ರಾಜ ರಾಣಿ ಶೋಗೆ ಆ್ಯಂಕರ್ ಫಿಕ್ಸ್, ಕಲರ್ಸ್ ಕನ್ನಡದಲ್ಲಿನ್ನು ಅನುಪಮಾ ಗೌಡದ್ದೇ ಹವಾನಾ?
ಕಲರ್ಸ್ ಕನ್ನಡವಾಹಿನಿಯಲ್ಲಿ ರಾಜ ರಾಣಿ ರೀಲೋಡೆಡ್ ಆರಂಭವಾಗಲಿದ್ದು, ಇದಕ್ಕೆ ಮತ್ತೆ ಅನುಪಮಾ ಗೌಡ ನಿರೂಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ವಿಭಿನ್ನವಾದ ಸೀರಿಯಲ್, ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಇದೀಗ ಮತ್ತೊಂದು ರಿಯಾಲಿಟಿ ಶೋ ಸದ್ಯದಲ್ಲೇ ಆರಂಭವಾಗಲಿದೆ. ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಇದೇ ಜೂನ್ 8 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
ಹೊಸತನದೊಂದಿಗೆ ಮೋಡಿ ಮಾಡಲು ಹೊಸ ಜೋಡಿಗಳ ಜೊತೆ ಬರ್ತಿದೆ ರಾಜಾರಾಣಿ ರೀಲೋಡೆಡ್! ಎನ್ನುವ ಕ್ಯಾಪ್ಶನ್ ನೊಂದಿಗೆ ರಿಯಾಲಿಟಿ ಶೋವಿನ ಪ್ರೋಮೋ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಸೃಜನ್ ಲೋಕೇಶ್ (Srujan Lokesh) ಮತ್ತು ನಟಿ ತಾರಾ (Tara) ಈ ಶೋ ಜಡ್ಜ್ ಗಳಾಗಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಅನುಪಮಾ ಗೌಡ ಮತ್ತೆ ನಿರೂಪಕಿಯಾಗಿ ಧೂಳೆಬ್ಬಿಸಲಿದ್ದಾರೆ.
ಈ ಮೊದಲು ಬಿಡುಗಡೆಯಾದ ಪ್ರೊಮೋದಲ್ಲಿ ಜಡ್ಜ್ ಗಳು ಮತ್ತು ನಿರೂಪಕಿಯನ್ನು ಪರಿಚಯಿಸಲಾಗಿತ್ತು. ತಾರಾ ಅವರು ಏನೋ ಸೃಜಾ ಹೊಸ ಗಾಳಿ ಬೀಸ್ತಿರೋ ಹಾಗಿದೆ ಎಂದಾಗ, ಸೃಜನ್ ನನಗೂ ಹಾಗೆ ಅನಿಸ್ತಿದೆ ಅಂತಾರೆ, ಆವಾಗ ಹಿಂದಿನಿಂದ ಮೆಲ್ಲಗೆ ಬರೋ ಅನುಪಮಾ ಗೌಡ, ಹೊಸಬಳೇನು ಅಲ್ಲ, ಎಷ್ಟು ವರ್ಷಗಳಿಂದ ಇಲ್ಲೇ ಇದ್ದೀನಿ ಎನ್ನುತ್ತಾರೆ.
ಸೃಜನ್ ಅನುಪಮಾ ಕಾಲೆಳೆಯುತ್ತಾ ಅದೆಲ್ಲೋ ಹೋಗ್ ಬಂದ್ರಿ ಎನ್ನುತ್ತಾರೆ, ಅದಕ್ಕೆ ಅನುಪಮಾ ಎಲ್ಲೋ ಸ್ವಲ್ಪ ಹೊರಗೆ ಹೋಗಿ ಬಂದೆ, ಅದಕ್ಕೆ ಮನೆಗೆ ಸೇರಿಸಲ್ವಾ? ಎಂದಿದ್ದಾರೆ. ಅದಕ್ಕೆ ತಾರಾ ಅವರು ಹೋಗ್ಲಿ ಬಿಡು ಬಂದಿದ್ದಾಳಲ್ಲ ಎನ್ನುತ್ತ ಈ ಸೀಸನ್ ಹೇಗಿರಲಿದೆ ಅನ್ನೋದನ್ನು ಕಾದು ನೋಡಬೇಕು ಎನ್ನುವಂತೆ ತೋರಿಸಿದ್ದಾರೆ.
ಕಲರ್ಸ್ ಕನ್ನಡದಲ್ಲೇ ನಿರೂಪಕಿಯಾಗಿದ್ದ ಅನುಪಮಾ ಗೌಡ (Anupama Gowda), ಕಳೆದ ಕೆಲವು ಸಮಯದಿಂದ ಸುವರ್ಣ ಜಾಕ್ ಪಾಟ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ರು, ಇದೀಗ ಮತ್ತೆ ಕಲರ್ಸ್ ಕನ್ನಡಕ್ಕೆ ಹಿಂತಿರುಗಿ ಬಂದಿದ್ದಾರೆ. ಅನುಪಮಾ ಮತ್ತೆ ಬಂದಿರೋದು ಅಭಿಮಾನಿಗಳಿಗೂ ಖುಷಿಯಾಗಿದ್ದು, ಅನುಪಮಾ ಇದ್ರೆನೆ ರಾಜಾ ರಾಣಿ ಶೋಗೆ ಒಂದು ಕಳೆ ಎಂದಿದ್ದಾರೆ.
ಅನುಪಮಾ ನಿರೂಪಕಿಯಾಗಿದ್ದಾರೆ ಅಂದ್ರೆ, ಈ ಸೀಸನ್ ಅರ್ಧ ಗೆದ್ದಂಗೆ ಎಂದು ಕೆಲವರು ಹೇಳಿದರೆ, ಹೆಚ್ಚಿನ ಜನರು ಅನುಪಮಾರನ್ನು ಮತ್ತೆ ಕಲರ್ಸ್ ಕನ್ನಡದಲ್ಲಿ ನೋಡೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರೊಮೋ ತುಂಬಾ ಕ್ಯೂಟ್ ಆಗಿದೆ ಅಂತಾನೂ ಜನ ಹೇಳ್ತಿದ್ದಾರೆ. ಇನ್ನು ಈ ಸೀಸನ್ ಹೇಗಿರಲಿದೆ ಎನ್ನುವ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಯಾವುದಕ್ಕೂ ಜೂನ್ 8ರವರೆಗೂ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.