿ ಪೂಜೆ ಮಾಡಿದರೆ ಲಾಭ ಹಲವು. ಇದರಿಂದ ಮನೆಯಲ್ಲಿ ಭಾಗ್ಯವೇ ಬದಲಾಗುತ್ತದೆ. ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ ಎಂದು ನಂಬಲಾಗುತ್ತದೆ. ಯಾವೆಲ್ಲಾ ಮರಗಳನ್ನು ಪೂಜೆ ಮಾಡಿದರೆ ಉತ್ತಮ ನೋಡೋಣ....
ನೆಲ್ಲಿಕಾಯಿ ಮರ : ನೆಲ್ಲಿಕಾಯಿ ಮರದಲ್ಲಿ ಲಕ್ಷ್ಮೀ ವಾಸ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ನೆಲ್ಲಿಕಾಯಿ ಗಿಡವನ್ನು ಮನೆಯಲ್ಲಿ ನೆಟ್ಟು ಅದರ ಸೇವೆ ಮಾಡಿದರೆ ಹಾಗೂ ಮುಂಜಾನೆ ಮತ್ತು ಸಂಜೆ ಅದಕ್ಕೆ ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಲಕ್ಷ್ಮೀ ವಾಸ ಮಾಡುತ್ತಾಳೆ.
ಬಿಲ್ವ : ಬಿಲ್ವ ಗಿಡದ ಪೂಜೆ ಮಾಡಿದರೆ ದೌರ್ಭಾಗ್ಯ ದೂರವಾಗುತ್ತದೆ. ಅಲ್ಲದೆ ಮನೆಯಲ್ಲಿ ಲಕ್ಷ್ಮೀ ವಾಸ ಮಾಡುತ್ತಾಳೆ ಎನ್ನಲಾಗುತ್ತದೆ.
ತುಳಸಿ : ಯಾವ ಮನೆಯಲ್ಲಿ ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ, ಪೂಜೆ ಮಾಡಲಾಗುತ್ತದೆ. ಆ ಮನೆಯಲ್ಲಿ ಯಾವತ್ತೂ ಹಣದ ಕೊರತೆ ಉಂಟಾಗುವುದಿಲ್ಲ. ಈ ಮನೆಯಲ್ಲಿ ಯಾವಾಗಲೂ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ.
ಅಶ್ವಥ ಮರ : ಈ ಮರಕ್ಕೂ ಸಹ ಹಿಂದೂ ಸಂಪ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಇಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗಿದೆ. ಇದನ್ನು ವಿಶೇಷ ಸಂದರ್ಭಗಳಲ್ಲಿ ಪೂಜಿಸುತ್ತಾರೆ. ಆದರೆ ರಾತ್ರಿ ಸಮಯ ಈ ಮರದ ಬಳಿ ಹೋಗಬಾರದು ಎನ್ನಲಾಗುತ್ತದೆ.
ಅಶೋಕ ಮರ : ಅಶೋಕ ಮರ ಎಲ್ಲಾ ರೀತಿಯ ರೋಗ ಹಾಗೂ ದುಃಖವನ್ನು ನಿವಾರಣೆ ಮಾಡುತ್ತದೆ. ಏನಾದರೂ ವಿಶೇಷ ಮನೋಕಾಮನೆ ಇಟ್ಟುಕೊಂಡಿದ್ದರೆ ಅಶೋಕ ವೃಕ್ಷಕ್ಕೆ ಪೂಜೆ ಮಾಡಿದರೆ ಫಲ ನೀಡುತ್ತದೆ.
ಬಾಳೆಕಾಯಿ ಗಿಡ : ಮನೆಯಲ್ಲಿ ಬಾಳೆಹಣ್ಣಿನ ಗಿಡ ಬೆಳೆಸಿ. ಇದರಿಂದ ಮಹಾಲಕ್ಷ್ಮೀ ಮತ್ತು ಭಗವಾನ್ ವಿಷ್ಣು ಸದಾಕಾಲ ಮನೆಯಲ್ಲಿ ವಾಸವಿರುತ್ತಾನೆ ಎಂದು ಪುರಾಣಗಳಲ್ಲಿ ನಂಬಲಾಗಿದೆ